AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿನೀರಿಗೆ ಬಿದ್ದು 7 ತಿಂಗಳ ಮಗು ಸಾವು; ಮಧುರೈನಲ್ಲೊಂದು ಹೃದಯವಿದ್ರಾವಕ ಘಟನೆ!

ತಮಿಳುನಾಡಿನ ಮಧುರೈನಲ್ಲಿ ದುರಂತ ಘಟನೆಯೊಂದು ನಡೆದಿದೆ. ಬಿಸಿನೀರಿಗೆ ಬಿದ್ದು 7 ತಿಂಗಳ ಶಿಶು ಸಾವನ್ನಪ್ಪಿದೆ. ಮಧುರೈನಲ್ಲಿ ಹಾಸಿಗೆಯ ಮೇಲೆ ಮಲಗಿದ್ದ 7 ತಿಂಗಳ ಹೆಣ್ಣು ಮಗು ಕುದಿಯುವ ನೀರಿನೊಳಗೆ ಬಿದ್ದಿದೆ. ಆ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆ ಮಗು ದುರಂತವಾಗಿ ಸಾವನ್ನಪ್ಪಿದೆ. ಈ ಘಟನೆ ನಡೆದಿದ್ದು ಹೇಗೆ? ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಬಿಸಿನೀರಿಗೆ ಬಿದ್ದು 7 ತಿಂಗಳ ಮಗು ಸಾವು; ಮಧುರೈನಲ್ಲೊಂದು ಹೃದಯವಿದ್ರಾವಕ ಘಟನೆ!
Newborn
ಸುಷ್ಮಾ ಚಕ್ರೆ
|

Updated on:Nov 04, 2025 | 10:43 PM

Share

ಮಧುರೈ, ನವೆಂಬರ್ 4: ತಮಿಳುನಾಡಿನಲ್ಲೊಂದು (Tamil Nadu) ದುರಂತ ಘಟನೆ ನಡೆದಿದೆ. ಮಧುರೈನಲ್ಲಿ 7 ತಿಂಗಳ ಮಗುವೊಂದು ಬಿಸಿ ನೀರಿಗೆ ಬಿದ್ದ ಘಟನೆ ತೀವ್ರ ಆಘಾತವನ್ನುಂಟು (Shocking News) ಮಾಡಿದೆ. ಹಸುಗೂಸನ್ನು ಮಂಚದ ಹಾಸಿಗೆಯಲ್ಲಿ ಮಲಗಿಸಲಾಗಿತ್ತು. ಆ ಮಂಚದ ಬಳಿಯೇ ನೀರು ಬಿಸಿ ಮಾಡಲೆಂದು ವಾಟರ್ ಹೀಟರ್ ಇಡಲಾಗಿತ್ತು. ಸ್ನಾನಕ್ಕೆ ನೀರು ಕುದಿಸಲು ಇಡಲಾಗಿತ್ತು. ಈ ವೇಳೆ ಆ ಮಗು ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ದುರಂತವಾಗಿ ಸಾವನ್ನಪ್ಪಿದೆ.

ಸೇತುಪತಿ ಮಧುರೈ ಜಿಲ್ಲೆಯ ಮಾಡಕುಲಂ ಪ್ರದೇಶದವರು. ಅವರ ಪತ್ನಿ ವಿಜಯಲಕ್ಷ್ಮಿ. ಈ ದಂಪತಿಗೆ 7 ತಿಂಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಅಕ್ಟೋಬರ್ 27ರಂದು ವಿಜಯಲಕ್ಷ್ಮಿ ತನ್ನ ಮಗುವನ್ನು ಹಾಸಿಗೆಯಲ್ಲಿ ಮಲಗಿಸಿ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಹಾಸಿಗೆಯ ಬಳಿ ವಾಟರ್ ಹೀಟರ್ ಹಾಕಿ ಸ್ನಾನಕ್ಕಾಗಿ ನೀರನ್ನು ಬಿಸಿ ಮಾಡಲು ಇಟ್ಟಿದ್ದರು.

ಇದನ್ನೂ ಓದಿ: Viral: ಬಾತ್ ರೂಮ್‌ನಲ್ಲೇ ಹೆರಿಗೆ; ನವಜಾತ ಶಿಶುವನ್ನು ಬಕೆಟ್‌ನಲ್ಲೇ ತುಂಬಿಸಿಟ್ಟು ಎಸ್ಕೇಪ್ ಆದ ಬಾಣಂತಿ

ಈ ಸಂದರ್ಭದಲ್ಲಿ ಹಾಸಿಗೆಯಲ್ಲಿ ಮಲಗಿದ್ದ ಮಗು ಕುದಿಯುವ ನೀರಿಗೆ ಬಿದ್ದಿತು. ಇದರಿಂದಾಗಿ ಮಗು ಕಿರುಚುತ್ತಾ ಅಳತೊಡಗಿತು. ಗಾಬರಿಯಾದ ಅಮ್ಮ ಓಡಿಬರುವಷ್ಟರಲ್ಲಿ ಮಗು ನೀರಿನೊಳಗೆ ಬಿದ್ದಿತ್ತು. ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಕೂಡ ಓಡಿಬಂದರು. ತಕ್ಷಣ ಆ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಇದನ್ನೂ ಓದಿ: ಉತ್ತರ ಪ್ರದೇಶ: 15 ದಿನದ ಹೆಣ್ಣು ಶಿಶುವಿನ ಜೀವಂತ ಸಮಾಧಿ, ಆದರೂ ಬದುಕಿ ಬಂದಿದ್ಹೇಗೆ?

ಆಸ್ಪತ್ರೆಗೆ ದಾಖಲಾಗಿದ್ದ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲ ನೀಡದೆ ಮಗು ದುರಂತವಾಗಿ ಸಾವನ್ನಪ್ಪಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಗುವಿನ ತಾಯಿಯ ವಿಚಾರಣೆ ನಡೆಸುತ್ತಿದ್ದಾರೆ. ಸಣ್ಣದೊಂದು ನಿರ್ಲಕ್ಷ್ಯದಿಂದ 7 ತಿಂಗಳ ಮಗುವಿನ ಪ್ರಾಣವೇ ಹೋಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:39 pm, Tue, 4 November 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ