ರಾಷ್ಟ್ರ ವಿರೋಧಿ ಹೇಳಿಕೆ ನೀಡುವುದು ರಾಹುಲ್ ಗಾಂಧಿಗೆ ಅಭ್ಯಾಸವಾಗಿಬಿಟ್ಟಿದೆ: ಅಮಿತ್ ಶಾ
ಸಂಸದ ರಾಹುಲ್ ಗಾಂಧಿಗೆ ದೇಶ ವಿರೋಧಿ ಹೇಳಿಕೆಗಳನ್ನು ನೀಡುವುದು ಅಭ್ಯಾಸವಾಗಿಬಿಟ್ಟಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ದೇಶ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಹುಲ್ ಗಾಂಧಿಗೆ ದೇಶದ ಜನರ ಭಾವನೆಗಳಿಗೆ ಧಕ್ಕೆ ತರುವುದೇ ಕೆಲಸ ಎಂದು ಹೇಳಿದರು.
ದೇಶವನ್ನು ವಿಭಜಿಸುವ ಶಕ್ತಿಗಳ ಪರ ನಿಲ್ಲುವುದು, ರಾಷ್ಟ್ರ ವಿರೋಧಿ ಹೇಳಿಕೆಗಳನ್ನು ನೀಡುವುದು ರಾಹುಲ್ ಗಾಂಧಿ(Rahul Gandhi) ಮತ್ತು ಕಾಂಗ್ರೆಸ್ಗೆ ಅಭ್ಯಾಸವಾಗಿಬಿಟ್ಟಿದೆ ಎಂದು ಗೃಹ ಸಚಿವ ಅಮಿತ್ ಶಾ(Amit Shah) ಹೇಳಿದ್ದಾರೆ. ಸಂಸದ ರಾಹುಲ್ ಗಾಂಧಿ ಅಮೆರಿಕ ಪ್ರವಾಸದಲ್ಲಿದ್ದು ದೇಶ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶ ವಿರೋಧಿ ಮಾತುಗಳು ಮತ್ತು ಮೀಸಲಾತಿ ವಿರೋಧಿ ಅಜೆಂಡಾ ಆಗಿರಬಹುದು ಅಥವಾ ವಿದೇಶಿ ವೇದಿಕೆಗಳಲ್ಲಿ ಭಾರತ ವಿರೋಧಿ ಹೇಳಿಕೆಗಳನ್ನು ನೀಡುವುದು. ರಾಹುಲ್ ಗಾಂಧಿಗೆ ದೇಶದ ಜನರ ಭಾವನೆಗಳಿಗೆ ಧಕ್ಕೆ ತರುವುದೇ ಕೆಲಸ ಎಂದು ಹೇಳಿದರು.
ರಾಹುಲ್ ಗಾಂಧಿ ಹೇಳಿಕೆಯು ಪ್ರಾದೇಶಿಕತೆ, ಧರ್ಮ ಮತ್ತು ಭಾಷಿಕ ಭಿನ್ನಾಭಿಪ್ರಾಯದ ರೀತಿಯಲ್ಲಿ ಬಿರುಕುಗಳನ್ನು ಸೃಷ್ಟಿಸುವ ಕಾಂಗ್ರೆಸ್‌ನ ರಾಜಕೀಯವನ್ನು ಬಹಿರಂಗಪಡಿಸುತ್ತದೆ. ದೇಶದಿಂದ ಮೀಸಲಾತಿಯನ್ನು ಕೊನೆಗೊಳಿಸುವ ಬಗ್ಗೆ ಮಾತನಾಡುವ ಮೂಲಕ ರಾಹುಲ್ ಗಾಂಧಿ ಮತ್ತೊಮ್ಮೆ ಕಾಂಗ್ರೆಸ್‌ನ ಮೀಸಲಾತಿ ವಿರೋಧಿ ಮುಖವನ್ನು ಹೊರತಂದಿದ್ದಾರೆ.
ಅವರ ಮನಸ್ಸಿನಲ್ಲಿದ್ದ ವಿಚಾರಗಳು ಮಾತಿನ ರೂಪದಲ್ಲಿ ಹೊರಬಂದಿವೆ. ಬಿಜೆಪಿ ಇರುವವರೆಗೂ ಮೀಸಲಾತಿಯನ್ನು ಯಾರೂ ರದ್ದು ಮಾಡಲು ಸಾಧ್ಯವಿಲ್ಲ ಮತ್ತು ದೇಶದ ಭದ್ರತೆಯೊಂದಿಗೆ ಆಟವಾಡಲು ಸಾಧ್ಯವಿಲ್ಲ ಎಂದು ನಾನು ರಾಹುಲ್ ಗಾಂಧಿಗೆ ಹೇಳಲು ಬಯಸುತ್ತೇನೆ ಎಂದರು.
ಮತ್ತಷ್ಟು ಓದಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವಾಯತ್ತತೆಯನ್ನು ಎಂದಿಗೂ ಪುನಃಸ್ಥಾಪಿಸಲಾಗುವುದಿಲ್ಲ: ಅಮಿತ್ ಶಾ
ಅಮೆರಿಕ ಪ್ರವಾಸದ ವೇಳೆ ರಾಹುಲ್ ಗಾಂಧಿ ಅಲ್ಲಿನ ಭಾರತೀಯ ಅಮೆರಿಕನ್ ಸಮುದಾಯದ ನೂರಾರು ಜನರೊಂದಿಗೆ ಸಂವಾದ ನಡೆಸಿದರು. ಆರ್ಎಸ್ಎಸ್ ಕೆಲವು ಧರ್ಮಗಳು, ಭಾಷೆಗಳು ಮತ್ತು ಸಮುದಾಯಗಳನ್ನು ಇತರರಿಗಿಂತ ಕೀಳು ಎಂದು ಪರಿಗಣಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
Standing with forces that conspire to divide the country and making anti-national statements have become a habit for Rahul Gandhi and the Congress party. Whether it is supporting the JKNC’s anti-national and anti-reservation agenda in J&K or making anti-India statements on…
— Amit Shah (@AmitShah) September 11, 2024
ಭಾರತದಲ್ಲಿ ಸಿಖ್ಖರಿಗೆ ಪೇಟ ಅಥವಾ ಖಡ ಧರಿಸುವ ಹಕ್ಕಿನ ಬಗ್ಗೆಯೂ ಹೋರಾಟ ನಡೆಯುತ್ತಿದೆ. ರಾಹುಲ್ ಗಾಂಧಿಯವರ ಈ ಹೇಳಿಕೆಗೆ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ಬೆಂಬಲ ನೀಡಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆಯನ್ನು ಸಮರ್ಥಿಸಿಕೊಂಡ ಗುರುಪತ್ವಂತ್ ಸಿಂಗ್ ಪನ್ನು, ರಾಹುಲ್ ಗಾಂಧಿ ತುಂಬಾ ದಿಟ್ಟ ಹೇಳಿಕೆ ನೀಡಿದ್ದಾರೆ.1947ರಿಂದ ಭಾರತದಲ್ಲಿ ಸಿಖ್ಖರು ಎದುರಿಸುತ್ತಿರುವ ದೌರ್ಜನ್ಯವನ್ನು ತೋರಿಸುತ್ತದೆ ಎಂದು ಪನ್ನು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:24 pm, Wed, 11 September 24