ಒಂದು ಕೆಜಿಗೆ 99,999ರೂಗೆ ಮಾರಾಟವಾದ ಅಸ್ಸಾಂನ ಮನೋಹರಿ ಗೋಲ್ಡ್​ ಟೀ ಪೌಡರ್

ಒಂದು ಕೆಜಿ ಮನೋಹರಿ ಗೋಲ್ಡ್​ ಟೀ ಪೌಡರ್ ಬರೋಬ್ಬರಿ 99,999ರೂ ಗೆ ಮಾರಾಟವಾಗುವ ಮೂಲಕ ತನ್ನದೇ ಹಳೆಯ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದೆ.

ಒಂದು ಕೆಜಿಗೆ 99,999ರೂಗೆ ಮಾರಾಟವಾದ ಅಸ್ಸಾಂನ ಮನೋಹರಿ ಗೋಲ್ಡ್​ ಟೀ ಪೌಡರ್
ಮನೋಹರಿ ಗೋಲ್ಡ್​ ಟೀ
Follow us
TV9 Web
| Updated By: Pavitra Bhat Jigalemane

Updated on: Dec 14, 2021 | 4:32 PM

ಗುಹಾವಟಿ: ಅಸ್ಸಾಂನ ಅಪರೂಪದ ಹಾಗೂ ಪ್ರಸಿದ್ಧ ಮನೋಹರಿ ಗೋಲ್ಡ್​ ಟೀ ಪೌಡರ್​ ಈ ಬಾರಿಯೂ ಮಾರಾಟದಲ್ಲಿ ಇತಿಹಾಸ ಸೃಷ್ಟಿಸಿದೆ. ಅಸ್ಸಾಂನಲ್ಲಿ ಮನೋಹರಿ ಗೋಲ್ಡ್​ ಚಹಾ ಪುಡಿ ಸ್ವಾದಿಷ್ಟ ಭರಿತ ಚಹಾಪುಡಿಯೆಂದೇ ಪ್ರಸಿದ್ಧಿ ಪಡೆದಿದೆ. ಈ ಬಾರಿ ಒಂದು ಕೆಜಿ ಮನೋಹರಿ ಗೋಲ್ಡ್​ ಟೀ ಪೌಡರ್ ಬರೋಬ್ಬರಿ 99,999ರೂ ಗೆ ಮಾರಾಟವಾಗುವ ಮೂಲಕ ತನ್ನದೇ ಹಳೆಯ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದೆ. ಹರಾಜಿನಲ್ಲಿ ಸೌರವ್​ ಟೀ ಟ್ರೇಡರ್ಸ್​ ಕಂಪನಿ 99,999ರೂ ಗೆ ಬಿಡ್​ ಮಾಡಿದೆ. ಚಹಾಪುಡಿಯನ್ನು ಗುಹಾವಟಿ ಮೂಲದ ವಿಷ್ಣು ಟೀ ಕಂಪನಿ ಖರೀದಿಸಿದೆ. ಈ ಕಂಪನಿ ಆನ್ಲೈನಲ್ಲಿ ತಮ್ಮ ವೆಬ್ಸೈಟ್​ ಮೂಲಕ ವಿದೇಶಗಳಿಗೂ ಮನೋಹರಿ ಗೋಲ್ಡ್​ ಚಹಾಪುಡಿಯನ್ನು ಮಾರಾಟ ಮಾಡುತ್ತದೆ.

ಕಳೆದ ವರ್ಷ ಇದೇ ಮನೋಹರಿ ಗೋಲ್ಡ್​ ಟೀ ಪುಡಿ ಕಂಟೆಂಪರರಿ ಬ್ರೋಕರ್ಸ್ ಪ್ರೈವೇಟ್​ ಲಿಮಿಟೆಡ್​ನಿಂದ ಹರಾಜಿಗಿಟ್ಟಿದ್ದ ಒಂದು ಕಿಲೋ ಗ್ರಾಮ್​ಗೆ ಚಹಾಪುಡಿ75,000ರೂಗೆ ಮಾರಾಟವಾಗುವ ಮೂಲಕ ದಾಖಲೆ ಮಾಡಿತ್ತು. ಈ ಬಾರಿ 99,999ರೂ. ಮಾರಾಟವಾಗಿ ತನ್ನದೇ ದಾಖಲೆಯನ್ನು ಮುರಿದು, ತನ್ನ ಉತ್ಕೃಷ್ಟತೆಯನ್ನು ಸಾಬೀತುಪಡಿಸಿಕೊಂಡಿದೆ. ಗುಹಾವಟಿ ಟೀ ಮಾರಾಟ ಕೇಂದ್ರದಲ್ಲಿ ನಡೆದ ಹರಾಜಿನಲ್ಲಿ ಮನೋಹರಿ ಗೋಲ್ಡ್​ ಚಹಾಪುಡಿ ಭಾರೀ ಮೊತ್ತಕ್ಕೆ ಮಾರಟವಾಗಿದೆ.

ಮನೋಹರಿ ಗೋಲ್ಡ್​ ಚಹಾಪುಡಿಯನ್ನು ಎಳೆಯ ಎಲೆಗಳಿಂದ ಉತ್ಕೃಷ್ಟ ರೀತಿಯಲ್ಲಿ ತಯಾರಿಸಲಾಗುತ್ತದೆ. ಈ ಮಾದರಿಯ ಟೀ ಎಲೆಗಳು ಬೆಳಗಿನ ಜಾವ 4 ಗಂಟೆಯಿಂದ 6 ಗಂಟೆಯವರೆಗೆ ಮಾತ್ರ ದೊರೆಯುತ್ತದೆ. ಹೀಗಾಗಿ ಅಸ್ಸಾಂನ ಮನೋಹರಿ ಗೋಲ್ಡ್​ ಚಹಾಪುಡಿಗೆ ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಭಾರೀ ಬೇಡಿಕೆಯಿದೆ. ಅಲ್ಲದೆ ಮನೋಹರಿ ಗೋಲ್ಡ್​ ಚಹಾಪುಡಿಯನ್ನು ಭಾರತದ ಅತ್ಯಂತ ದುಬಾರಿ ಟೀ ಪೌಡರ್​ ಎಂದು ಹೇಳಲಾಗಿದೆ.

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ