ಇಂಡಿಗೋ ವಿಮಾನ ಬೆಂಗಳೂರಿಗೆ ಟೇಕ್ ಆಫ್ ಆಗುವ ಹೊತ್ತಲ್ಲಿ ಎಮರ್ಜೆನ್ಸಿ ಎಕ್ಸಿಟ್ ತೆರೆದ ಪ್ರಯಾಣಿಕ
ಇಂಡಿಗೋ ವಿಮಾನವು ರಾಜಸ್ಥಾನದಿಂದ ಬೆಂಗಳೂರಿಗೆ ಟೇಕ್ ಆಫ್ ಆಗುವ ಹೊತ್ತಲ್ಲಿ ಪ್ರಯಾಣಿಕರೊಬ್ಬರು ಎಮರ್ಜೆನ್ಸಿ ಎಕ್ಸಿಟ್ ತೆರೆದಿರುವ ಘಟನೆ ವರದಿಯಾಗಿದೆ. ವಿಮಾನವು ಬೆಳಗ್ಗೆ 10.10 ಹಾರಾಟ ಆರಂಭಿಸಬೇಕಿತ್ತು, ಆದರೆ ಇದ್ದಕ್ಕಿದ್ದಂತೆ, ಪ್ರಯಾಣಿಕರೊಬ್ಬರು ಫ್ಲಾಪ್ ಅನ್ನು ಎಳೆದು ತುರ್ತು ನಿರ್ಗಮನ ದ್ವಾರವನ್ನು ತೆರೆದರು. ಈ ಘಟನೆಯ ನಂತರ, ವಿಮಾನದಲ್ಲಿ ಗೊಂದಲ, ಭಯ ಸೃಷ್ಟಿಯಾಗಿತ್ತು. ಪ್ರಯಾಣಿಕನನ್ನು ಬಂಧಿಸಿ ಸಿಐಎಸ್‌ಎಫ್‌ಗೆ ಒಪ್ಪಿಸಲಾಗಿದೆ. ಆಕ್ಸಿಸ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿರುವ ಸಿರಾಜ್ ಕಿದ್ವಾಯಿ ಅವರು ತಪ್ಪಾಗಿ ಫ್ಲಾಪ್ ಅನ್ನು ಎಳೆದಿದ್ದಾರೆ ಅವರಿಗೆ ಮಾಹಿತಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
![ಇಂಡಿಗೋ ವಿಮಾನ ಬೆಂಗಳೂರಿಗೆ ಟೇಕ್ ಆಫ್ ಆಗುವ ಹೊತ್ತಲ್ಲಿ ಎಮರ್ಜೆನ್ಸಿ ಎಕ್ಸಿಟ್ ತೆರೆದ ಪ್ರಯಾಣಿಕ](https://images.tv9kannada.com/wp-content/uploads/2025/01/indigo-17.jpg?w=1280)
ಇಂಡಿಗೋ ವಿಮಾನ ಇನ್ನೇನು ಟೇಕ್ ಆಫ್ ಆಗಬೇಕು ಎನ್ನುವ ಹೊತ್ತಲ್ಲಿ ಪ್ರಯಾಣಿಕರೊಬ್ಬರು ಎಮರ್ಜೆನ್ಸಿ ಎಕ್ಸಿಟ್ ತೆರೆದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ಥಾನದ ಜೋಧ್‌ಪುರದಿಂದ ಇಂಡಿಗೋ ವಿಮಾನ ಬೆಂಗಳೂರಿಗೆ ಟೇಕ್ ಆಫ್ ಆಗಲು ಸಿದ್ಧವಾಗಿತ್ತು. ಎಲ್ಲಾ ಪ್ರಯಾಣಿಕರು ವಿಮಾನವನ್ನು ಹತ್ತಿದ್ದರು ಮತ್ತು ಕ್ಯಾಬಿನ್ ಸಿಬ್ಬಂದಿ ವಿಮಾನ ಸುರಕ್ಷತಾ ಸೂಚನೆಗಳನ್ನು ಪ್ರಾರಂಭಿಸಿದರು.
ವಿಮಾನವು ಬೆಳಗ್ಗೆ 10.10 ಹಾರಾಟ ಆರಂಭಿಸಬೇಕಿತ್ತು, ಆದರೆ ಇದ್ದಕ್ಕಿದ್ದಂತೆ, ಪ್ರಯಾಣಿಕರೊಬ್ಬರು ಫ್ಲಾಪ್ ಅನ್ನು ಎಳೆದು ತುರ್ತು ನಿರ್ಗಮನ ದ್ವಾರವನ್ನು ತೆರೆದರು. ಈ ಘಟನೆಯ ನಂತರ, ವಿಮಾನದಲ್ಲಿ ಗೊಂದಲ, ಭಯ ಸೃಷ್ಟಿಯಾಗಿತ್ತು. ಪ್ರಯಾಣಿಕನನ್ನು ಬಂಧಿಸಿ ಸಿಐಎಸ್‌ಎಫ್‌ಗೆ ಒಪ್ಪಿಸಲಾಗಿದೆ. ಆಕ್ಸಿಸ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿರುವ ಸಿರಾಜ್ ಕಿದ್ವಾಯಿ ಅವರು ತಪ್ಪಾಗಿ ಫ್ಲಾಪ್ ಅನ್ನು ಎಳೆದಿದ್ದಾರೆ ಅವರಿಗೆ ಮಾಹಿತಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ತುರ್ತು ನಿರ್ಗಮನ ಗೇಟ್ ತೆರೆದ ನಂತರ, ಪೈಲಟ್‌ಗೆ ನೇರ ಸಂದೇಶವನ್ನು ನೀಡಲಾಯಿತು ಮತ್ತು ನಂತರ ಭದ್ರತಾ ಅಧಿಕಾರಿಗಳು ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದರು. ಈ ಘಟನೆಯನ್ನು ವಿವರಿಸಿರುವ ಇಂಡಿಗೋ ಅಧಿಕಾರಿಗಳು, ಜೋಧ್‌ಪುರದಿಂದ ಬೆಂಗಳೂರಿಗೆ 6E 6033 ವಿಮಾನವು ಹೊರಡುವ ಮೊದಲು ಸುರಕ್ಷತಾ ಬ್ರೀಫಿಂಗ್ ಸಮಯದಲ್ಲಿ ಯಾಣಿಕರೊಬ್ಬರು ತುರ್ತು ನಿರ್ಗಮನದ ಫ್ಲಾಪ್ ಅನ್ನು ತೆರೆದರು. ಪ್ರಯಾಣಿಕನನ್ನು ಕೆಳಗಿಳಿಸಿ ಕಾನೂನಿಗೆ ಒಪ್ಪಿಸಲಾಯಿತು.
ಮತ್ತಷ್ಟು ಓದಿ: ಆಗಸದಲ್ಲಿ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ ಪ್ರಯಾಣಿಕ
ವಿಮಾನದಲ್ಲಿ ಇತರ ಪ್ರಯಾಣಿಕರಿಗೆ ಉಂಟಾದ ಅನನುಕೂಲತೆಗಾಗಿ ನಾವು ವಿಷಾದಿಸುತ್ತೇವೆ ಮತ್ತು ನಮ್ಮ ಎಲ್ಲಾ ಕಾರ್ಯಾಚರಣೆಗಳಲ್ಲಿ ಸುರಕ್ಷತೆಯ ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಮ್ಮ ಬದ್ಧತೆಯನ್ನು ಕಾಯ್ದುಕೊಳ್ಳುತ್ತೇವೆ ಎಂದು ಹೇಳಿದೆ.
ಜೋಧ್‌ಪುರ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ಪ್ರಯಾಣಿಕರನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆಯಿಂದಾಗಿ ಟೇಕ್ ಆಫ್ ಆಗಲು 20 ನಿಮಿಷಗಳ ಕಾಲ ವಿಳಂಬವಾಯಿತು ಮತ್ತು ವಿಮಾನದಲ್ಲಿ ಆತಂಕ ಸೃಷ್ಟಿಯಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:45 am, Wed, 29 January 25