Video ಛತ್ತೀಸಗಡದ ಆಸ್ಪತ್ರೆಯೊಂದರಲ್ಲಿ ಕೂಲರ್ ಆಫ್ ಮಾಡಬೇಡಿ ಎಂದ ವ್ಯಕ್ತಿಗೆ ಮಹಿಳೆಯಿಂದ ಚಪ್ಪಲಿಯೇಟು
ವಿಡಿಯೊದಲ್ಲಿ ಒಬ್ಬ ವ್ಯಕ್ತಿ ನೆಲದ ಮೇಲೆ ಕುಳಿತಿರುವುದನ್ನು ಕಾಣಬಹುದು, ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಕೋಪಗೊಂಡು ಚಪ್ಪಲಿಯಿಂದ ಹೊಡೆಯುತ್ತಿದ್ದಾರೆ. ಆಕೆ ಆತನಿಗೆ ಕಾಲಿನಿಂದ ತುಳಿಯುತ್ತಿದ್ದು...
ರಾಯ್ಪುರ್: ಛತ್ತೀಸಗಡದ ( Chhattisgarh) ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬರು ವ್ಯಕ್ತಿಗೆ ಚಪ್ಪಲಿಯಲ್ಲಿ ಹೊಡೆದು, ಕಾಲಲ್ಲಿ ತುಳಿಯುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಏರ್ ಕೂಲರ್ ಆಫ್ ಮಾಡಬೇಡಿ ಎಂದಿದ್ದಕ್ಕೆ ಕೋಪಗೊಂಡ ಮಹಿಳೆ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದಾರೆ. ಇಲ್ಲಿನ ಅಂಬಿಕಾಪುರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಆವರಣದಲ್ಲಿ ಸೋಮವಾರ ಈ ಘಟನೆ ನಡೆದಿದೆ. ವಿಡಿಯೊದಲ್ಲಿ ಒಬ್ಬ ವ್ಯಕ್ತಿ ನೆಲದ ಮೇಲೆ ಕುಳಿತಿರುವುದನ್ನು ಕಾಣಬಹುದು, ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಕೋಪಗೊಂಡು ಚಪ್ಪಲಿಯಿಂದ ಹೊಡೆಯುತ್ತಿದ್ದಾರೆ. ಆಕೆ ಆತನಿಗೆ ಕಾಲಿನಿಂದ ತುಳಿಯುತ್ತಿದ್ದು, ಅವಳ ಪಕ್ಕದಲ್ಲಿ ನಿಂತಿರುವ ಇನ್ನೊಬ್ಬ ವ್ಯಕ್ತಿ ಕೋಲಿನಿಂದ ಆ ವ್ಯಕ್ತಿಗೆ ತಿವಿಯುವುದನ್ನೂ ಕಾಣಬಹುದು.
ವರದಿಗಳ ಪ್ರಕಾರ, ವ್ಯಕ್ತಿ ರಾತ್ರಿ ಆಸ್ಪತ್ರೆಯ ವೇಟಿಂಗ್ ಹಾಲ್‌ನಲ್ಲಿ ಮಲಗಿದ್ದಾಗ ಏರ್ ಕೂಲರ್ ಆನ್ ಆಗಿದ್ದು, ಮಹಿಳೆ ಬಂದು ಅದನ್ನು ಸ್ವಿಚ್ ಆಫ್ ಮಾಡಿದ್ದಾರೆ. ಕೂಲರ್ ಅನ್ನು ಏಕೆ ಆಫ್ ಮಾಡಿದ್ದೀರಿ ಎಂದು ಆಕೆಯನ್ನು ಕೇಳಿದಾಗ ಮಹಿಳೆ ಆತನ ಮೇಲೆ ಹಲ್ಲೆ ನಡೆಸಿದ್ದಾಳೆ. ಆದರೆ ಆ ವ್ಯಕ್ತಿ ಯಾವುದೇ ಪ್ರತಿಕ್ರಿಯೆ ಇಲ್ಲ ಎಂಬಂತೆ ಒದೆ ತಿನ್ನುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಪರಿಸ್ಥಿತಿ ಹದಗೆಡುವ ಮುನ್ನವೇ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವ್ಯಕ್ತಿಯನ್ನು ಕರೆದೊಯ್ದಿದ್ದಾರೆ.
छतीसगढ़ के अंबिकापुर मेडिकल कॉलेज के OPD में एक महिला ने युवक की पिटाई कर दी. बताया जा रहा है कि महिला ने ये सिर्फ़ इसलिए किया क्योंकि हॉल में चल रहे कुलर को महिला ने बंद कर दिया था. इस व्यक्ति ने महिला से कूलर बंद करने का कारण पूछा लिया. pic.twitter.com/BrZ2xvL4Sa
— Priya singh (@priyarajputlive) October 19, 2022
ಆ ವ್ಯಕ್ತಿ ಯಾರು ಎಂಬುದು ಗೊತ್ತಿಲ್ಲ, ಆತ ಮಲಗುವುದಕ್ಕಾಗಿ ಜಾಗ ಹುಡುಕಿ ಇಲ್ಲಿ ಬಂದಿದ್ದ ಎಂದು ಆಸ್ಪತ್ರೆಯ ಆಡಳಿತ ಹೇಳಿದೆ. ಆಸ್ಪತ್ರೆಯು ತನ್ನ ಆವರಣಕ್ಕೆ ಇಂತಹ ಅನಧಿಕೃತ ಪ್ರವೇಶಗಳ ಬಗ್ಗೆ ನಿಗಾ ಇಡುತ್ತದೆ ಎಂದು ಅದು ಹೇಳಿದೆ.
Published On - 3:42 pm, Thu, 20 October 22