ಮಹಾಕುಂಭ ಕಾಲ್ತುಳಿತ: ಪ್ರಯಾಗ್ರಾಜ್ಗೆ ಬರುತ್ತಿದ್ದ ರೈಲುಗಳ ಮಾರ್ಗ ಬದಲಾವಣೆ, ವಿಶೇಷ ರೈಲುಗಳು ರದ್ದು
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದ ವೇಳೆ ಕಾಲ್ತುಳಿತ ಉಂಟಾಗಿರುವ ಕಾರಣ, ಜನಜಂಗುಳಿ ನಿಯಂತ್ರಿಸಲು ಹಲವು ವಿಶೇಷ ರೈಲುಗಳನ್ನು ರದ್ದುಗೊಳಿಸಲಾಗಿದೆ. ಹಾಗೂ ರೈಲು ಮಾರ್ಗವನ್ನು ಬದಲಾಯಿಸಲಾಗಿದೆ. ಪಂಡಿತ್ ದೀನದಯಾಳ್ ಉಪಾಧ್ಯಾಯ ಜಂಕ್ಷನ್‌ನಿಂದ ಪ್ರಯಾಗರಾಜ್‌ಗೆ ಹೋಗುವ ಮಹಾಕುಂಭಮೇಳದ ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಪಂಡಿತ್ ದೀನದಯಾಳ್ ಉಪಾಧ್ಯಾಯ ಜಂಕ್ಷನ್‌ನಿಂದ ಪ್ರಯಾಗರಾಜ್‌ಗೆ ಹೋಗುವ ಮಹಾಕುಂಭಮೇಳದ ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ.
![ಮಹಾಕುಂಭ ಕಾಲ್ತುಳಿತ: ಪ್ರಯಾಗ್ರಾಜ್ಗೆ ಬರುತ್ತಿದ್ದ ರೈಲುಗಳ ಮಾರ್ಗ ಬದಲಾವಣೆ, ವಿಶೇಷ ರೈಲುಗಳು ರದ್ದು](https://images.tv9kannada.com/wp-content/uploads/2025/01/train-2025-01-29t095443.288.jpg?w=1280)
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ಶುರುವಾಗಿದೆ. ಇಂದು ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪವಿತ್ರ ಸ್ನಾನ ಮಾಡಲು ಸಂಗಮಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಕಾಲ್ತುಳಿತ ಉಂಟಾಗಿ ಹಲವರಿಗೆ ಗಾಯಗಳಾಗಿವೆ. ಈ ನಿಟ್ಟಿನಲ್ಲಿ ಹಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದ್ದು, ಇನ್ನೂ ಹಲವು ವಿಶೇಷ ರೈಲುಗಳನ್ನು ರದ್ದುಗೊಳಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪಂಡಿತ್ ದೀನದಯಾಳ್ ಉಪಾಧ್ಯಾಯ ಜಂಕ್ಷನ್‌ನಿಂದ ಪ್ರಯಾಗರಾಜ್‌ಗೆ ಹೋಗುವ ಮಹಾಕುಂಭಮೇಳದ ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ವಿವಿಧ ಮಾರ್ಗಗಳಲ್ಲಿ ಸಂಚರಿಸುವ ಕುಂಭಮೇಳದ ಉಳಿದ ವಿಶೇಷ ರೈಲುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಪಂಡಿತ್ ದೀನದಯಾಳ್ ಉಪಾಧ್ಯಾಯ ಜಂಕ್ಷನ್‌ನಿಂದ ಪ್ರಯಾಗರಾಜ್‌ಗೆ ಬರುವ ಕುಂಭಮೇಳದ ವಿಶೇಷ ರೈಲುಗಳನ್ನು ಮಾತ್ರ ನಿಲ್ಲಿಸಲಾಗಿದೆ. ಆದರೆ ಸಾಮಾನ್ಯ ರೈಲುಗಳು ಓಡುತ್ತಿವೆ.
ಮುಂದಿನ ಆದೇಶದವರೆಗೆ ವಿಶೇಷ ರೈಲಿನ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ ಎಂದು ಪಂಡಿತ್ ದೀನದಯಾಳ್ ಉಪಾಧ್ಯಾಯ ರೈಲ್ವೆ ವಿಭಾಗದ ವಾಣಿಜ್ಯ ವ್ಯವಸ್ಥಾಪಕ ಮನೀಶ್ ಕುಮಾರ್ ತಿಳಿಸಿದ್ದಾರೆ. ಕುಂಭಮೇಳದ ವಿಶೇಷ ರೈಲುಗಳು ಸದ್ಯಕ್ಕೆ ತಾತ್ಕಾಲಿಕವಾಗಿ ಮುಚ್ಚಲ್ಪಡುತ್ತವೆ. ನಿಯಮಿತ ರೈಲುಗಳ ಓಡಾಟ ಮುಂದುವರೆಯಲಿದೆ. ಪ್ರಯಾಗ್‌ರಾಜ್‌ನಲ್ಲಿ ಜನದಟ್ಟಣೆ ಹೆಚ್ಚಾದ ಕಾರಣ ವಿಶೇಷ ರೈಲನ್ನು ನಿಲ್ಲಿಸಲಾಗಿದೆ.
ಮತ್ತಷ್ಟು ಓದಿ: Video: ಮಹಾಕುಂಭ ಮೇಳದಲ್ಲಿ ಕಾಲ್ತುಳಿತ, ಹಲವು ಮಂದಿಗೆ ಗಂಭೀರ ಗಾಯ
ಪ್ರಯಾಗ್‌ರಾಜ್ ಮಹಾಕುಂಭದಲ್ಲಿ ಕಾಲ್ತುಳಿತದ ನಂತರ, ಆಡಳಿತವು ಅಲರ್ಟ್ ಮೋಡ್‌ಗೆ ಬಂದಿದೆ. ಪ್ರಯಾಗ್‌ರಾಜ್ ಜಂಕ್ಷನ್‌ನಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್) ಮತ್ತು ಪೊಲೀಸ್ ಪಡೆಗಳ ನಿಯೋಜನೆಯನ್ನು ಹೆಚ್ಚಿಸಲಾಗಿದೆ. ಭಕ್ತರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬಿಗಿ ಬಂದೋಬಸ್ತ್ ಮಾಡಲಾಗಿದೆ. ಮೌನಿ ಅಮವಾಸ್ಯೆ ಸ್ನಾನಕ್ಕೆ ಬರುವ ಭಕ್ತರನ್ನು ಸುರಕ್ಷಿತವಾಗಿ ಸಂಗಮಕ್ಕೆ ಸಾಗಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಇಲ್ಲಿಯವರೆಗೆ 13 ಕೋಟಿಗೂ ಹೆಚ್ಚು ಭಕ್ತರು ಮಹಾಕುಂಭದಲ್ಲಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಮೌನಿ ಅಮಾವಾಸ್ಯೆಯಂದು ಸುಮಾರು 10 ಕೋಟಿ ಭಕ್ತರು ಪವಿತ್ರ ಸ್ನಾನಕ್ಕೆ ಆಗಮಿಸಿದ್ದಾರೆ. ಹೇಳಿಕೆಯ ಪ್ರಕಾರ, ಜನವರಿ 25 ರಿಂದ, ಪ್ರತಿದಿನ ಸುಮಾರು ಒಂದು ಕೋಟಿ ಯಾತ್ರಿಕರು ಮಹಾಕುಂಭಕ್ಕೆ ಬರಲು ಪ್ರಾರಂಭಿಸಿದ್ದಾರೆ.
ಮೌನಿ ಅಮಾವಾಸ್ಯೆಯ ದಿನದಂದು ಪ್ರಯಾಗ್‌ರಾಜ್ ಜಂಕ್ಷನ್‌ಗೆ ನಗರದ ಬದಿಯ ಬಾಗಿಲಿನಿಂದ ಮತ್ತು ಪ್ಲಾಟ್‌ಫಾರ್ಮ್ ಸಂಖ್ಯೆ 1 ರಿಂದ ಮಾತ್ರ ಪ್ರವೇಶ ನೀಡಲಾಗುವುದು ಎಂದು ಹೇಳಲಾಗಿದೆ. ನಿರ್ಗಮನವು ಸಿವಿಲ್ ಲೈನ್ಸ್ ಮತ್ತು ಪ್ಲಾಟ್‌ಫಾರ್ಮ್ ಸಂಖ್ಯೆ 6 ರಿಂದ ಮಾತ್ರ ಇರುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:56 am, Wed, 29 January 25