ಗುವಾಹಾಟಿ: ಇಬ್ಬರು ವ್ಯಕ್ತಿಗಳು ಮಾಟ-ಮಂತ್ರ ಮಾಡಿ ಯುವತಿಯನ್ನು ಸಾಯಿಸಿದ್ದಾರೆ ಎಂದು ಆರೋಪಿಸಿ, ಗ್ರಾಮಸ್ಥರು ಆ ಇಬ್ಬರೂ ವ್ಯಕ್ತಿಗಳನ್ನು ಬರ್ಬರವಾಗಿ ಸಾಯಿಸಿದ್ದಾರೆ. 50 ವರ್ಷದ ಮಹಿಳೆ ಮತ್ತು 28 ವರ್ಷದ ಯುವಕನ ತಲೆ ಕಡಿದು, ಅವರ ಮೃತದೇಹವನ್ನು ಸುಟ್ಟು ಹಾಕಿರುವ ಘಟನೆ ಅಸ್ಸಾಂನ ಕರ್ಬಿ ಆಂಗ್ಲೋಂಗ್ನಲ್ಲಿ ನಡೆದಿದೆ.
ಶುಕ್ರವಾರ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 9 ಜನರನ್ನು ಬಂಧಿಸಿದ್ದಾರೆ. ಯುವಕ ಮತ್ತು ಮಹಿಳೆಯಿಬ್ಬರು ಹಲವು ದಿನಗಳಿಂದ ಮಾಟ-ಮಂತ್ರದಲ್ಲಿ ತೊಡಗಿದ್ದರು. ಶುಕ್ರವಾರದಂದು ಯುವತಿಯೊಬ್ಬಳ ಮೇಲೆ ಮಾಟ-ಮಂತ್ರದ ಪ್ರಯೋಗ ಮಾಡಿದ್ದರು. ಆದರೆ, ಆ ಯುವತಿ ಸಾವನ್ನಪ್ಪಿದ್ದಳು ಎಂದು ತಿಳಿದುಬಂದಿದೆ.
ಇದರಿಂದ ಸಿಟ್ಟಿಗೆದ್ದ ಸ್ಥಳೀಯರು ಅರೋಪಿಗಳಿಬ್ಬರ ತಲೆ ಕಡಿದು, ಕೊಲೆಗೈದಿದ್ದಾರೆ. ಬಳಿಕ ಅವರ ಮೃತದೇಹವನ್ನ ಸುಟ್ಟು ಹಾಕಿದ್ದಾರೆ ಎಂದು ಹೇಳಲಾಗಿದೆ. ಇನ್ನು ಘಟನೆಯಲ್ಲಿ ಭಾಗಿಯಾಗಿದ್ದ ಮತ್ತಷ್ಟು ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.
Published On - 2:05 pm, Sat, 3 October 20