AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Haryana polls: ಹರ್ಯಾಣ ಚುನಾವಣೆಗೆ ಮೊದಲ ಅಭ್ಯರ್ಥಿ ಪಟ್ಟಿ ಪ್ರಕಟಿಸಿದ ಎಎಪಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ತವರೂರು ಹರ್ಯಾಣದಲ್ಲಿ ಚುನಾವಣಾ ಪೂರ್ವ ಮೈತ್ರಿಗಾಗಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಮಾತುಕತೆ ನಡೆಸಿದ್ದವು. ಎಎಪಿ ಸ್ಪರ್ಧಿಸಲಿರುವ ಸೀಟುಗಳ ಸಂಖ್ಯೆ ಕುರಿತು ಮಾತುಕತೆ ನಡೆದಿದೆ. ಪಿಟಿಐ ವರದಿಯ ಪ್ರಕಾರ, ಎಎಪಿ 10 ಸ್ಥಾನಗಳನ್ನು ಕೇಳುತ್ತಿದೆ ಮತ್ತು ಕಾಂಗ್ರೆಸ್ ಐದು ಸ್ಥಾನಗಳನ್ನು ನೀಡುತ್ತಿದೆ.

Haryana polls: ಹರ್ಯಾಣ ಚುನಾವಣೆಗೆ ಮೊದಲ ಅಭ್ಯರ್ಥಿ ಪಟ್ಟಿ ಪ್ರಕಟಿಸಿದ ಎಎಪಿ
ಸುಶೀಲ್ ಗುಪ್ತಾ
ರಶ್ಮಿ ಕಲ್ಲಕಟ್ಟ
|

Updated on:Sep 09, 2024 | 4:41 PM

Share

ದೆಹಲಿ ಸೆಪ್ಟೆಂಬರ್ 09: ಆಮ್ ಆದ್ಮಿ ಪಕ್ಷ (AAP) ಸೋಮವಾರ ಹರ್ಯಾಣ ವಿಧಾನಸಭಾ ಚುನಾವಣೆಗೆ (Haryana polls) ತನ್ನ 20 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಪಕ್ಷವು ತನ್ನ ಹರ್ಯಾಣ ಘಟಕದ ಉಪಾಧ್ಯಕ್ಷ ಅನುರಾಗ್ ಧಂಡಾ ಅವರನ್ನು ಕಲಾಯತ್‌ನಿಂದ ಮತ್ತು ಇಂದು ಶರ್ಮಾ ಅವರನ್ನು ಭಿವಾನಿಯಿಂದ ಕಣಕ್ಕಿಳಿಸಿದೆ. ಮೆಹಮ್‌ನಿಂದ ವಿಕಾಸ್ ನೆಹ್ರಾ ಮತ್ತು ರೋಹ್ಟಕ್‌ನಿಂದ ಬಿಜೇಂದರ್ ಹೂಡಾ ಅವರನ್ನು ಕಣಕ್ಕಿಳಿಸಲಾಗಿದೆ.  90 ಸದಸ್ಯ ಬಲದ ವಿಧಾನಸಭೆಗೆ ನಾಮಪತ್ರ ಸಲ್ಲಿಸಲು ಸೆಪ್ಟೆಂಬರ್ 12 ಕೊನೆಯ ದಿನವಾಗಿದೆ.

ಎಎಪಿ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ:

ಕ್ರಮ ಸಂಖ್ಯೆ ಕ್ಷೇತ್ರ  ಅಭ್ಯರ್ಥಿ
1 ನರಂಗರ್ ಗುರ್ಪಾಲ್ ಸಿಂಗ್
2 ಕಲಾಯತ್ ಅನುರಾಗ್ ಧಂಧಾ
3 ಪುಂಡ್ರಿ ನರೇಂದ್ರ ಶರ್ಮಾ
4 ಘರೌಂಡ ಜೈಪಾಲ್ ಶರ್ಮಾ
5 ಅಸ್ಸಂದ್ ಅಮಂದೀಪ್ ಜುಂಡ್ಲಾ
6 ಸಮಲ್ಖಾ ಬಿಟ್ಟು ಪಹಲ್ವಾನ್
7 ಉಚ್ಚನ ಕಾಲನ್ ಪವನ್ ಫೌಜಿ
8 ದಾಬ್ವಾಲಿ ಕುಲದೀಪ್ ಗದ್ರಾನಾ
9 ರಾನಿಯಾ ಹ್ಯಾಪಿ ರಾನಿಯಾ
10 ಭಿವಾನಿ ಇಂದು ಶರ್ಮಾ
11 ಮೆಹಮ್ ವಿಕಾಸ್ ನೆಹ್ರಾ
12 ರೋಹ್ಟಕ್ ಬಿಜೆಂದರ್ ಹೂಡಾ
13 ಬಹದುರ್ಗಾ ಕುಲ್ದೀಪ್ ಚಿಕಾರ
14 ಬಡ್ಲಿ ರಣಬೀರ್ ಗುಲಿಯಾ
15 ಬೆರಿ ಸೋನು ಅಹ್ಲಾವತ್ ಶೆರಿಯಾ
16 ಮಹೇಂದ್ರಗಢ ಮನೀಶ್ ಯಾದವ್
17 ನರ್ನಾಲ್ ರವೀಂದರ್ ಮಾತೃ
18 ಬಾದಶಹಪುರ್ ಬೀರ್ ಸಿಂಗ್ ಸರ್ಪಂಚ್
19 ಸೋಹ್ನಾ ಧರ್ಮೆಂದರ್ ಖತಾನಾ
20 ಬಲ್ಲಬ್ಗರ್ ರವೀಂದರ್ ಫೌಜ್ದಾರ್

ಕಾಂಗ್ರೆಸ್-ಎಎಪಿ ಮೈತ್ರಿ ಮಾತುಕತೆಯಲ್ಲಿ ಯಾವುದೇ ಪ್ರಗತಿ ಇಲ್ಲ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ತವರೂರು ಹರ್ಯಾಣದಲ್ಲಿ ಚುನಾವಣಾ ಪೂರ್ವ ಮೈತ್ರಿಗಾಗಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಮಾತುಕತೆ ನಡೆಸಿದ್ದವು. ಎಎಪಿ ಸ್ಪರ್ಧಿಸಲಿರುವ ಸೀಟುಗಳ ಸಂಖ್ಯೆ ಕುರಿತು ಮಾತುಕತೆ ನಡೆದಿದೆ. ಪಿಟಿಐ ವರದಿಯ ಪ್ರಕಾರ, ಎಎಪಿ 10 ಸ್ಥಾನಗಳನ್ನು ಕೇಳುತ್ತಿದೆ ಮತ್ತು ಕಾಂಗ್ರೆಸ್ ಐದು ಸ್ಥಾನಗಳನ್ನು ನೀಡುತ್ತಿದೆ.

ಸಂಜೆಯೊಳಗೆ ಒಪ್ಪಂದವನ್ನು ಅಂತಿಮಗೊಳಿಸದಿದ್ದರೆ ಎಲ್ಲಾ 90 ಸ್ಥಾನಗಳ ಅಭ್ಯರ್ಥಿಗಳ ಹೆಸರನ್ನು ತಮ್ಮ ಪಕ್ಷವು ಬಿಡುಗಡೆ ಮಾಡಲಿದೆ ಎಂದು ಎಎಪಿಯ ರಾಜ್ಯ ಘಟಕದ ಮುಖ್ಯಸ್ಥ ಸುಶೀಲ್ ಗುಪ್ತಾ ಹೇಳಿದರು.  ಪಕ್ಷದ ಪರವಾಗಿ ಮಾತುಕತೆಯ ನೇತೃತ್ವ ವಹಿಸಿದ್ದ ಎಎಪಿಯ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು, “ನಾವು ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ (ಸೆಪ್ಟೆಂಬರ್) 12 ರ ಮೊದಲು ನಿರ್ಧಾರ ತೆಗೆದುಕೊಳ್ಳುತ್ತೇವೆ, ವಿನ್-ವಿನ್ ಪರಿಸ್ಥಿತಿ ಇಲ್ಲದಿದ್ದರೆ, ನಾವು ಅದನ್ನು ಬಿಡುತ್ತೇವೆ. ಮಾತುಕತೆಗಳು ನಡೆಯುತ್ತಿವೆ, ಉತ್ತಮವಾದ ತೀರ್ಮಾನವು ಹೊರಬರುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಭಾರತೀಯ ಸಂಸ್ಥೆಗಳು ಇಸ್ರೇಲ್‌ಗೆ ಮಿಲಿಟರಿ ನೆರವು ನೀಡುವುದನ್ನು ನಿರ್ಬಂಧಿಸಬೇಕು ಎಂಬ ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್

ಸೋಮವಾರ, ಹಿರಿಯ ಎಎಪಿ ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು, “ಸಂದೀಪ್ ಪಾಠಕ್ ಅವರು ಈಗಾಗಲೇ ಈ ವಿಷಯದ ಬಗ್ಗೆ ಹೇಳಿಕೆ ನೀಡಿದ್ದಾರೆ. ಸುಶೀಲ್ ಗುಪ್ತಾ ಕೂಡ ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ, ನಾವು ಎಲ್ಲರಿಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದೇವೆ ಎಂಬ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅವರು ಪಕ್ಷದಿಂದ ಅಥವಾ ರಾಷ್ಟ್ರೀಯ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಅವರಿಂದ ಅನುಮತಿ ಪಡೆದ ತಕ್ಷಣ, ಅವರು ಪಟ್ಟಿಯನ್ನು ಘೋಷಿಸುತ್ತಾರೆ. ಎಎಪಿ ರಾಷ್ಟ್ರೀಯ ಪಕ್ಷವಾಗಿದೆ ಮತ್ತು ಹರ್ಯಾಣದಲ್ಲಿ ನಾವು ಪ್ರಬಲವಾದ ಸಂಘಟನೆಯನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ.

90 ಸದಸ್ಯ ಬಲದ ಹರ್ಯಾಣ ವಿಧಾನಸಭೆಗೆ ಅಕ್ಟೋಬರ್ 5 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:40 pm, Mon, 9 September 24

‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!