ಮಹಾರಾಷ್ಟ್ರ: ಬಿಜೆಪಿಯ ಪಂಕಜಾ ಮುಂಡೆ ಚುನಾವಣೆಯಲ್ಲಿ ಸೋತರೆ ಸತ್ತು ಹೋಗುತ್ತೇನೆ ಎಂದಿದ್ದ ವ್ಯಕ್ತಿ ಬಸ್ ಅಪಘಾತದಲ್ಲಿ ಸಾವು
ಮಹಾರಾಷ್ಟ್ರದ ಬಿಜೆಪಿ ನಾಯಕಿ ಪಂಕಜಾ ಮುಂಡೆ ಒಂದೊಮ್ಮೆ ಚುನಾವಣೆಯಲ್ಲಿ ಸೋತರೆ ಸಾಯುತ್ತೇನೆ ಎಂದು ಹೇಳಿದ್ದ ವ್ಯಕ್ತಿಯೊಬ್ಬ ಬಸ್ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಲೋಕಸಭಾ ಚುನಾವಣೆ(Lok Sabha Eelction)ಯಲ್ಲಿ ಒಂದೊಮ್ಮೆ ಬಿಜೆಪಿಯ ಪಂಕಜಾ ಮುಂಡೆ( Pankaja Munde)ಯವರೆ ಸೋಲು ಅನುಭವಿಸಿದರೆ ಸಾಯುತ್ತೇನೆ ಎಂದು ಹೇಳಿದ್ದ ವ್ಯಕ್ತಿ ಬಸ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಪಂಕಜಾ ಮುಂಡೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಪಂಕಜಾ ಮುಂಡೆಯವರು ಸೋತರೆ ನಾನು ಇರುವುದಿಲ್ಲ ಎಂದು ಹೇಳಿದ್ದ ವ್ಯಕ್ತಿ ಬಸ್ನಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಅಹ್ಮದ್ಪುರ-ಅಂಧೋರಿ ರಸ್ತೆಯ ಬೋರ್ಗಾಂವ್ ಪಾಟಿ ಬಳಿ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಇದು ಆತ್ಮಹತ್ಯೆಯ ಸಾವು ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಲಾತೂರ್‌ನ ಅಹ್ಮದ್‌ಪುರದ ಯೆಸ್ಟರ್‌ನ ಟ್ರಕ್ ಡ್ರೈವರ್ ಆಗಿದ್ದ ಸಚಿನ್ ಕೊಂಡಿಬಾ ಮುಂಡೆ ಎಂಬುವವರು ಮೃತರು. ಲೋಕಸಭಾ ಚುನಾವಣೆಗೂ ಮುನ್ನ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ ಸಚಿನ್ ಒಂದೊಮ್ಮೆ ಪಂಕಜಾ ಸೋತರೆ ತಾನು ಸಾಯುತ್ತೇನೆ ಎಂದು ಹೇಳಿದ್ದ. ಅದನ್ನು ಯಾರು ಕೂಡ ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪಂಕಜಾ ಮುಂಡೆ ಅವರು ಬೀಡ್ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಬಜರಂಗ್ ಸೋನಾವಾನೆ ವಿರುದ್ಧ 6,553 ಮತಗಳಿಂದ ಸೋತರು.
ಮತ್ತಷ್ಟು ಓದಿ: ಪುಣೆ ಪೋರ್ಷೆ ಕಾರು ಅಪಘಾತ: ಆರೋಪಿ ವೇದಾಂತ್ ಅಗರ್ವಾಲ್ ತಂದೆಗೆ ಸೇರಿದ ರೆಸಾರ್ಟ್ ನೆಲಸಮ
ಆತ ಖಿನ್ನತೆಗೆ ಒಳಗಾಗಿದ್ದ ಒಬ್ಬನೇ ಇರುತ್ತಿದ್ದ ಎಂದು ಕುಟುಂಬದವರು ತಿಳಿಸಿದ್ದಾರೆ. ಪೊಲೀಸರು ಬಸ್ ಚಾಲಕನನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಇದು ಅಪಘಾತವೇ ಅಥವಾ ಆತ್ಮಹತ್ಯೆಯೇ ಎಂದು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ. ಸಚಿನ್ ಬಸ್‌ನ ಹಿಂದೆ ನಿಂತಿದ್ದರು ಮತ್ತು ಹಿಮ್ಮುಖವಾಗಿ ಓಡಿಸಿದಾಗ ಸಾವನ್ನಪ್ಪಿದ್ದಾರೆ.
ಪಂಕಜಾ ಮುಂಡೆ ಬೆಂಬಲಿಗರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಮತ್ತೊಂದು ಘಟನೆ ಭಾನುವಾರ ಬೆಳಗ್ಗೆ ಬೀಡ್‌ನಲ್ಲಿ ವರದಿಯಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಬಿಜೆಪಿ ನಾಯಕಿ ಬೀಡ್ ಸ್ಥಾನವನ್ನು ಕಳೆದುಕೊಂಡ ನಂತರ ಪಾಂಡುರಂಗ್ ಸೋನಾವಾನೆ ಎಂದು ಗುರುತಿಸಲಾದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ