ಗೆಳತಿಯ ವಿವಾಹವಾಗಲು ಸೇನಾ ಕಮಾಂಡರ್ ಎಂದು ಪೋಸ್​ ಕೊಟ್ಟು, ಜೈಲುಪಾಲಾದ ಕಾಲೇಜು ವಿದ್ಯಾರ್ಥಿ

| Updated By: ಸಾಧು ಶ್ರೀನಾಥ್​

Updated on: Oct 25, 2021 | 7:56 PM

ಪುಣೆ: ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ ಸಖಿಯನ್ನು ಮದುವೆಯಾಗಲು ಸೇನಾ ಕಮಾಂಡರ್​ ಎಂದು ಹೇಳಿಕೊಂಡು ಜೈಲುಪಾಲಾಗಿದ್ದಾನೆ. ಪ್ರಕರಣದ ಸಂಬಂಧ ಅಗಮದ್​ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿ 20 ವರ್ಷದ ಮಹೇಶ್​ ಜಗಪತ್​ನನ್ನು ಪೊಲೀಸರು​ ಭಾನುವಾರ ಬಂಧಿಸಿದ್ದಾರೆ. ಸೇನಾಧಿಕಾರಿಯಂತೆ ಪೋಸ್​ ಕೊಟ್ಟಿದ್ದ ವಿದ್ಯಾರ್ಥಿ ಜಗಪತ್​ನನ್ನು ಬಂಧಿಸುವಲ್ಲಿ ದಕ್ಷಿಣ ವಲಯದ ಸೇನಾ ಕಮಾಂಡ್ ಗುಪ್ತಚರ ಘಟಕ ಸಹ ನೆರವು ನೀಡಿದೆ. ಅಹಮದ್ ನಗರದ ರಾಹತಾ ತಾಲೂಕಿನ ಮಹೇಶ್​ ಜಗಪತ್ ದ್ವಿತೀಯ ಬಿ ಕಾಂ ವ್ಯಾಸಂಗ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹೇಶ್​ ಜಗಪತ್​ […]

ಗೆಳತಿಯ ವಿವಾಹವಾಗಲು ಸೇನಾ ಕಮಾಂಡರ್ ಎಂದು ಪೋಸ್​ ಕೊಟ್ಟು, ಜೈಲುಪಾಲಾದ ಕಾಲೇಜು ವಿದ್ಯಾರ್ಥಿ
(ಸಾಂಕೇತಿಕ ಚಿತ್ರ)
Follow us on

ಪುಣೆ: ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ ಸಖಿಯನ್ನು ಮದುವೆಯಾಗಲು ಸೇನಾ ಕಮಾಂಡರ್​ ಎಂದು ಹೇಳಿಕೊಂಡು ಜೈಲುಪಾಲಾಗಿದ್ದಾನೆ. ಪ್ರಕರಣದ ಸಂಬಂಧ ಅಗಮದ್​ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿ 20 ವರ್ಷದ ಮಹೇಶ್​ ಜಗಪತ್​ನನ್ನು ಪೊಲೀಸರು​ ಭಾನುವಾರ ಬಂಧಿಸಿದ್ದಾರೆ. ಸೇನಾಧಿಕಾರಿಯಂತೆ ಪೋಸ್​ ಕೊಟ್ಟಿದ್ದ ವಿದ್ಯಾರ್ಥಿ ಜಗಪತ್​ನನ್ನು ಬಂಧಿಸುವಲ್ಲಿ ದಕ್ಷಿಣ ವಲಯದ ಸೇನಾ ಕಮಾಂಡ್ ಗುಪ್ತಚರ ಘಟಕ ಸಹ ನೆರವು ನೀಡಿದೆ.

ಅಹಮದ್ ನಗರದ ರಾಹತಾ ತಾಲೂಕಿನ ಮಹೇಶ್​ ಜಗಪತ್ ದ್ವಿತೀಯ ಬಿ ಕಾಂ ವ್ಯಾಸಂಗ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹೇಶ್​ ಜಗಪತ್​ ಅಹಮದ್ ನಗರದಲ್ಲಿ ದರ್ಜಿಯೊಬ್ಬನಿಂದ ಸೇನಾ ಸಮವಸ್ತ್ರವನ್ನು ಹೊಲಿಸಿಕೊಂಡಿದ್ದಾನೆ. ಅದಾದಮೇಲೆ ತಪ್ಪುತಪ್ಪಾಗಿ ಸೇನಾ ಗುರುತಿನ ಚೀಟಿಯನ್ನು ಮಾಡಿಸಿಕೊಂಡಿದ್ದಾನೆ. ಅದಕ್ಕೂ ಮುನ್ನ ಉದ್ಯೋಗ ನೇಮಕಾತಿ ಪತ್ರವನ್ನೂ ತಯಾರಿಸಿಕೊಂಡಿದ್ದಾನೆ.

ಇಷ್ಟೆಲ್ಲ ಸಿದ್ಧತೆ ಮಾಡಿಕೊಂಡ ಮಹೇಶ್​ ಜಗಪತ್​, ತನ್ನ ಅಪ್ಪ-ಅಮ್ಮ ಮತ್ತು ಹತ್ತಿರದ ಸಂಬಂಧಿಗಳಿಗೆ ತಾನು ಅಧಿಕಾರಿಯಾಗಿ ಭಾರತೀಯ ಸೇನೆ ಸೇರಿದ್ದಾಗಿ ಹೇಳಿದ್ದಾನೆ. ಹೆಮ್ಮೆಯ ಸೇನೆ ಸೇರಿದ್ದಾಗಿ ಹೇಳಿಕೊಂಡು ಸಿಹಿಯನ್ನೂ ಸಹ ಹಂಚಿದ್ದಾನೆ. ಮುಂದೆ, ತಾನು ಸೇರಿಕೊಂಡಿರುವ ಸೇನಾ ಘಟಕದಲ್ಲಿ ಸಮವಸ್ತ್ರದಲ್ಲಿರುವ ಇತರೆ ಯೋಧರ ಫೋಟೋಗಳನ್ನು ಕಳಿಸುವಂತೆ ಮಹೇಶ್​ ಜಗಪತ್​ಗೆ ಆತನ ಪ್ರೇಯಸಿ ಕೋರಿದ್ದಾಳೆ.

ಮಹೇಶ್​ ಜಗಪತ್​ನ ಚಲನವಲನದ ಮೇಲೆ ಗುಮಾನಿಯಿಟ್ಟುಕೊಂಡಿದ್ದ ಸೇನಾಧಿಕಾರಿಗಳು ಆತನನ್ನು ಭಾನುವಾರ ವಿಚಾರಣೆಗಾಗಿ ಹಿಡಿದಿಟ್ಟುಕೊಂಡಿದ್ದಾರೆ. ಗುರುತಿನ ಚೀಟಿ, ನೇಮಕಾತಿ ಪತ್ರ ತೋರಿಸಿ ತಾನೂ ಸೇನಾಧಿಕಾರಿ ಎಂದು ಅಸಲಿ ಸೇನಾಧಿಕಾರಿಗಳ ಎದುರು ಬುರುಡೆ ಬಿಟ್ಟಿದ್ದಾನೆ. ಈ ಮಧ್ಯೆ, ಮಹೇಶ್​ ಜಗಪತ್​ ಒಬ್ಬ ನಕಲಿ ಸೇನಾಧಿಕಾರಿ ಎಂಬುದು ಖಚಿತಪಡಿಸಿಕೊಂಡ ಸೇನಾಧಿಕಾರಿಗಳು ಆತನನ್ನು ಹೆಚ್ಚಿನ ವಿಚಾರಣೆ ನಡೆಸುತ್ತಾ, ವಶಕ್ಕೆ ತೆಗೆದುಕೊಂಡಿದ್ದಾರೆ. ಅದಾದ ಬಳಿಕ ಮಹೇಶ್​ ಜಗಪತ್​ನನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಡ ಕುಟುಂಬದ ಹಿನ್ನೆಲೆಯ ಮಹೇಶ್​ ಜಗಪತ್ ತನ್ನ ವ್ಯಾಸಂಗ ಮುಂದುವರಿಸಲು ಸ್ಥಳೀಯವಾಗಿ ಖಾಸಗಿ ಕಂಪನಿಯೊಂದರಲ್ಲಿ ಕ್ಲರ್ಕ್​ ಆಗಿ ಉದ್ಯೋಗ ಮಾಡಿಕೊಂಡಿದ್ದ. ಆತನ ಮಾತಾಪಿತರು ಕೃಷಿಕ ಕುಟುಂಬದವರು. ಆದರೆ ಯುವತಿಯೊಬ್ಬಳ ಪ್ರೇಮ ಪಾಶಕ್ಕೆ ಬಿದ್ದು ನಕಲಿ ಸೇನಾಧಿಕಾರಿ ಎಂದು ಪರಿಚಯಿಸಿಕೊಂಡು ಇದೀಗ ಜೈಲುಪಾಲಾಗಿದ್ದಾನೆ.

Jodi Hakki Serial Actor ಚೈತ್ರಾ ರಾವ್ ಟಾಮ್ ಆ್ಯಂಡ್ ಜೆರಿ ಬಗ್ಗೆ ಹೇಳಿದ್ದೇನು? |TV9Kannada

(Mahesh Jagtap college student in Ahmednagar Pune was arrested on charge of posing as army officer )