MLA Slaps Engineer: ನಡುರಸ್ತೆಯಲ್ಲಿ ಸಿವಿಲ್ ಎಂಜಿನಿಯರ್ ಕೆನ್ನೆಗೆ ರಪ್ಪಾ ರಪ್ಪಾ ಬಾರಿಸಿದ ಶಾಸಕಿ! ಇಷ್ಟಕ್ಕೂ ಆ ಅಧಿಕಾರಿ ಮಾಡಿದ್ದೇನು ಗೊತ್ತಾ!?
ಇಬ್ಬರು ಎಂಜಿನಿಯರುಗಳ ಅಚಾತುರ್ಯದಿಂದ ಮುಂಗಾರು ಹಂಗಾಮಿಗೂ ಮುನ್ನ ಮಕ್ಕಳು, ಕುಟುಂಬಸ್ಥರು ರಸ್ತೆಗಿಳಿಯುವಂತಾಗಿದೆ ಎಂಬುದು ಶಾಸಕಿ ಗೀತಾ ಭಾರತ್ ಜೈನ್ ಅವರ ಆಕ್ರೋಶಕ್ಕೆ ಕಾರಣವಾಗಿತ್ತು.
ಮಹಾರಾಷ್ಟ್ರದಲ್ಲಿ (Maharashtra) ಮಹಿಳಾ ಶಾಸಕಿ ಅಧಿಕಾರಿಗಳ ವರ್ತನೆಗೆ ಕೋಪಗೊಂಡಿದ್ದಾರೆ. ಇದರಿಂದ ನಡುರಸ್ತೆಯಲ್ಲಿಯೇ ಎಲ್ಲರೂ ನೊಡನೋಡುತ್ತಿದ್ದಂತೆ ಸಿವಿಲ್ ಎಂಜಿನಿಯರ್ ಕೆನ್ನೆಗೆ ರಪ್ಪಾ ರಪ್ಪಾ ಬಾರಿಸಿದ್ದಾರೆ (MLA Slapping). ಇಷ್ಟಕ್ಕೂ ಆ ಅಧಿಕಾರಿ ಮಾಡಿದ ತಪ್ಪೇನು ಗೊತ್ತಾ!? ಥಾಣೆ ಜಿಲ್ಲೆಯ ಮೀರಾ ಭಯ್ಯಾದರ್ ಎಂಬಲ್ಲಿ (Thane, Maharashtra) ಈ ಘಟನೆ ನಡೆದಿದೆ (Viral Video). ಎಲ್ಲರೂ ನೋಡುತ್ತಿರುವಾಗಲೇ ಮೀರಾ ಭಯ್ಯಾದರ್ ಶಾಸಕಿ ಗೀತಾ ಭರತ್ ಜೈನ್ ಇಬ್ಬರು ಎಂಜಿನಿಯರ್ ಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಸಿವಿಲ್ ಎಂಜಿನಿಯರ್ (Engineer) ಮೇಲೆ ಮಹಿಳಾ ಶಾಸಕಿ ಗೀತಾ ಭರತ್ ಜೈನ್ ಅವರು ಕೈ ಕೈ ಮಿಲಾಯಿಸಿದ ಘಟನೆ ನಗರದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಮೀರಾ ಭಯ್ಯಾದಾರ್ ನಗರಸಭೆಯಲ್ಲಿನ ಅಕ್ರಮ ಕಟ್ಟಡಗಳ ತೆರವು ಭಾಗವಾಗಿ ಅಧಿಕಾರಿಗಳು ಕೆಲವು ಕಟ್ಟಡಗಳನ್ನು ನೆಲಸಮಗೊಳಿಸಿದ್ದರು.
BJP MLA Geeta Jain publicly slapped the engineer of the Municipal Corporation.
A video of Bhayandar BJP MLA Geeta Jain has gone viral on social media…#viralvideo@BJP4Mumbai @cbawankule @Dev_Fadnavis @rautsanjay61 @AUThackeray @NANA_PATOLE pic.twitter.com/uBAc7NBNVT
— Indrajeet chaubey (@indrajeet8080) June 20, 2023
ಇದರಿಂದ ಶಾಸಕರ ಸಿಟ್ಟಿಗೆದ್ದರು. ಇಬ್ಬರು ಎಂಜಿನಿಯರುಗಳ ಅಚಾತುರ್ಯದಿಂದ ಮುಂಗಾರು ಹಂಗಾಮಿಗೂ ಮುನ್ನ ಮಕ್ಕಳು, ಕುಟುಂಬಸ್ಥರು ರಸ್ತೆಗಿಳಿಯುವಂತಾಗಿದೆ ಎಂಬುದು ಶಾಸಕಿ ಗೀತಾ ಭಾರತ್ ಜೈನ್ ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಕಟ್ಟಡಗಳನ್ನು ಹೇಗೆ ನಾಶಪಡಿಸುತ್ತೀರಿ ಎಂದು ಆ ಇಬ್ಬರೂ ಅಧಿಕಾರಿಗಳನ್ನು ಅವರು ರಸ್ತೆಯಲ್ಲೇ ಪ್ರಶ್ನಿಸಿದರು.
ಈ ಹಿನ್ನೆಲೆಯಲ್ಲಿ ಸಿವಿಲ್ ಎಂಜಿನಿಯರ್‌ಗೆ ಅವಮಾನ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೀತಾ ಜೈನ್ ಬಿಜೆಪಿಯಿಂದ ಮೇಯರ್ ಆಗಿಯೂ ಸೇವೆ ಸಲ್ಲಿಸಿದ್ದರು. ಶಾಸಕರು 2019ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದರು. ಪ್ರಸ್ತುತ ಅವರು ಬಿಜೆಪಿ-ಶಿವಸೇನೆ ಸರ್ಕಾರವನ್ನು ಬೆಂಬಲಿಸುತ್ತಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ