ಮಹಾರಾಷ್ಟ್ರದಲ್ಲಿ ಜೂನ್ 7ರಿಂದ ಲಾಕ್‌ಡೌನ್ ಸಡಿಲಿಕೆ; ಸೋಂಕಿತರ ಸಂಖ್ಯೆ ಮತ್ತು ಆಕ್ಸಿಜನ್ ಬೆಡ್ ಲಭ್ಯತೆ ಮೇರೆಗೆ ನಿರ್ಧಾರ

| Updated By: preethi shettigar

Updated on: Jun 05, 2021 | 8:38 AM

ಲಾಕ್‌ಡೌನ್ ಸಡಿಲಿಕೆ ಬಗ್ಗೆ ಮಹಾರಾಷ್ಟ್ರ ಸರ್ಕಾರ ಮಾಹಿತಿ ನೀಡಿದ್ದು, ಮಹಾರಾಷ್ಟ್ರದಲ್ಲಿ ಕೊವಿಡ್ ಪಾಸಿಟಿವಿಟಿ ದರ ಮತ್ತು ಆಕ್ಸಿಜನ್ ಬೆಡ್ ಲಭ್ಯತೆ ಮೇರೆಗೆ ಲಾಕ್‌ಡೌನ್ ಸಡಿಲಿಕೆ ಮಾಡಲಾಗುವುದು ಎಂದು ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಜೂನ್ 7ರಿಂದ ಲಾಕ್‌ಡೌನ್ ಸಡಿಲಿಕೆ; ಸೋಂಕಿತರ ಸಂಖ್ಯೆ ಮತ್ತು ಆಕ್ಸಿಜನ್ ಬೆಡ್ ಲಭ್ಯತೆ ಮೇರೆಗೆ ನಿರ್ಧಾರ
ಸಾಂದರ್ಭಿಕ ಚಿತ್ರ
Follow us on

ಮುಂಬೈ: ಕೊರೊನಾ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿದ್ದು, ಇಡೀ ದೇಶವೆ ಆತಂಕಕ್ಕೆ ಗುರಿಯಾಗಿತ್ತು. ಅದರಲ್ಲೂ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗಿತ್ತು. ಹೀಗಾಗಿ ಹಲವು ಕಠಿಣ ನಿರ್ಬಂಧಗಳೊಂದಿಗೆ ಮಹಾರಾಷ್ಟ್ರದಲ್ಲಿ ಏಪ್ರಿಲ್ 14 ರಿಂದ ಲಾಕ್​ಡೌನ್ ಜಾರಿಗೆ ತರಲಾಗಿತ್ತು ಮತ್ತು ಆ ಮೂಲಕ ರಾಜ್ಯದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ‘ಬ್ರೇಕ್​ ದ ಚೈನ್ ಅಭಿಯಾನ’ ಅರಂಭವಾಗಲಿದೆ ಎಂದು ಘೋಷಿಸಿದರು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ಮಹಾರಾಷ್ಟ್ರದಲ್ಲಿ ಸೋಂಕು ಮತ್ತು ಸಾವಿನ ಪ್ರಮಾಣ ಇಳಿಮುಖಗೊಂಡು ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ. ಹೀಗಾಗಿ ಮಹಾರಾಷ್ಟ್ರ ಸರ್ಕಾರ ಜೂನ್ 7ರಿಂದ ಲಾಕ್​ಡೌನ್ ಸಡಿಲಿಸಲು ನಿರ್ಧಾರ ತೆಗೆದುಕೊಂಡಿದೆ.

ಲಾಕ್‌ಡೌನ್ ಸಡಿಲಿಕೆ ಬಗ್ಗೆ ಮಹಾರಾಷ್ಟ್ರ ಸರ್ಕಾರ ಮಾಹಿತಿ ನೀಡಿದ್ದು, ಮಹಾರಾಷ್ಟ್ರದಲ್ಲಿ ಕೊವಿಡ್ ಪಾಸಿಟಿವಿಟಿ ದರ ಮತ್ತು ಆಕ್ಸಿಜನ್ ಬೆಡ್ ಲಭ್ಯತೆ ಮೇರೆಗೆ ಲಾಕ್‌ಡೌನ್ ಸಡಿಲಿಕೆ ಮಾಡಲಾಗುವುದು ಎಂದು ತಿಳಿಸಿದೆ.

ಏಪ್ರಿಲ್ ಮಧ್ಯಭಾಗದಿಂದ ಆರಂಭವಾದ ಲಾಕ್​ಡೌನ್​ ಅನ್ನು ಸಡಿಲಿಸುವ ಗೋಜಿಗೆ ಠಾಕ್ರೆ ಸರ್ಕಾರ ಹೋಗದೆ ಅದನ್ನು ಜೂನ್ 15ರವರೆಗೆ ವಿಸ್ತರಿಸಿತ್ತು. ಸದ್ಯ ಪ್ರಕರಣಗಳು ಹೆಚ್ಚಿರುವ ಕಡೆಗಳಲ್ಲಿ ಮತ್ತಷ್ಟು ಬಿಗಿಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಮತ್ತು ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿರುವ ಪ್ರದೇಶಗಳಲ್ಲಿ ಹಂತ ಹಂತವಾಗಿ ಲಾಕ್​ಡೌನ್ ಸಡಿಲಿಸಲಾಗವುದು ಎಂದು ಸರ್ಕಾರ ಹೊರಡಿಸಿರುವ ಪ್ರಕಟಣೆ ಹೇಳುತ್ತದೆ.

ಏಪ್ರಿಲ್ 14 ರಿಂದ ಆರಂಭವಾದ ಲಾಕ್​ಡೌನ್
ಏಪ್ರಿಲ್ 14 ರಿಂದ 15 ದಿನಗಳವರೆಗೆ ಸಿಆರ್​ಪಿಸಿ 144ರ ಕಲಂ ಅನ್ವಯ ಜನರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗುವುದು. ಅನಗತ್ಯವಾಗಿ ಯಾರೂ ಸಹ ಮನೆಯಿಂದ ಹೊರಬರುವಂತಿಲ್ಲ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇತರೆಲ್ಲ ಸೇವೆಗಳು ಬಂದ್ ಆಗಲಿವೆ. ಮಹಾರಾಷ್ಟ್ರದಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿಯಾಗಲಿದೆ. ಸಾರಿಗೆ ಸೇವೆಗಳು ಎಂದಿನಂತೆ ಇರಲಿವೆ. ಇ ಕಾಮರ್ಸ್ ಸೇವೆ, ಪೆಟ್ರೋಲ್‌ ಬಂಕ್‌ಗಳು ತೆರೆದಿರುತ್ತವೆ’ ಎಂದು ಉದ್ಧವ್ ಠಾಕ್ರೆ ತಿಳಿಸಿದ್ದರು.

‘ಹೋಟೆಲ್, ರೆಸ್ಟೋರೆಂಟ್​ಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ. ಹೋಟೆಲ್, ರೆಸ್ಟೋರೆಂಟ್​ಗಳಲ್ಲಿ ಪಾರ್ಸೆಲ್​ಗೆ ಮಾತ್ರ ಅವಕಾಶ ಇರಲಿದೆ. ಮಹಾರಾಷ್ಟ್ರದಲ್ಲಿ ಪಡಿತರ ಚೀಟಿ ಇರುವವರಿಗೆ ಉಚಿತ ರೇಷನ್ ನೀಡಲು ಸರ್ಕಾರ ನಿರ್ಧರಿಸಲಿದೆ. ಮುಂದಿನ 3 ತಿಂಗಳವರೆಗೆ ಉಚಿತ ರೇಷನ್ ನೀಡುತ್ತೇವೆ. ಆದಿವಾಸಿಗಳಿಗೆ ₹ 2 ಸಾವಿರ, ಕಾರ್ಮಿಕರಿಗೆ ₹ 1500 ಧನಸಹಾಯ ನೀಡಲಾಗುವುದು’ ಎಂದು ಹೇಳಿದ್ದರು.

ಆದರೆ ಲಾಕ್​ಡೌನ್ ಜಾರಿಯಿಂದಾಗಿ ಈಗ ಸೋಂಕಿತರ ಸಂಖ್ಯೆಯಲ್ಲಿ ನಿಧಾನಗತಿಯ ಇಳಿಕೆ ಕಂಡು ಬಂದಿದ್ದು, ಸಡಿಲಿಕೆ ಬಗ್ಗೆ ಮಹಾರಾಷ್ಟ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.

ಇದನ್ನೂ ಓದಿ:

ಅಹಮದ್​ನಗರದ 8,000 ಮಕ್ಕಳಲ್ಲಿ ಕೊವಿಡ್-19 ಸೋಂಕು, ಮಹಾರಾಷ್ಟ್ರಕ್ಕೆ ಈಗಲೇ ಕೊರನಾ ಸೋಂಕಿನ 3ನೇ ಅಲೆ ಅಪ್ಪಳಿಸಿದೆಯೇ?

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ತೀವ್ರ; ಕಠಿಣ ನಿರ್ಬಂಧ ಘೋಷಿಸಿದ ಸಿಎಂ ಉದ್ಧವ್ ಠಾಕ್ರೆ

 

 

Published On - 8:34 am, Sat, 5 June 21