Watch Video: ಹೋಟೆಲ್ನಲ್ಲಿದ್ದ ಆಲೂಗಡ್ಡೆಯ ಬಾಕ್ಸ್‌ನಲ್ಲಿ ದೈತ್ಯ ಹೆಬ್ಬಾವು ಪತ್ತೆ
ಹೋಟೆಲ್ನಲ್ಲಿದ್ದ ಆಲೂಗಡ್ಡೆಯ ಬಾಕ್ಸ್‌ನಲ್ಲಿ ಹೆಬ್ಬಾವು ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಲೋಹರಾ ಗ್ರಾಮದ ಹೋಟೆಲ್‌ನಲ್ಲಿ ಇರಿಸಲಾಗಿದ್ದ ಆಲೂಗಡ್ಡೆ ಬಾಕ್ಸ್‌ನಲ್ಲಿ ಹಾವು ಪತ್ತೆಯಾಗಿದೆ. ಕೆಲವು ಆಲೂಗಡ್ಡೆಗಳ ಮೇಲೆ ಹಾವು ಮಲಗಿರುವ ವಿಡಿಯೋ ವೈರಲ್ ಆಗಿದೆ.
ಮಹಾರಾಷ್ಟ್ರದ ಚಂದ್ರಾಪುರದ ಹೋಟೆಲ್‌ವೊಂದರಲ್ಲಿ ಆಲೂಗಡ್ಡೆ ಬಾಕ್ಸ್‌ನಲ್ಲಿ 8 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಲೋಹರಾ ಗ್ರಾಮದ ಹೋಟೆಲ್‌ನಲ್ಲಿ ಇರಿಸಲಾಗಿದ್ದ ಆಲೂಗಡ್ಡೆ ಬಾಕ್ಸ್‌ನಲ್ಲಿ ಹಾವು ಪತ್ತೆಯಾಗಿದೆ. ಆಲೂಗಡ್ಡೆಗಳ ಮೇಲೆ ಹಾವು ಮಲಗಿರುವ ವಿಡಿಯೋ ವೈರಲ್ ಆಗಿದೆ.
ಹೋಟೆಲ್ ಸಿಬ್ಬಂದಿಯೊಬ್ಬರು ಅಡುಗೆಗೆಂದು ಆಲೂಗಡ್ಡೆ ತೆಗೆದುಕೊಳ್ಳಲು ಹೋದಾಗ ಹೆಬ್ಬಾವು ಕಾಣಿಸಿಕೊಂಡಿದೆ. ಹಾವನ್ನು ಕಂಡ ಸಿಬ್ಬಂದಿ ಭಯದಿಂದ ಹೊರಗೆ ಓಡಿ ಬಂದಿದ್ದಾರೆ.
ಬಾಕ್ಸ್‌ನಲ್ಲಿ ಹಾವು ಇದೆ ಎಂಬ ಸುದ್ದಿ ತಿಳಿದ ಹೋಟೆಲ್‌ನಲ್ಲಿ ಗೊಂದಲ ಉಂಟಾಗಿತ್ತು. ಹೋಟೆಲ್ ಮಾಲೀಕರು ಹಾವು ಹಿಡಿಯುವವರಿಗೆ ಕರೆ ಮಾಡಿದ ನಂತರ ಅದನ್ನು ರಕ್ಷಿಸಿ ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು. ಒಬ್ಬ ವ್ಯಕ್ತಿಯು ಕಾಡಿನಲ್ಲಿ ಜಲಮೂಲದ ಬಳಿ ಹೆಬ್ಬಾವನ್ನು ಬಿಡುತ್ತಿರುವುದನ್ನು ಕಾಣಬಹುದು.
ಮತ್ತಷ್ಟು ಓದಿ:
सब्जी बनाने के लिए आलू लेने गया था कर्मचारी..
महाराष्ट्र: चंद्रपुर शहर के पास लोहारा के एक होटल में आलू के डिब्बे में 8 फीट बड़ा अजगर मिलने से सनसनी फैल गई. इसकी सूचना होटल मालिक को दी गई, जिसके बाद सर्प मित्र को बुलाकर अजगर को पकड़ उसे लोहारा जंगल में छोड़ दिया गया.… pic.twitter.com/rkrDVHXh1w
— Live Dainik (@Live_Dainik) September 11, 2024
ಕೆಲವು ದಿನಗಳ ಹಿಂದೆ, ಲಕ್ನೋದ ಪವರ್ ಹೌಸ್‌ನಲ್ಲಿ ದೈತ್ಯ ಹೆಬ್ಬಾವು ಕಾಣಿಸಿಕೊಂಡಿದ್ದು, ಜನರಲ್ಲಿ ಭಯ ಹುಟ್ಟಿಸಿತ್ತು. ಹೆಬ್ಬಾವನ್ನು ರಕ್ಷಿಸಲು ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕಾಯಿತು. ಜುಲೈನಲ್ಲಿ ಆಗ್ರಾ ಕೋಟೆ ಆವರಣದ ಶೌಚಾಲಯದಿಂದ ಆರು ಅಡಿ ಉದ್ದದ ಹಾವನ್ನು ರಕ್ಷಿಸಲಾಗಿತ್ತು.
ಟಾಯ್ಲೆಟ್ ಸೀಟಿನಲ್ಲಿ ಹಾವು ಸುತ್ತಿಕೊಂಡಿರುವುದನ್ನು ಕಂಡು ಸಿಬ್ಬಂದಿ ಹಾವನ್ನು ರಕ್ಷಿಸಲು ಎನ್‌ಜಿಒಗೆ ಕರೆ ಮಾಡಿದ್ದಾರೆ. ಮಳೆಗಾಲದಲ್ಲಿ ಜನವಸತಿಯಲ್ಲಿ ಪ್ರದೇಶಗಳಲ್ಲಿ ಹಾವುಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:42 pm, Wed, 11 September 24