Maharashtra: ಚಲಿಸುತ್ತಿದ್ದ ಬಸ್‌ನಲ್ಲಿ ಏಕಾಏಕಿ ಬೆಂಕಿ, ಸುಟ್ಟು ಕರಕಲಾದ ಬಸ್
ಮಹಾರಾಷ್ಟ್ರದ ಪುಣೆಯಲ್ಲಿ ಚಲಿಸುತ್ತಿದ್ದ ಬಸ್‌ಗೆ ಏಕಾಏಕಿ ಬೆಂಕಿ ತಗುಲಿ ಪ್ರಯಾಣಿಕರ ಪ್ರಾಣಪಾಯದಿಂದ ಪಾರಾಗಿದ್ದಾರೆ ಬೆಂಕಿಯು ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಒಂದು ಬಾರಿ ಭಯಭೀತಗೊಳಿಸಿದೆ.
ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಚಲಿಸುತ್ತಿದ್ದ ಬಸ್‌ಗೆ ಏಕಾಏಕಿ ಬೆಂಕಿ ತಗುಲಿ ಪ್ರಯಾಣಿಕರ ಪ್ರಾಣಪಾಯದಿಂದ ಪಾರಾಗಿದ್ದಾರೆ ಬೆಂಕಿಯು ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಒಂದು ಬಾರಿ ಭಯಭೀತಗೊಳಿಸಿದೆ. ಆದರೆ ಯಾವುದೇ ಸಾವು- ನೋವುಗಳ ಸಂಭವಿಸಿಲ್ಲ.
ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಬುಧವಾರ ಬಸ್‌ಗೆ ಬೆಂಕಿ ಹೊತ್ತಿಕೊಂಡಿತ್ತು, ಬಸ್‌ನಲ್ಲಿದ್ದ 27 ಪ್ರಯಾಣಿಕರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಅಂಬೇಗಾಂವ್ ತಹಸಿಲ್‌ನ ಭೀಮಾಶಂಕರ ಮಾರ್ಗದಲ್ಲಿ ಬೆಳಿಗ್ಗೆ 6.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಇಲ್ಲ ಅವಕಾಶ
ಮುಂಬೈ ಸಮೀಪದ ಭಿವಂಡಿಯ ಗ್ರಾಮವೊಂದರಿಂದ 27 ಪ್ರಯಾಣಿಕರನ್ನು ಹೊತ್ತ ಖಾಸಗಿ ಬಸ್ ಪುಣೆ ಜಿಲ್ಲೆಯ ಭೀಮಾಶಂಕರಕ್ಕೆ ತೆರಳುತ್ತಿತ್ತು. ಭೀಮಾಶಂಕರ ಘೋಡೆಗಾಂವ್ ರಸ್ತೆಯ ಶಿಂಧೇವಾಡಿಗೆ ಬಸ್ ಬಂದಾಗ ವಾಹನದಿಂದ ಹೊಗೆ ಬರುತ್ತಿದೆ ಎಂದು ಬೇರೆ ವಾಹನದ ಚಾಲಕ ಬಸ್ ಚಾಲಕನಿಗೆ ತಿಳಿಸಿದ್ದಾನೆ ಎಂದು ಘೋರೆಗಾಂವ್ ಪೊಲೀಸ್ ಠಾಣೆಯ ಸಹಾಯಕ ನಿರೀಕ್ಷಕ ಜೀವನ್ ಮಾನೆ ತಿಳಿಸಿದ್ದಾರೆ. ಚಾಲಕ ತಕ್ಷಣವೇ ಬಸ್ ನಿಲ್ಲಿಸಿದ ಮತ್ತು ಎಲ್ಲಾ ಪ್ರಯಾಣಿಕರು ಬಸ್‌ನಿಂದ ಕೆಳಗಿಳಿದರು ಎಂದು ಪೊಲೀಸರು ತಿಳಿಸಿದ್ದಾರೆ.
Pune, Maharashtra | Fire breaks out in a moving bus at Ambegaon Taluka area, passengers safe (12.10) pic.twitter.com/cMCynzCgHb
— ANI (@ANI) October 12, 2022
ಪ್ರಯಾಣಿಕರೊಬ್ಬರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದರು. ಎಲ್ಲರೂ ಸೇರಿ ಬೆಂಕಿ ನಂದಿಸಲು ಪ್ರಯತ್ನಿಸಲಾಯಿತು ಆದರೆ ವಾಹನವು ಬೆಂಕಿಗೆ ಆಹುತಿಯಾಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರ ಸಾಮಾಗ್ರಿಗಳೂ ಬೆಂಕಿಗೆ ಆಹುತಿಯಾಗಿವೆ. ಆದರೆ, ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಹೇಳಿದರು.
Published On - 11:00 am, Thu, 13 October 22