ಮಹಿಳೆಯರು ಮನೆಯಲ್ಲಿಯೇ ಇರಬೇಕು ಎಂಬುದು ಆರ್‌ಎಸ್‌ಎಸ್ ನಂಬಿಕೆ; ಅಮೆರಿಕದಲ್ಲಿ ರಾಹುಲ್ ಗಾಂಧಿ ವಾಗ್ದಾಳಿ
ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ಸಂಸದ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಡಲ್ಲಾಸ್‌ನಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಮಾತನಾಡಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಾಷಿಂಗ್ಟನ್: ಅಮೆರಿಕದಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಆರ್‌ಎಸ್‌ಎಸ್ ಭಾರತವನ್ನು ಒಂದು ಕಲ್ಪನೆ ಎಂದು ನಂಬುತ್ತದೆ, ಆದರೆ ಕಾಂಗ್ರೆಸ್ ಅದನ್ನು ಬಹುವಿಧದ ಕಲ್ಪನೆ ಎಂದು ಪರಿಗಣಿಸುತ್ತದೆ ಎಂದಿದ್ದಾರೆ. ಈ ವೇಳೆ, ಭಾರತದಲ್ಲಿ ನಿರುದ್ಯೋಗದ ಬಗ್ಗೆಯೂ ರಾಹುಲ್ ಗಾಂಧಿ ಮಾತನಾಡಿದ್ದಾರೆ ಮತ್ತು ಚೀನಾದೊಂದಿಗೆ ಭಾರತವನ್ನು ಹೋಲಿಕೆ ಮಾಡಿದ್ದಾರೆ.
ಅಮೆರಿಕದ ಡಲ್ಲಾಸ್‌ನಲ್ಲಿ ಸಾರ್ವಜನಿಕ ಭಾಷಣದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಹರಿಹಾಯ್ದಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ಮತ್ತು ಭಾರತೀಯ ವಲಸಿಗರ ಸದಸ್ಯರನ್ನು ಉದ್ದೇಶಿಸಿ ಮಾಡಿದ ಸಂವಾದದಲ್ಲಿ ವಾಗ್ದಾಳಿ ನಡೆಸಿದ್ದಾರೆ.
#WATCH | Texas, USA: Lok Sabha LoP and Congress MP Rahul Gandhi says, “The RSS believes that India is one idea and we believe that India is a multiplicity of ideas. We believe that everybody should be allowed to participate, allowed to dream, and should be given space regardless… pic.twitter.com/uHULrGwa6X
— ANI (@ANI) September 9, 2024
ಮಹಿಳೆಯರ ಬಗೆಗಿನ ವರ್ತನೆಯು ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವಿನ ಸೈದ್ಧಾಂತಿಕ ಹೋರಾಟದ ಭಾಗವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. “ಬಿಜೆಪಿ ಅಥವಾ ಆರ್‌ಎಸ್‌ಎಸ್ ಮಹಿಳೆಯರು ನಿರ್ದಿಷ್ಟ ವಲಯಕ್ಕೆ ಮಾತ್ರಕ್ಕೆ ಸೀಮಿತವಾಗಿರಬೇಕು, ಅವರು ಮನೆಯಲ್ಲಿಯೇ ಇರಬೇಕು, ಅಡುಗೆ ಮಾಡಬೇಕು, ಅವರು ಹೆಚ್ಚು ಮಾತನಾಡಬಾರದು ಎಂದು ನಂಬುತ್ತಾರೆ. ಮಹಿಳೆಯರು ಏನು ಮಾಡಲು ಬಯಸುತ್ತಾರೆಯೋ ಅದನ್ನು ಮಾಡಲು ಅವರಿಗೆ ಅವಕಾಶ ನೀಡಬೇಕು ಎಂದು ನಾವು ನಂಬುತ್ತೇವೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದನ್ನೂ ಓದಿ: Rahul Gandhi: ಭೂಕುಸಿತ ಪೀಡಿತ ವಯನಾಡಿನ ಪುನರ್ವಸತಿ ಕಾರ್ಯಕ್ಕೆ ತಮ್ಮ 1 ತಿಂಗಳ ಸಂಬಳ ನೀಡಿದ ರಾಹುಲ್ ಗಾಂಧಿ
ಭಾರತವು ಒಂದು ಕಲ್ಪನೆ ಎಂದು ಆರ್‌ಎಸ್‌ಎಸ್ ನಂಬುತ್ತದೆ. ಭಾರತವು ಅನೇಕ ವಿಚಾರಗಳೆಂದು ನಾವು ನಂಬುತ್ತೇವೆ. ಪ್ರತಿಯೊಬ್ಬರಿಗೂ ಭಾಗವಹಿಸಲು ಅವಕಾಶ ನೀಡಬೇಕು, ಕನಸು ಕಾಣಲು ಅವಕಾಶ ನೀಡಬೇಕು ಮತ್ತು ಅವರ ಜಾತಿ, ಭಾಷೆ, ಧರ್ಮ, ಸಂಪ್ರದಾಯ ಅಥವಾ ಇತಿಹಾಸವನ್ನು ಲೆಕ್ಕಿಸದೆ ಜಾಗವನ್ನು ನೀಡಬೇಕು ಎಂದು ನಾವು ನಂಬುತ್ತೇವೆ. ಭಾರತದ ಪ್ರಧಾನಿ ಮೋದಿ ಭಾರತದ ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಭಾರತದಲ್ಲಿ ಲಕ್ಷಾಂತರ ಜನರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಪಾಶ್ಚಿಮಾತ್ಯ ದೇಶಗಳಲ್ಲಿಯೂ ಉದ್ಯೋಗದ ಸಮಸ್ಯೆ ಇದೆ. ಭಾರತದಲ್ಲಿ ಉದ್ಯೋಗ ಸಮಸ್ಯೆ ಇದೆ. ಆದರೆ, ಜಗತ್ತಿನ ಹಲವು ದೇಶಗಳಲ್ಲಿ ಉದ್ಯೋಗದ ಸಮಸ್ಯೆ ಇಲ್ಲ. ಚೀನಾದಲ್ಲಿ ಉದ್ಯೋಗ ಸಮಸ್ಯೆ ಖಂಡಿತ ಇಲ್ಲ. ವಿಯೆಟ್ನಾಂನಲ್ಲಿ ಉದ್ಯೋಗದ ಸಮಸ್ಯೆ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದನ್ನೂ ಓದಿ: ಮಹಿಳೆಯರ ಸುರಕ್ಷತೆ ಬಗ್ಗೆ ರಾಹುಲ್ ಗಾಂಧಿ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ: ಕಿಶನ್ ರೆಡ್ಡಿ
ನೀವು 1940, 50 ಮತ್ತು 60ರ ದಶಕಗಳಲ್ಲಿ ಯುನೈಟೆಡ್ ಸ್ಟೇಟ್ಸ್ ಅನ್ನು ನೋಡಿದರೆ ಅದು ಜಾಗತಿಕ ಉತ್ಪಾದನೆಯ ಕೇಂದ್ರವಾಗಿತ್ತು. ಎಲ್ಲ ಕಾರುಗಳು, ವಾಷಿಂಗ್ ಮಷಿನ್‌ಗಳು, ಟಿವಿಗಳು, ಎಲ್ಲವೂ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಾಡಲ್ಪಟ್ಟಿದೆ. ಬಳಿಕ ಈ ಉತ್ಪಾದನೆಯು ಅಮೆರಿಕದಿಂದ ಸ್ಥಳಾಂತರಗೊಂಡಿತು. ಅದು ಕೊರಿಯಾಕ್ಕೆ ಹೋಯಿತು, ಅಲ್ಲಿಂದ ಜಪಾನ್‌ಗೆ ಹೋಯಿತು. ಅಂತಿಮವಾಗಿ, ಅದು ಚೀನಾಕ್ಕೆ ಹೋಯಿತು. ಇಂದು ನೋಡಿದರೆ ಜಾಗತಿಕ ಉತ್ಪಾದನೆಯಲ್ಲಿ ಚೀನಾ ಮೇಲುಗೈ ಸಾಧಿಸುತ್ತಿದೆ. ಹಾಗಾದರೆ ಏನಾಗಿದೆ? ಪಶ್ಚಿಮ ದೇಶಗಳು, ಅಮೆರಿಕ, ಯುರೋಪ್ ಮತ್ತು ಭಾರತವು ಉತ್ಪಾದನೆಯ ಕಲ್ಪನೆಯನ್ನು ಕೈಬಿಟ್ಟಿದೆ. ಅವರು ಅದನ್ನು ಚೀನಾಕ್ಕೆ ಹಸ್ತಾಂತರಿಸಿದ್ದಾರೆ. ಉತ್ಪಾದನಾ ಕ್ರಿಯೆಯು ಉದ್ಯೋಗಗಳನ್ನು ಸೃಷ್ಟಿಸುತ್ತದೆ. ನಾವು ಏನು ಮಾಡುತ್ತೇವೆ, ಅಮೆರಿಕನ್ನರು ಏನು ಮಾಡುತ್ತಾರೆ, ಪಾಶ್ಚಿಮಾತ್ಯರು ಏನು ಮಾಡುತ್ತಾರೆ ಎಂಬುದನ್ನು ಗಮನಿಸಬೇಕು ಎಂದಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶದಿಂದ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಭಯವು ಜನರಲ್ಲಿ ಮರೆಯಾಗಿದೆ ಎಂದು ಅವರು ಹೇಳಿದ್ದಾರೆ. ಚುನಾವಣಾ ಫಲಿತಾಂಶದ ಕೆಲವೇ ನಿಮಿಷಗಳಲ್ಲಿ ಭಾರತದಲ್ಲಿ ಯಾರೂ ಬಿಜೆಪಿ ಅಥವಾ ಭಾರತದ ಪ್ರಧಾನ ಮಂತ್ರಿಗೆ ಹೆದರುವುದಿಲ್ಲ ಎಂದು ನಾವು ನೋಡಿದ್ದೇವೆ ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ