Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಡಿಎಸ್​ ಬಿಪಿನ್ ರಾವತ್, 11 ಮಂದಿ ಸೇನಾಧಿಕಾರಿಗಳಿಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ ಡಿಆರ್​ಡಿಒ; ರಾಜನಾಥ್ ಸಿಂಗ್ ಭಾಗಿ

ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್​, ನನ್ನಲ್ಲೀಗ ಸಂತೋಷ ಆಚರಣೆ ಮತ್ತು ದುಃಖದ ಸಮ್ಮಿಶ್ರ ಭಾವವಿದೆ ಎಂದು ಹೇಳಿದ್ದಾರೆ.

ಸಿಡಿಎಸ್​ ಬಿಪಿನ್ ರಾವತ್, 11 ಮಂದಿ ಸೇನಾಧಿಕಾರಿಗಳಿಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ ಡಿಆರ್​ಡಿಒ; ರಾಜನಾಥ್ ಸಿಂಗ್ ಭಾಗಿ
ಡಿಆರ್​ಡಿಒದಿಂದ ಆಯೋಜಿಸಲಾಗಿದ್ದ ವಿಚಾರ ಸಂಕಿರಣ
Follow us
TV9 Web
| Updated By: Lakshmi Hegde

Updated on:Dec 14, 2021 | 4:12 PM

ದೆಹಲಿ: ತಮಿಳುನಾಡಿನ ಸೇನಾ ಹೆಲಿಕಾಪ್ಟರ್​ ಪತನದಲ್ಲಿ ಮೃತಪಟ್ಟ ಸಿಡಿಎಸ್​ (CDS) ಜನರಲ್​ ಬಿಪಿನ್​ ರಾವತ್​ ಮತ್ತು ಇತರ 11 ಮಂದಿ ಸೇನಾಧಿಕಾರಿಗಳಿಗೆ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (DRDO) ವಿಭಿನ್ನವಾಗಿ ಗೌರವ ಸಲ್ಲಿಸಿದೆ. ದೇಶೀಯವಾಗಿ ತಯಾರಿಸಿದ ಶಸ್ತ್ರಾಸ್ತ್ರಗಳನ್ನು ಭಾರತೀಯ ಸಶಸ್ತ್ರಪಡೆಗಳಿಗೆ ಹಸ್ತಾಂತರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದೆ. ಆಜಾದಿ ಕಾ ಅಮೃತಮಹೋತ್ಸವದ ಸಾಂಪ್ರದಾಯಿಕ ವಾರದ ಆಚರಣೆಯ ಭಾಗವಾಗಿ, ಭವಿಷ್ಯಕ್ಕಾಗಿ ತಯಾರಿ ಎಂಬ ವಿಚಾರ ಸಂಕಿರಣವನ್ನು ಡಿಆರ್​ಡಿಒ ಆಯೋಜಿಸಿತ್ತು. ಇದರಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಕೂಡ ಪಾಲ್ಗೊಂಡಿದ್ದಾರೆ. ಹಾಗೇ, ಭಾರತೀಯ ಸೇನೆಯ ಮೂರು ಪಡೆಗಳ (ಭೂ, ವಾಯು ಮತ್ತು ನೌಕಾಪಡೆ)ಮುಖ್ಯಸ್ಥರು ಭಾಗಿಯಾಗಿದ್ದಾರೆ.  

ಸಮಾರಂಭದಲ್ಲಿ ಮಾತನಾಡಿದ ಡಿಆರ್​ಡಿಒ ಡಿಜಿ ಡಾ. ಉಪೇಂದ್ರ ಕುಮಾರ್ ಸಿಂಗ್​ ಮೊದಲು ಬಿಪಿನ್​ ರಾವತ್​ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಹಾಗೇ, ಹಿಂದೊಮ್ಮೆ ಬಿಪಿನ್ ರಾವತ್​ ಮುಂದೆ ಯಾವುದೇ ಯುದ್ಧ ನಡೆದರೂ ಅದರಲ್ಲಿ ದೇಶೀಯವಾಗಿ ತಯಾರಾದ ಶಸ್ತ್ರಾಸ್ತ್ರಗಳ ಮೂಲಕವೇ ಹೋರಾಡಬೇಕು ಎಂದು ಹೇಳಿದ್ದರು ಎಂಬುದನ್ನು ನೆನಪಿಸಿಕೊಂಡರು.  ಹಾಗೇ, ಭಾರತದಲ್ಲೇ ತಯಾರಾದ ಹಲವು ರಕ್ಷಣಾ ಉತ್ಪನ್ನಗಳನ್ನು ಸಶಸ್ತ್ರಪಡೆಗಳಿಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಹಸ್ತಾಂತರ ಮಾಡಿದ್ದಾರೆ. ಅದರಲ್ಲಿ, ಕೌಂಟರ್​ ಡ್ರೋನ್ ಸಿಸ್ಟಂ, ಸ್ಮಾರ್ಟ್ ಆ್ಯಂಟಿ ಏರ್​ಪೀಲ್ಡ್​ ಶಸ್ತ್ರ, ಮೊಡ್ಯೂಲರ್​ ಬ್ರಿಜ್​ ಸಿಸ್ಟಂ ಮತ್ತು ಸುಧಾರಿತ ಚಾಫ್ ತಂತ್ರಜ್ಞಾನಗಳು ಇವೆ.

ಬಳಿಕ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್​, ನನ್ನಲ್ಲೀಗ ಸಂತೋಷ ಆಚರಣೆ ಮತ್ತು ದುಃಖದ ಸಮ್ಮಿಶ್ರ ಭಾವವಿದೆ. ಒಂದೆಡೆ ಡಿಆರ್​ಡಿಒ ಆಜಾದಿ ಕಾ ಅಮೃತ ಮಹೋತ್ಸವದ ಸಪ್ತಾಹವನ್ನು ಆಚರಿಸುತ್ತಿದೆ. ಈ ಬಗ್ಗೆ ಖುಷಿಯಿದೆ. ಆದರೆ ಇನ್ನೊಂದೆಡೆ ನಮ್ಮ ಸಿಡಿಎಸ್​ ಜನರಲ್ ಬಿಪಿನ್ ರಾವತ್​, ಅವರ ಪತ್ನಿ ಮತ್ತು 11 ಸೇನಾ ಅಧಿಕಾರಿಗಳನ್ನು ಕಳೆದುಕೊಂಡ ನೋವು ಇದೆ ಎದು ಹೇಳಿದರು. ಭವಿಷ್ಯದಲ್ಲಿ ಎದುರಾಗಬಹುದಾದ ಮತ್ತು ಸವಾಲಾಗಬಲ್ಲ ಅಪಾಯಗಳನ್ನು ಎದುರಿಸಲು ಮತ್ತು ತಡೆಯಲು ಡಿಆರ್​ಡಿಒ ಈಗಿನಿಂದಲೇ ಪ್ರಯತ್ನಗಳನ್ನು ಮಾಡುತ್ತಿದೆ. ಐಟಿ, ಆರ್ಟಿಫಿಷಿಯಲ್​ ಇಂಟಲಿಜೆನ್ಸ್​ ಮತ್ತು ರೊಬೊಟಿಕ್​ನಂಥ ಯುದ್ಧಸ್ನೇಹಿ ತಾಂತ್ರಿಕ ವಿಧಗಳಲ್ಲಿ ಹೊಸ ಅಧ್ಯಾಯವನ್ನು ಸೇರಿಸುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಕರೀನಾ ಕಪೂರ್​ಗೆ ಕೊರೋನಾ ಸೋಂಕು: ವಿಚಾರಣೆಗೆ ಕುಟುಂಬ ಸಹಕರಿಸುತ್ತಿಲ್ಲ ಎಂದು ಆರೋಪಿಸಿದ ಬಿಎಂಸಿ

Published On - 4:11 pm, Tue, 14 December 21