ಕುಡಿದ ಮತ್ತಿನಲ್ಲಿ ಹಾವಿಗೆ ಮುತ್ತು ಕೊಡಲು ಹೋಗಿ ಯುವಕ ಸಾವು
ಕುಡಿದ ಮತ್ತಿನಲ್ಲಿ ಹಾವಿಗೆ ಮುತ್ತು ಕೊಡಲು ಹೋಗಿ ಯುವಕನೊಬ್ಬರ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ. ಹಾವಿನ ಜತೆ ಚಿತ್ರೀಕರಣ ಮಾಡುವಾಗ ಹಾವು ಕಚ್ಚಿದೆ, ಅಹಿರೌಲಿ ಗ್ರಾಮದ ರೋಹಿತ್ ಜೈಸ್ವಾಲ್ ಎಂಬ ಯುವಕ ಮದ್ಯದ ಅಮಲಿನಲ್ಲಿ ಹಾವಿನೊಂದಿಗೆ ಆಟವಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು.

ವೀಡಿಯೋದಲ್ಲಿ, ಜೈಸ್ವಾಲ್ ಶಿವನ ರೂಪವಾದ ಮಹಾಕಾಲ್ ಆಗಿ ನಟಿಸುತ್ತಿರುವುದನ್ನು ಕಾಣಬಹುದು. ಹಾವಿಗೆ ತನ್ನನ್ನು ಕಚ್ಚುವಂತೆ ಸವಾಲು ಹಾಕುತ್ತಿದ್ದ, ಹಾವನ್ನು ಕುತ್ತಿಗೆ ಹಾಗೂ ಕೈಗೆ ಸುತ್ತಿಕೊಂಡಿದ್ದಾನೆ, ಬಳಿಕ ನಾಲಿಕೆ ತೆರೆದು ನಾಲಿಗೆಗೆ ಕಚ್ಚುವಂತೆ ಹಾವಿಗೆ ಹೇಳಿದ್ದಾನೆ. ಸಿಗರೇಟ್ ಸೇದುವುದು ಹಾಗೂ ಹಾವಿಗೆ ಹೊಡೆಯುವುದು ಹೀಗೆ ಮಾನಸಿಕ ಅಸ್ವಸ್ಥನಂತೆ ಆಡಿದ್ದಾನೆ.
ಕ್ರೈಟ್ ಎಂಬ ಹಾವು ಜೈಸ್ವಾಲ್ಗೆ ಕಚ್ಚಿದೆ, ಕೂಡಲೇ ಆತ ಮೃತಪಟ್ಟಿದ್ದಾನೆ. 4 ನಿಮಿಷ 38 ಸೆಕೆಂಡುಗಳ ಅವಧಿಯ ಈ ವಿಡಿಯೋವನ್ನು ಜೈಸ್ವಾಲ್ ಚಿತ್ರೀಕರಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಮತ್ತಷ್ಟು ಓದಿ: ನೋಯ್ಡಾದಲ್ಲಿ ರೇವ್ ಪಾರ್ಟಿಗಳಿಗಾಗಿ ಹಾವಿನ ವಿಷ: ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ಕೇಸ್
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಹಾವು ಕಡಿತದಿಂದ ಸಾವು ಸಂಭವಿಸಿದೆ ಎಂಬ ಮಾಹಿತಿ ಮೇರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಖುಖುಂಡು ಪೊಲೀಸ್ ಠಾಣೆಯ ಪ್ರಭಾರಿ ಸಂತೋಷ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಆರು ಮಂದಿ ಒಡಹುಟ್ಟಿದವರಲ್ಲಿ ಕಿರಿಯವನಾದ ಜೈಸ್ವಾಲ್ ಅವಿವಾಹಿತನಾಗಿದ್ದ. ಅವರ ಪೋಷಕರು ಸಿಲಿಗುರಿಯಲ್ಲಿ ವಾಸಿಸುತ್ತಿದ್ದರೆ, ಅವರ ಇತರ ಸಹೋದರರು ಗ್ರಾಮದ ಹೊರಗೆ ಕೆಲಸ ಮಾಡುತ್ತಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ