ಟಿಎಂಸಿ ಅಧ್ಯಕ್ಷರಾಗಿ ಅವಿರೋಧವಾಗಿ ಮರು ಆಯ್ಕೆಯಾದ ಮಮತಾ ಬ್ಯಾನರ್ಜಿ; ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಾಗಲು ಕರೆ

ಪಶ್ಚಿಮ ಬಂಗಾಳದಲ್ಲಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಹಕಾರ ಇಲ್ಲವೆಂಬುದು ಗೊತ್ತೇ ಇದೆ. ಇತ್ತೀಚೆಗಷ್ಟೇ  ರಾಜ್ಯಪಾಲ ಜಗದೀಪ್ ಧನಕರ್ ಅವರ ಟ್ವಿಟರ್ ಖಾತೆಯನ್ನು ನಿರ್ಬಂಧಿಸಿರುವುದನ್ನು  ಮಮತಾ ಬ್ಯಾನರ್ಜಿ (Mamata Banerjee) ಒಪ್ಪಿಕೊಂಡಿದ್ದರು.

ಟಿಎಂಸಿ ಅಧ್ಯಕ್ಷರಾಗಿ ಅವಿರೋಧವಾಗಿ ಮರು ಆಯ್ಕೆಯಾದ ಮಮತಾ ಬ್ಯಾನರ್ಜಿ; ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಾಗಲು ಕರೆ
ಮಮತಾ ಬ್ಯಾನರ್ಜಿ
Follow us
TV9 Web
| Updated By: Lakshmi Hegde

Updated on: Feb 02, 2022 | 4:41 PM

ತೃಣಮೂಲ ಕಾಂಗ್ರೆಸ್​ನ ಅಧ್ಯಕ್ಷರಾಗಿ ಇಂದು ಮಮತಾ ಬ್ಯಾನರ್ಜಿ (Mamata Banerjee) ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ. ತೃಣಮೂಲ ಕಾಂಗ್ರೆಸ್ (TMC)​ 5 ವರ್ಷಗಳ ನಂತರ ಸಾಂಸ್ಥಿಕ ಚುನಾವಣೆ ನಡೆಸಿತ್ತು. ಅದರಲ್ಲಿ ಟಿಎಂಸಿ ಮುಖ್ಯಸ್ಥರನ್ನಾಗಿ ಮಮತಾ ಬ್ಯಾನರ್ಜಿಯವರನ್ನು ಮತ್ತೊಮ್ಮೆ ಆಯ್ಕೆ ಮಾಡಲಾಗಿದೆ. ಅವರ ವಿರುದ್ಧ ಯಾರೂ ನಾಮ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ತಿಳಿಸಿದ್ದಾರೆ.  ಮಮತಾ ಬ್ಯಾನರ್ಜಿ ಪರವಾಗಿ ಒಟ್ಟು 48 ಪ್ರತಿಪಾದಕರು-ಅನುಮೋದಕರು ನಾಮನಿರ್ದೇಶನ ಮಾಡಿದ್ದರು. ಈ ಸ್ಥಾನಕ್ಕೆ ಇನ್ಯಾರೂ ನಾಮಪತ್ರ ಸಲ್ಲಿಸದೆ ಇರುವ ಕಾರಣ ಮಮತಾ ಬ್ಯಾನರ್ಜಿಯವರನ್ನೇ ಅವಿರೋಧವಾಗಿ ಮರು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. 

ಮಮತಾ ಬ್ಯಾನರ್ಜಿ ಕಾಂಗ್ರೆಸ್​​ನಿಂದ ಹೊರಬಂದ ಬಳಿಕ 1998ರಲ್ಲಿ ಟಿಎಂಸಿಯನ್ನು ಸ್ಥಾಪಿಸಿದರು. ಅಲ್ಲಿಂದಲೂ ಅದರ ಮುಖ್ಯಸ್ಥರಾಗಿದ್ದಾರೆ. 2001 ಮತ್ತು 2006 ವಿಧಾನಸಭೆ ಚುನಾವಣೆ ಸೋತರೂ ಕೂಡ 2011ರ ವಿಧಾನಸಭೆ ಚುನಾವಣೆಯನ್ನು ಪಕ್ಷ ಗೆದ್ದಿತು. ಅಲ್ಲಿಂದಲೂ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿದ್ದಾರೆ. ಈ ಬಾರಿ ಸತತ ಮೂರನೇ ಬಾರಿಗೆ ಮುಖ್ಯಮಂತ್ರಿ ಹುದ್ದೆಗೆ ಏರಿದ್ದಾರೆ. ಇವರ ಪಕ್ಷವೀಗ ಬಿಜೆಪಿಯ ಕಟ್ಟಾ ವಿರೋಧ ಪಕ್ಷವಾಗಿ ಬೆಳೆದಿದೆ.

ಉತ್ತರ ಪ್ರದೇಶದಿಂದ ಸ್ಪರ್ಧೆ ತೃಣಮೂಲ ಕಾಂಗ್ರೆಸ್​ 2024ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲೂ ಸ್ಪರ್ಧಿಸಲಿದೆ ಎಂದು ಇಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು. ಬಿಜೆಪಿ ಕೇಂದ್ರದಲ್ಲಿ ಸರ್ಕಾರ ರಚಿಸಲು ಬಿಡಬಾರದು. ಹೀಗಾಗಿ ಎಲ್ಲ ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಾಗಬೇಕು ಎಂದು ಹೇಳಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ, ನಾವು ಜನರೊಂದಿಗೆ ಕೆಲಸ ಮಾಡುತ್ತೇವೆಯೇ ಹೊರತು ಏಜೆನ್ಸಿಗಳೊಂದಿಗೆ ಅಲ್ಲ,  ಬಿಜೆಪಿಗೆ  ಇ.ಡಿ (Enforcement Directorate), CBI (Central Bureau Of Investigation) ಮತ್ತು ಹಣವೆಂಬುದು ಆಭರಣಗಳಂತೆ ಎಂದು ವ್ಯಂಗ್ಯವಾಡಿದರು. ಹಾಗೇ, ಪಶ್ಚಿಮ ಬಂಗಾಳ ಜಗದೀಪ್​ ಧನಕರ್​ ವಿರುದ್ಧ ಕೂಡ ಕಿಡಿಕಾರಿದರು. ನಮ್ಮ ರಾಜ್ಯದಲ್ಲಿ ಕೂಡ ಬಿಜೆಪಿ ದಳ್ಳಾಳಿಗಳು ಇದ್ದಾರೆ. ಈ ದಲ್ಲಾಳಿಗಳು ಪೆಗಾಸಸ್​​ಗಿಂತಲೂ ಅಪಾಯಕಾರಿ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಹಕಾರ ಇಲ್ಲವೆಂಬುದು ಗೊತ್ತೇ ಇದೆ. ಇತ್ತೀಚೆಗಷ್ಟೇ  ರಾಜ್ಯಪಾಲ ಜಗದೀಪ್ ಧನಕರ್ ಅವರ ಟ್ವಿಟರ್ ಖಾತೆಯನ್ನು ನಿರ್ಬಂಧಿಸಿರುವುದನ್ನು  ಮಮತಾ ಬ್ಯಾನರ್ಜಿ (Mamata Banerjee) ಒಪ್ಪಿಕೊಂಡಿದ್ದರು. ರಾಜ್ಯಪಾಲ ಜಗದೀಪ್ ಧನಕರ್ ಅವರು “ಫೋನ್ ಟ್ಯಾಪಿಂಗ್” ಮಾಡಿದ್ದಾರೆ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಬೆದರಿಕೆ ಹಾಕಿದ್ದಾರೆ ಎಂದೂ ಆರೋಪಿಸಿದ್ದರು.

ಇದನ್ನೂ ಓದಿ: ರಿಲೀಸ್ ಡೇಟ್​​ ಘೋಷಿಸಿಕೊಂಡ ಅಜಿತ್​ ‘ವಲಿಮೈ’ ಚಿತ್ರ; ಕನ್ನಡ ಸಿನಿಮಾಗಳು ನೀಡಲಿವೆ ಪೈಪೋಟಿ