ಆಲ್ಕೋಹಾಲ್ ಖರೀದಿಸಲು ಹಣ ನೀಡದ ಅಮ್ಮನನ್ನು ಕೊಂದ ಮಗ
ಆಲ್ಕೋಹಾಲ್ ಖರೀದಿಸಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಹೆತ್ತ ತಾಯಿಯನ್ನೇ ಮಗನೊಬ್ಬ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಕುಡಿತದ ದಾಸಕ್ಕೆ ತುತ್ತಾಗಿದ್ದ ವ್ಯಕ್ತಿ ತನ್ನ ವೃದ್ಧ ತಾಯಿಯನ್ನು ಕೊಂದಿದ್ದಾನೆ. ಆತ ತನ್ನ ತಾಯಿಯ ತಲೆಯನ್ನು ಹಲವು ಬಾರಿ ನೆಲಕ್ಕೆ ಬಡಿದಿದ್ದರಿಂದ ಅವರು ಮೃತಪಟ್ಟಿದ್ದರು. ಇದೀಗ ಆತನನ್ನು ಬಂಧಿಸಲಾಗಿದೆ.

ಲಾತೂರ್, ಜನವರಿ 30: ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ಆಲ್ಕೋಹಾಲ್ (Alcohol) ಖರೀದಿಸಲು ಹಣ ನೀಡಲು ನಿರಾಕರಿಸಿದ ಕಾರಣದಿಂದ ವ್ಯಕ್ತಿಯೊಬ್ಬ ತನ್ನ 65 ವರ್ಷದ ತಾಯಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಮಧ್ಯರಾತ್ರಿ ಉದ್ಗೀರ್ ತಹಸಿಲ್‌ನ ಕರ್ಖೇಲಿ ಗ್ರಾಮದಲ್ಲಿ ನಡೆದ ಕೊಲೆ ಆರೋಪದ ಮೇಲೆ ಆರೋಪಿ ಸೈಲಾನಿ ಬಕ್ಷುದ್ದೀನ್ ಮುಂಜೇವರ್ ಎಂಬ 45 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಆ ಆರೋಪಿ ಮದ್ಯದ ಚಟ ಹೊಂದಿದ್ದ. ಮದ್ಯ ಖರೀದಿಸಲು ತನ್ನ ವೃದ್ಧ ತಾಯಿ ಯಾಸಿನ್‌ಬಿಯಿಂದ ಪದೇ ಪದೇ ಹಣ ಕೇಳುತ್ತಿದ್ದ. ಸೋಮವಾರ ಆತ ಎಷ್ಟೇ ಕೇಳಿದರೂ ಆತನ ತಾಯಿ ಹಣ ನೀಡಲು ನಿರಾಕರಿಸಿದಾಗ, ಅವನು ಆಕೆಯ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ್ದ. ತಾಯಿಯ ತಲೆಯನ್ನು ನೆಲಕ್ಕೆ ಹಲವು ಬಾರಿ ಹೊಡೆದಿದ್ದ. ಆ ವೃದ್ಧ ಮಹಿಳೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಶಾಲೆಯೊಳಗೇ ಆಲ್ಕೋಹಾಲ್ ಪಾರ್ಟಿ ಮಾಡಿದ ಹುಡುಗಿಯರು! 6 ವಿದ್ಯಾರ್ಥಿನಿಯರ ಅಮಾನತು
ನಂತರ ಅವರು ತಮ್ಮ ಮನೆಯ ಅಂಗಳದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿತ್ತು. ಆ ಮಹಿಳೆಯ 69 ವರ್ಷದ ಪತಿ ನೀಡಿದ ದೂರಿನ ಆಧಾರದ ಮೇಲೆ, ಅವರ ಮಗನ ವಿರುದ್ಧ ಉದ್ಗೀರ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ನಂತರ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
