ಟೀಚರ್ ತನ್ನ ಪ್ರೀತಿ ಒಪ್ಪಿಕೊಳ್ಳಲಿಲ್ಲವೆಂದು ರಸ್ತೆಯಲ್ಲಿ ತುಟಿ ಕಚ್ಚಿ ತುಂಡರಿಸಿದ ವಿದ್ಯಾರ್ಥಿ

ಉತ್ತರ ಪ್ರದೇಶದ ಮೈನ್​ಪುರಿಯಲ್ಲಿ 12ನೇ ತರಗತಿ ವಿದ್ಯಾರ್ಥಿಯೊಬ್ಬ ಶಿಕ್ಷಕಿ ತನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಆಕೆಯ ಮೇಲೆ ಭೀಕರ ದಾಳಿ ನಡೆಸಿದ್ದಾನೆ. ರಸ್ತೆಯಲ್ಲೇ ಶಿಕ್ಷಕಿಯ ತುಟಿಗಳನ್ನು ಕಚ್ಚಿ ತುಂಡರಿಸಿದ ಘಟನೆ ನಡೆದಿದೆ. ವಿದ್ಯಾರ್ಥಿ ಈ ಹಿಂದೆ ಶಿಕ್ಷಕಿಗೆ ಕಿರುಕುಳ ನೀಡಿದ್ದ. ಗಂಭೀರವಾಗಿ ಗಾಯಗೊಂಡ ಶಿಕ್ಷಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಟೀಚರ್ ತನ್ನ ಪ್ರೀತಿ ಒಪ್ಪಿಕೊಳ್ಳಲಿಲ್ಲವೆಂದು ರಸ್ತೆಯಲ್ಲಿ ತುಟಿ ಕಚ್ಚಿ ತುಂಡರಿಸಿದ ವಿದ್ಯಾರ್ಥಿ
ವಿದ್ಯಾರ್ಥಿ
Image Credit source: X post

Updated on: Feb 05, 2026 | 12:05 PM

ಮೈನ್​ಪುರಿ, ಫೆಬ್ರವರಿ 05: ನಾವು ಪ್ರೀತಿಸಿದವರು ಒಪ್ಪಿಕೊಳ್ಳಲಿಲ್ಲವೆಂದರೆ ಎಲ್ಲೇ ಇರಲಿ ಅವರು ಸುಖವಾಗಿರಲಿ ಎಂದು ಬಯಸುವುದು ನಿಜವಾದ ಪ್ರೀತಿ(Love). ಆದರೆ ಇಲ್ಲೊಬ್ಬ 12ನೇ ತರಗತಿ ವಿದ್ಯಾರ್ಥಿ ಶಿಕ್ಷಕಿ ತನ್ನ ಪ್ರೀತಿ ಮಾಡುವುದಿಲ್ಲ ಎಂದು ಗೊತ್ತಾದ ಬಳಿಕ ಆತ ರಸ್ತೆಯಲ್ಲೇ ಶಿಕ್ಷಕಿಯ ತುಟಿಯ ಕಚ್ಚಿ ತುಂಡರಿಸಿರುವ ಘಟನೆ ಉತ್ತರ ಪ್ರದೇಶದ ಮೈನ್​ಪುರಿಯಲ್ಲಿ ನಡೆದಿದೆ. ಶಿಕ್ಷಕಿ ತನ್ನ ಪ್ರೀತಿಯನ್ನು ಒಪ್ಪಿಕೊಂಡಿಲ್ಲವೆಂದು ಕ್ರೌರ್ಯದ ಎಲ್ಲಾ ಮಿತಿಗಳನ್ನು ಆತ ದಾಟಿದ್ದಾನೆ. ಗಂಭೀರವಾಗಿ ಗಾಯಗೊಂಡ ಶಿಕ್ಷಕಿಯನ್ನು ಆಗ್ರಾಕ್ಕೆ ಕಳುಹಿಸಲಾಗಿದೆ, ಆಕೆಯ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.

ಪೊಲೀಸರು ಆರೋಪಿ ವಿದ್ಯಾರ್ಥಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮೈನ್‌ಪುರಿಯ ಕೊಟ್ವಾಲಿ ಪ್ರದೇಶದಲ್ಲಿ, 12 ನೇ ತರಗತಿಯ ವಿದ್ಯಾರ್ಥಿ ಅಖಂಡ್ ಪ್ರತಾಪ್ ಸಿಂಗ್ ಕಾಲೇಜಿನಲ್ಲಿ ತನ್ನ ಶಿಕ್ಷಕಿಗೆ ಕಿರುಕುಳ ನೀಡಲು ಶುರು ಮಾಡಿದ್ದ. ಶಿಕ್ಷಕಿಯ ಕುಟುಂಬದವರು ದೂರು ನೀಡಿದ ಬಳಿಕ ಸ್ವಲ್ಪ ಸಮಯದವರೆಗೆ ನಡವಳಿಕೆ ಸಹಜವಾಗಿತ್ತು.

ಆದರೆ ವಿದ್ಯಾರ್ಥಿ ಮತ್ತೆ ಪೀಡಿಸಲು ಶುರು ಮಾಡಿದ್ದ. ಶಿಕ್ಷಕಿ ಹೋದ ಸ್ಥಳದಲ್ಲೆಲ್ಲಾ ಆತ ಹಿಂಬಾಲಿಸುತ್ತಿದ್ದ. ಆಕೆ ಅದನ್ನು ವಿರೋಧಿಸಿದಾಗ ಈತ ಭಯಾನಕ ಹೆಜ್ಜೆ ಇಟ್ಟಿದ್ದ. ಆಕೆ ಆ ಕಾಲೇಜನ್ನೇ ಬಿಟ್ಟು ಬೇರೆಡೆ ಕೆಲಸ ಮಾಡಲು ಶುರು ಮಾಡಿದ್ದಳು, ಆದರೆ ಅಲ್ಲಿಯೂ ಬಂದು ಆತ ತೊಂದರೆ ಕೊಡುತ್ತಿದ್ದ. ಆಕೆಯ ಎರಡೂ ತುಟಿಗಳನ್ನು ಕತ್ತರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ನಗರದ ಆಗ್ರಾ ರಸ್ತೆಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ತನ್ನ ಸಹೋದರಿ ಪಾಠ ಮಾಡುತ್ತಿದ್ದಾಳೆ ಎಂದು ಶಿಕ್ಷಕಿಯ ಸಹೋದರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅಖಂಡ್ ಪ್ರತಾಪ್ ಸಿಂಗ್ ಎಂಬ 12 ನೇ ತರಗತಿಯ ವಿದ್ಯಾರ್ಥಿ ತನ್ನ ಸಹೋದರಿಯ ಮೇಲೆ ಕಣ್ಣಿಟ್ಟಿದ್ದು, ಆಗಾಗ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದ ಎಂದು ಹೇಳಿದ್ದಾರೆ. ಶಿಕ್ಷಕಿ ವಿದ್ಯಾರ್ಥಿಯ ತಾಯಿಗೆ ಈ ಬಗ್ಗೆ ದೂರು ನೀಡಿದ್ದರು ಆಗ ಇಂಥಾ ತಪ್ಪು ಮತ್ತೆ ಆಗುವುದಿಲ್ಲ ಎಂದು ತಾಯಿ ಭರವಸೆ ನೀಡಿದ್ದರು. ಆದರೂ ನಡವಳಿಕೆ ಬದಲಾಗಲಿಲ್ಲ.

ಮತ್ತಷ್ಟು ಓದಿ: ಪ್ರೀತಿ ಪ್ರೇಮದ ಹೆಸರಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರ: ಲವ್ ಜಿಹಾದ್​​ಗೆ ಬಲಿಯಾದ ಹಿಂದೂ ಯುವತಿ ರೀಟಾ

ವಿದ್ಯಾರ್ಥಿಯ ಕಿರುಕುಳದಿಂದ ಬೇಸತ್ತ ಶಿಕ್ಷಕಿ ಆಗ್ರಾ ರಸ್ತೆಯ ಕಾಲೇಜನ್ನು ತೊರೆದು ಜ್ಯೋತಿ ರಸ್ತೆಯಲ್ಲಿರುವ ಮತ್ತೊಂದು ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದರು.ಆರೋಪಿ ಅಖಂಡ್ ಪ್ರತಾಪ್ ಧೈರ್ಯಗೆಡಲಿಲ್ಲ. ಹೊಸ ಕಾಲೇಜಿಗೆ ಹೋಗುವಾಗ ಶಿಕ್ಷಕಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದ. ಅನೈತಿಕ ಸಂಬಂಧಕ್ಕೆ ಒತ್ತಡ ಹೇರಿದ್ದ.

ಶಿಕ್ಷಕಿಯ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಫತೇ ಬಹದ್ದೂರ್ ಸಿಂಗ್ ತಿಳಿಸಿದ್ದಾರೆ. ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ. ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಮತ್ತು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ