ಮಹಾರಾಷ್ಟ್ರದಲ್ಲಿ ಮೇ 31ರವರೆಗೂ ಲಾಕ್ಡೌನ್ ಮುಂದುವರೆಯುವ ಸಾಧ್ಯತೆ; ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ
ಇನ್ನು ಮುಂಬೈನಲ್ಲಿ ಇಂದು 2,116 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, 66 ಮಂದಿ ಮೃತಪಟ್ಟಿದ್ದಾರೆ. ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ.6.3 ಮಾತ್ರ ಇದೆ.
ಮಹಾರಾಷ್ಟ್ರದಲ್ಲಿ ಲಾಕ್ಡೌನ್ನ್ನು ಮೇ 31ರವರೆಗೂ ವಿಸ್ತರಿಸುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಗಿದೆ ಎಂದು ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ. ಕೊರೊನಾ ಪ್ರಾರಂಭವಾದಗಿನಿಂದಲೂ ಅತಿ ಹೆಚ್ಚು ಕೇಸ್ಗಳು ದಾಖಲಾಗುತ್ತಿರುವುದು ಮಹಾರಾಷ್ಟ್ರದಿಂದ. ಇಂದು ಒಂದೇ ದಿನ ಮಹಾರಾಷ್ಟ್ರದಲ್ಲಿ 46,781 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಹಾಗೇ 24 ಗಂಟೆಯಲ್ಲಿ 58,805 ಮೃತಪಟ್ಟಿದ್ದಾರೆ. ಇಲ್ಲಿ ಸೋಂಕು ಪ್ರಸರಣದ ಪ್ರಮಾಣ ಶೇ. 17.36 ರಷ್ಟಿದ್ದು, ಸಾವಿನ ಪ್ರಮಾಣ ಶೇ.1.49 ರಷ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇನ್ನು ಮುಂಬೈನಲ್ಲಿ ಇಂದು 2,116 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, 66 ಮಂದಿ ಮೃತಪಟ್ಟಿದ್ದಾರೆ. ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ.6.3 ಮಾತ್ರ ಇದೆ. ಹಾಗೆ ನೋಡಿದರೆ ಮುಂಬೈ ಮಹಾನಗರದಲ್ಲಿ ಕೊರೊನಾ ಸೋಂಕಿನ ಪ್ರಮಾಣ ತುಂಬ ಕಡಿಮೆಯಾದಂತಿದೆ. ಒಟ್ಟಾರೆ ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಹೇರಲಾಗಿದ್ದು, ಅದರ ಅವಧಿಯನ್ನು ಮೇ 31ರವರೆಗೆ ವಿಸ್ತರಿಸುವ ಸಾಧ್ಯತೆಯೇ ಹೆಚ್ಚಾಗಿದೆ.
ಇದನ್ನೂ ಓದಿ: OYO ಸಿಬ್ಬಂದಿಗೆ ವಾರದಲ್ಲಿ 4 ದಿನ ಕೆಲಸ, ಬೇಕೆಂದಾಗ ಬೇಕಾದಷ್ಟು ಸಂಬಳ ಸಹಿತ ರಜಾ ಘೋಷಣೆ
1000 ಆಕ್ಸಿಜನ್ ಬೆಡ್ ಇರುವ, ದೇಶದಲ್ಲಿಯೇ ಅತ್ಯಂತ ದೊಡ್ಡ ಕೊವಿಡ್ ಕಾಳಜಿ ಕೇಂದ್ರ ಕೇರಳದಲ್ಲಿ ನಿರ್ಮಾಣ
Maharashtra Corona Lockdown Likely To Be Extended Till May 31