ಭಾರತದ ಮರ್ಯಾದೆ ತೆಗೆಯಲೆಂದೇ ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿದ್ದಾರೆ; ಬಿಜೆಪಿ ತಿರುಗೇಟು
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕುರಿತು ಹೇಳಿಕೆ ನೀಡಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಬಿಜೆಪಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ತಿರುಗೇಟು ನೀಡಿದ್ದಾರೆ. ದೇಶದ್ರೋಹಿಯಾದ ರಾಹುಲ್ ಗಾಂಧಿ ಆರ್‌ಎಸ್‌ಎಸ್ ಅನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ನವದೆಹಲಿ: ಆರ್‌ಎಸ್‌ಎಸ್ ಕುರಿತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಭಾರತೀಯ ಜನತಾ ಪಕ್ಷ (ಬಿಜೆಪಿ) ತೀವ್ರ ವಾಗ್ದಾಳಿ ನಡೆಸಿದ್ದು, ಭಾರತದ ಮರ್ಯಾದೆ ತೆಗೆಯಲು ಅವರು ವಿದೇಶಕ್ಕೆ ಹೋಗುತ್ತಾರೆ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಈ ಬಗ್ಗೆ ಮಾತನಾಡಿದ್ದು, ಆರ್‌ಎಸ್‌ಎಸ್ ಬಗ್ಗೆ ತಿಳಿದುಕೊಳ್ಳಲು ರಾಹುಲ್ ಗಾಂಧಿ ಹಲವು ಜನ್ಮಗಳನ್ನು ಎತ್ತಿ ಬರಬೇಕು. ದೇಶದ್ರೋಹಿಯಾದ ಅವರು ಆರ್‌ಎಸ್‌ಎಸ್ ಅನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ವಿರುದ್ಧ ಟೀಕಿಸಿದ್ದಾರೆ.
#WATCH | Delhi: On Rahul Gandhi’s remark on RSS, Union Minister Giriraj Singh says “…If there is any technology to go to his grandmother and ask her about the role of RSS, then go and ask or look in the pages of history. To know about RSS, Rahul Gandhi will have to take many… https://t.co/qrTXXEq5XI pic.twitter.com/khwH42dqBg
— ANI (@ANI) September 9, 2024
ವಿದೇಶಕ್ಕೆ ಹೋಗಿ ದೇಶವನ್ನು ಟೀಕಿಸುವವರು ಆರ್‌ಎಸ್‌ಎಸ್ ಅನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ವಿದೇಶಕ್ಕೆ ಹೋಗುವುದು ಭಾರತಕ್ಕೆ ಅವಮಾನ ಮಾಡಲು ಮಾತ್ರ ಎಂದು ಅನಿಸುತ್ತದೆ. ರಾಹುಲ್ ಗಾಂಧಿಗೆ ಈ ಜನ್ಮದಲ್ಲಿ ಆರ್‌ಎಸ್‌ಎಸ್ ಅರ್ಥವಾಗುವುದಿಲ್ಲ. ಆರ್‌ಎಸ್‌ಎಸ್ ಭಾರತದ ಮೌಲ್ಯಗಳು ಮತ್ತು ಸಂಸ್ಕೃತಿಯಿಂದ ಹುಟ್ಟಿದೆ ಎಂದು ಅವರು ಹೇಳಿದ್ದಾರೆ.
VIDEO | “The Constitution says to provide equal rights to people, it says that India is a secular country (on Rahul Gandhi’s remark on RSS during his USA visit). The SC is everyday questioning the investigating agencies but where is the improvement. It is not happening because… pic.twitter.com/8wzaQBf2Vm
— Press Trust of India (@PTI_News) September 9, 2024
ಇದನ್ನೂ ಓದಿ: ಹರ್ಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಜತೆಗೆ ಮೈತ್ರಿ ಸಾಧ್ಯತೆ; ಬಿಜೆಪಿಯನ್ನು ಸೋಲಿಸುವುದೇ ನಮ್ಮ ಆದ್ಯತೆ: ಎಎಪಿ
ರಾಹುಲ್ ಗಾಂಧಿ ಟೀಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಗಿರಿರಾಜ್ ಸಿಂಗ್, ರಾಹುಲ್ ಗಾಂಧಿಗೆ ಅವರ ಅಜ್ಜಿಯ ಬಳಿಗೆ ಹೋಗಿ ಆರ್‌ಎಸ್‌ಎಸ್ ಪಾತ್ರದ ಬಗ್ಗೆ ಕೇಳುವ ತಂತ್ರಜ್ಞಾನವಿದೆಯೇ? ಹಾಗೇನಾದರೂ ಇದ್ದರೆ ಹೋಗಿ ಕೇಳಿ ಅಥವಾ ಇತಿಹಾಸದ ಪುಟಗಳಲ್ಲಿ ನೋಡಿ. ಆರ್‌ಎಸ್‌ಎಸ್ ಬಗ್ಗೆ ತಿಳಿಯಲು ದೇಶದ್ರೋಹಿಯಾದ ರಾಹುಲ್ ಗಾಂಧಿ ಆರ್‌ಎಸ್‌ಎಸ್ ಅನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ ಮತ್ತು ದೇಶವನ್ನು ಟೀಕಿಸುವವರು ಅದರ ಸಾರವನ್ನು ಗ್ರಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
#WATCH | Texas, USA: Lok Sabha LoP and Congress MP Rahul Gandhi says, “The RSS believes that India is one idea and we believe that India is a multiplicity of ideas. We believe that everybody should be allowed to participate, allowed to dream, and should be given space regardless… pic.twitter.com/uHULrGwa6X
— ANI (@ANI) September 9, 2024
ಅಮೆರಿಕದ ಟೆಕ್ಸಾಸ್‌ನಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಆರ್‌ಎಸ್‌ಎಸ್ ಭಾರತದ ಒಂದು ಕಲ್ಪನೆಯನ್ನು ನಂಬುತ್ತದೆ. ಆದರೆ ಕಾಂಗ್ರೆಸ್ ಪಕ್ಷವು ಅದನ್ನು ಬಹುಸಂಖ್ಯೆಯ ವಿಚಾರಗಳೆಂದು ನಂಬುತ್ತದೆ ಎಂದು ಟೀಕಿಸಿದ್ದರು. ಆರ್‌ಎಸ್‌ಎಸ್ ಮಹಿಳೆಯರು ನಿರ್ದಿಷ್ಟ ವಲಯಕ್ಕೆ ಮಾತ್ರಕ್ಕೆ ಸೀಮಿತವಾಗಿರಬೇಕು, ಅವರು ಮನೆಯಲ್ಲಿಯೇ ಇರಬೇಕು, ಅಡುಗೆ ಮಾಡಬೇಕು, ಅವರು ಹೆಚ್ಚು ಮಾತನಾಡಬಾರದು ಎಂದು ನಂಬುತ್ತಾರೆ. ಮಹಿಳೆಯರು ಏನು ಮಾಡಲು ಬಯಸುತ್ತಾರೆಯೋ ಅದನ್ನು ಮಾಡಲು ಅವರಿಗೆ ಅವಕಾಶ ನೀಡಬೇಕು ಎಂದು ನಾವು ನಂಬುತ್ತೇವೆ” ಎಂದು ರಾಹುಲ್ ಗಾಂಧಿ ಹೇಳಿದ್ದರು.
ಇದನ್ನೂ ಓದಿ: ಮಹಿಳೆಯರು ಮನೆಯಲ್ಲಿಯೇ ಇರಬೇಕು ಎಂಬುದು ಆರ್‌ಎಸ್‌ಎಸ್ ನಂಬಿಕೆ; ಅಮೆರಿಕದಲ್ಲಿ ರಾಹುಲ್ ಗಾಂಧಿ ವಾಗ್ದಾಳಿ
ಭಾರತವು ಒಂದು ಕಲ್ಪನೆ ಎಂದು ಆರ್‌ಎಸ್‌ಎಸ್ ನಂಬುತ್ತದೆ. ಭಾರತವು ಅನೇಕ ವಿಚಾರಗಳೆಂದು ನಾವು ನಂಬುತ್ತೇವೆ. ಪ್ರತಿಯೊಬ್ಬರಿಗೂ ಭಾಗವಹಿಸಲು ಅವಕಾಶ ನೀಡಬೇಕು, ಕನಸು ಕಾಣಲು ಅವಕಾಶ ನೀಡಬೇಕು ಮತ್ತು ಅವರ ಜಾತಿ, ಭಾಷೆ, ಧರ್ಮ, ಸಂಪ್ರದಾಯ ಅಥವಾ ಇತಿಹಾಸವನ್ನು ಲೆಕ್ಕಿಸದೆ ಜಾಗವನ್ನು ನೀಡಬೇಕು ಎಂದು ನಾವು ನಂಬುತ್ತೇವೆ ಎಂದಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ