ಪುಟ್ಟಾ ಇಲ್ಲಿ ಮೀನಿದೆ ನೋಡು ಎಂದು ಕರೆದು ಕಾಲುವೆಗೆ ತಳ್ಳಿ ತಂದೆಯಿಂದಲೇ ಮಗಳ ಹತ್ಯೆ

ಮಗಳಿಗೆ ಮೀನು ತೋರಿಸುವುದಾಗಿ ಕರೆದೊಯ್ದು, ಕಾಲುವೆಗೆ ತಳ್ಳಿ ತಂದೆಯೊಬ್ಬ ಕೊಲೆ ಮಾಡಿರುವ ಘಟನೆ ಗುಜರಾತ್​​ನಲ್ಲಿ ನಡೆದಿದೆ. ಬಾಲಕಿ ಜಾರಿ ಬಿದ್ದಿಲ್ಲ, ಬದಲಿಗೆ ಪತಿಯೇ ನರ್ಮದಾ ಕಾಲುವೆಗೆ ತಳ್ಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜೂನ್ 10ರಂದು ಖೇಡಾ ನಿವಾಸಿಗಳಾದ ವಿಜಯ್ ಸೋಲಂಕಿ ಮತ್ತು ಅಂಜನಾ ತಮ್ಮ ಹಿರಿಯ ಮಗಳು ಭೂಮಿಕಾ ಜತೆ ಅಲ್ಲೇ ಹತ್ತಿರದ ದೇವಸ್ಥಾನಕ್ಕೆ ಭೇಟಿ ನೀಡಲು ಹೊರಟಿದ್ದರು. ಮೂವರು ತಮ್ಮ ದ್ವಿಚಕ್ರ ವಾಹನದಲ್ಲಿ ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ಅಂಜನಾ ತನ್ನ ಹೆತ್ತವರನ್ನು ಭೇಟಿಯಾಗಬೇಕೆಂದಿದ್ದರು. ಅದಕ್ಕೆ ವಿಜಯ್ ಜಗಳ ಆರಂಭಿಸಿದ್ದ. ನನಗೆ ಗಂಡು ಮಗು ಬೇಕಿತ್ತು, ಆದರೆ ನೀನು ಹೆಣ್ಣುಮಗುವನ್ನು ಹೆತ್ತಿದ್ದೀಯಾ ಎಂದು ಕೂಗಾಡಲು ಶುರು ಮಾಡಿದ್ದ.

ಪುಟ್ಟಾ ಇಲ್ಲಿ ಮೀನಿದೆ ನೋಡು ಎಂದು ಕರೆದು ಕಾಲುವೆಗೆ ತಳ್ಳಿ ತಂದೆಯಿಂದಲೇ ಮಗಳ ಹತ್ಯೆ
ಕೊಲೆ
Image Credit source: NDTV

Updated on: Jul 16, 2025 | 12:07 PM

ಗುಜರಾತ್, ಜುಲೈ 16: ಪುಟ್ಟಾ ಇಲ್ನೋಡು ಮೀನಿದೆ ಎಂದು ಮಗಳನ್ನು ಕರೆದು ಕಾಲುವೆಗೆ ತಳ್ಳಿ ತಂದೆಯೊಬ್ಬ ಕೊಲೆ(Murder) ಮಾಡಿರುವ ಹೃದಯವಿದ್ರಾವಕ ಘಟನೆ ಗುಜರಾತ್​​ನಲ್ಲಿ ನಡೆದಿದೆ. ಮೊದಲು ಇದು ಆಕಸ್ಮಿಕ ಸಾವೆಂದು ಎಲ್ಲರೂ ಭಾವಿಸಿದ್ದರು. ಆದರೆ ಬಾಲಕಿಯ ತಾಯಿ ಅಂಜನಾ ಸೋಲಂಕಿ ಬೇರೆಯದನ್ನೇ ಹೇಳಿದ್ದಾರೆ, ತನ್ನ ಗಂಡನೇ ತನ್ನ 7 ವರ್ಷದ ಮಗುವನ್ನು ಕೊಲೆ ಮಾಡಿರುವುದಾಗಿ ಆರೋಪಿಸಿದ್ದಾರೆ.

ಬಾಲಕಿ ಜಾರಿ ಬಿದ್ದಿಲ್ಲ, ಬದಲಿಗೆ ಪತಿಯೇ ನರ್ಮದಾ ಕಾಲುವೆಗೆ ತಳ್ಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜೂನ್ 10ರಂದು ಖೇಡಾ ನಿವಾಸಿಗಳಾದ ವಿಜಯ್ ಸೋಲಂಕಿ ಮತ್ತು ಅಂಜನಾ ತಮ್ಮ ಹಿರಿಯ ಮಗಳು ಭೂಮಿಕಾ ಜತೆ ಅಲ್ಲೇ ಹತ್ತಿರದ ದೇವಸ್ಥಾನಕ್ಕೆ ಭೇಟಿ ನೀಡಲು ಹೊರಟಿದ್ದರು. ಮೂವರು ತಮ್ಮ ದ್ವಿಚಕ್ರ ವಾಹನದಲ್ಲಿ ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ಅಂಜನಾ ತನ್ನ ಹೆತ್ತವರನ್ನು ಭೇಟಿಯಾಗಬೇಕೆಂದಿದ್ದರು. ಅದಕ್ಕೆ ವಿಜಯ್ ಜಗಳ ಆರಂಭಿಸಿದ್ದ. ನನಗೆ ಗಂಡು ಮಗು ಬೇಕಿತ್ತು, ಆದರೆ ನೀನು ಹೆಣ್ಣುಮಗುವನ್ನು ಹೆತ್ತಿದ್ದೀಯಾ ಎಂದು ಕೂಗಾಡಲು ಶುರು ಮಾಡಿದ್ದ ಎಂದು ಅಂಜನಾ ತಿಳಿಸಿದ್ದಾರೆ.

ಕೆಲವು ನಿಮಿಷಗಳ ನಂತರ ಅಂದರೆ ರಾತ್ರಿ 8 ಗಂಟೆ ಸುಮಾರಿಗೆ ಆ ವ್ಯಕ್ತಿ ಕಪದ್ವಾಂಜ್​ನ ವಾಘಾವತ್ ಸೇತುವೆಯ ಮೇಲೆ ಬೈಕ್ ನಿಲ್ಲಿಸಿ ಭೂಮಿಕಾಳನ್ನು ವೇಗವಾಗಿ ಹರಿಯುವ ನರ್ಮದಾ ಕಾಲುವೆಗೆ ತಳ್ಳಿದ್ದಾನೆ. ಈ ಘಟನೆಯನ್ನು ಯಾರ ಬಳಿಯಾದರೂ ಹೇಳಿದರೆ ವಿಚ್ಛೇದನ ಕೊಡುವುದಾಗಿ ಎಚ್ಚರಿಕೆ ನೀಡಿದ್ದ. ಅಂಜನಾ ಹೇಗೋ ಆ ದುಃಖವನ್ನು ಸಹಿಸಿಕೊಂಡಿದ್ದರು.

ಮತ್ತಷ್ಟು ಓದಿ: Shocking News: ಅಮ್ಮ ಕ್ಷಮಿಸಿಬಿಡು; ತಾಯಿಯನ್ನು ಕೊಂದು ಇನ್​ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿದ ಮಗ

ಜೂನ್ 10ರಂದು ಏನಾಗಿತ್ತು?

ಖೇಡಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಗಾಧಿಯಾ ಪ್ರಕಾರ, ಮೀನುಗಳನ್ನು ನೋಡಲು ಕಾಲುವೆ ಬಳಿ ನಿಂತಿದ್ದಾಗ ಭೂಮಿಕಾ ಜಾರಿ ಬಿದ್ದು ಸಾವನ್ನಪ್ಪಿದ್ದಳು ಎಂದು ಮೊದಲು ವರದಿ ಮಾಡಲಾಗಿತ್ತು. ಪೊಲೀಸರಿಗೆ ಆಕೆಯ ಚಪ್ಪಲಿ ಹಾಗೂ ಮೃತದೇಹ ಸಿಕ್ಕಿತ್ತು. ಆಕಸ್ಮಿಕ ಸಾವು ಎಂದೇ ಪೊಲೀಸರು ಅಂದುಕೊಂಡಿದ್ದರು. ನನ್ನ ಪತಿ ನನಗೆ ತಿಳಿಯದಂತೆ ಭೂಮಿಕಾಳನ್ನು ಕಾಲುವೆಯ ದಡದಲ್ಲಿ ನಿಲ್ಲಿಸಿದರು. ಮೀನುಗಳನ್ನು ತೋರಿಸುತ್ತಿರುವುದಾಗಿ ಹೇಳಿದ ಅವರು, ಆದರೆ ನೇರವಾಗಿ ಕಾಲುವೆಗೆ ತಳ್ಳಿದರು. ನನಗೆ ಏನೂ ಅರ್ಥವಾಗುವ ಮೊದಲೇ ಭೂಮಿಕಾ ಕಾಲುವೆಗೆ ಬಿದ್ದಳು ಮತ್ತು ನಾನು ಅಸಹಾಯಕಳಾಗಿ ನಿಂತಿದ್ದೆ ಎಂದು ಅಂಜನಾ ಅಳಲು ತೋಡಿಕೊಂಡಿದ್ದಾರೆ.

ವಿಜಯ್ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ, ಗಂಡು ಮಗು ಇಲ್ಲ ಎನ್ನುವ ಕೋಪಕ್ಕೆ ಈ ಕೃತ್ಯವೆಸಗಿದ್ದಾನೆ. ಎರಡನೇ ಮಗುವಿಗೆ ಜನ್ಮ ನೀಡಿದಾಗಿನಿಂದ ಗಂಡ ನಿರಂತರ ಕಿರುಕುಳ ಕೊಡುತ್ತಿದ್ದಾನೆ ಎಂದು ಅಂಜನಾ ಆರೋಪಿಸಿದ್ದಾರೆ. ವಿಜಯ್​​ನನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:05 pm, Wed, 16 July 25

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us