ಮಹಾರಾಷ್ಟ್ರ: ಸ್ನೇಹಿತರ ಕಣ್ಣೆದುರಲ್ಲೇ ನೀರಿನಲ್ಲಿ ಕೊಚ್ಚಿಹೋದ ಯುವಕ

|

Updated on: Jul 15, 2024 | 11:41 AM

ಮಹಾರಾಷ್ಟ್ರದ ರತ್ನಗಿರಿಯ ನದಿಯಲ್ಲಿ ಯುವಕನೊಬ್ಬ ತನ್ನ ಸ್ನೇಹಿತರ ಮುಂದೆಯೇ ನೀರಿನಲ್ಲಿ ಕೊಚ್ಚಿಹೋಗಿರುವ ಘಟನೆ ನಡೆದಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿವೆ.

ಮಹಾರಾಷ್ಟ್ರ: ಸ್ನೇಹಿತರ ಕಣ್ಣೆದುರಲ್ಲೇ ನೀರಿನಲ್ಲಿ ಕೊಚ್ಚಿಹೋದ ಯುವಕ
ನೀರಿನಲ್ಲಿ ಕೊಚ್ಚಿಹೋದ ಯುವಕ
Follow us on

ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿರುವ ನದಿಗಳು ಉಕ್ಕಿ ಹರಿಯುತ್ತಿವೆ. ಯುವಕನೊಬ್ಬ ರತ್ನಗಿರಿಯಲ್ಲಿ ನದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ಸ್ನೇಹಿತರು ಸಹಾಯ ಮಾಡಲು ಪ್ರಯತ್ನಿಸಿದರೂ ಕೂಡ ನೀರಿನ ಸೆಳೆತ ಜೋರಾಗಿತ್ತು, ಸ್ನೇಹಿತರ ಕಣ್ಣೆದುರಲ್ಲೇ ಯುವಕ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.

ಮಾಹಿತಿ ಪ್ರಕಾರ, ಯುವಕನ ಹೆಸರು ಜಯೇಶ್​ ಅಂಬ್ರೆ,ಸದ್ಯ ಕೊಂಕಣದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ಗ್ರಾಮಗಳು ಜಲಾವೃತಗೊಂಡಿವೆ. ಕೊಂಕಣದ ಹಲವೆಡೆ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದೆ.

ಹಲವೆಡೆ ರಸ್ತೆಗಳು ಕೊಚ್ಚಿ ಹೋಗಿದ್ದು, ಭೂಕುಸಿತದಿಂದಾಗಿ ಹಲವು ಮಾರ್ಗಗಳಲ್ಲಿ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ನಾಗರಿಕರು ಎಚ್ಚರಿಕೆ ವಹಿಸುವಂತೆ ಆಡಳಿತ ಮಂಡಳಿಯೂ ಮನವಿ ಮಾಡಿದೆ. ಹೀಗಿದ್ದರೂ ನದಿ, ಅಣೆಕಟ್ಟುಗಳ ಬಳಿ ಹೋಗಿ ಜನರು ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಕೊಂಕಣದಲ್ಲಿ ಮಳೆಯಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಲಾಗಿದೆ.

ಮತ್ತಷ್ಟು ಓದಿ: ಮಹಾರಾಷ್ಟ್ರದಲ್ಲೂ ಭಾರೀ ಮಳೆ, ಬಂದರು ನಗರ ರತ್ನಗಿರಿ ಸಂಪೂರ್ಣವಾಗಿ ಜಲಾವೃತ, ಮುಂಬೈಯಲ್ಲಿ ಕುಂಭದ್ರೋಣ

ರಕ್ಷಣಾ ತಂಡಗಳು ಅವನನ್ನು ಹುಡುಕುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಆತ ನೀರಿಗೆ ಇಳಿದ ಬಳಿಕ ತನ್ನನ್ನು ತಾನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗಿಲ್ಲ, ನೀರಿನ ಸುಳಿಗೆ ಸಿಲುಕಿದ್ದಾನೆ. ವೇಗವಾಗಿ ಹರಿಯುವ ನೀರಿನಿಂದ ಹೊರಬರಲು ಅವನು ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾನೆ, ದುರಾದೃಷ್ಟವಶಾತ್ ಕೊಚ್ಚಿ ಹೋಗಿದ್ದಾನೆ.

ಸದ್ಯಕ್ಕೆ ಯುವಕನ ಪತ್ತೆಯಾಗಿಲ್ಲ. ಆತನ ಪತ್ತೆಗೆ ನಗರಸಭೆ ಹಾಗೂ ಆಡಳಿತ ಮಂಡಳಿ ಶೋಧ ಕಾರ್ಯ ಆರಂಭಿಸಿದೆ. ಸದ್ಯ ಮಹಾರಾಷ್ಟ್ರದ ವಿವಿಧೆಡೆ ಭಾರೀ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಅದರಲ್ಲೂ ರತ್ನಗಿರಿಯಲ್ಲಿ ಭಾರೀ ಮಳೆಯಾಗುತ್ತಿದೆ.

ಇತ್ತೀಚೆಗಷ್ಟೇ ರತ್ನಗಿರಿಯಲ್ಲಿ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದ್ದು, ಖೇಡ್ ತಾಲೂಕಿನ ಶಿವತಾರ-ನಾಮದಾರ ವಾಡಿ ರಸ್ತೆಯ ರಭಸಕ್ಕೆ ನೀರಿನ ಹರಿವು ಕುಸಿದಿತ್ತು. ನೀರಿನ ರಭಸಕ್ಕೆ ರಸ್ತೆಯ ಸಾಕಷ್ಟು ಭಾಗ ಕೊಚ್ಚಿ ಹೋಗಿದೆ.

ಭಾರತೀಯ ಹವಾಮಾನ ಇಲಾಖೆ (IMD) ರತ್ನಗಿರಿ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿದೆ. ರಾಯಗಢ, ಸಿಂಧುದುರ್ಗ, ಪುಣೆ, ಸತಾರಾ, ಕೊಲ್ಹಾಪುರ, ಪರ್ಭಾನಿ, ಹಿಂಗೋಲಿ, ಅಮರಾವತಿ, ವಾರ್ಧಾ ಮತ್ತು ಯವತ್ಮಾಲ್‌ಗೆ ಆರೆಂಜ್ ಅಲರ್ಟ್. ಮುಂಬೈ, ಥಾಣೆ, ಪಾಲ್ಘರ್ ಮತ್ತು ಧುಲೆಯಲ್ಲಿ ಇಂದು ಹಳದಿ ಅಲರ್ಟ್ ಘೋಷಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ