Shocking News: ಗ್ಯಾಂಗ್​ ರೇಪ್​ ಕತೆ ಕಟ್ಟಿ ಒಂದಿಡೀ ದಿನ ಪೊಲೀಸರನ್ನು ಆಟವಾಡಿಸಿದ ಯುವತಿ; ಸಿಸಿಟಿವಿ ಫೂಟೇಜ್​ ನೋಡಿ ಶಾಕ್​ ಆದ ಖಾಕಿ

ಅತ್ಯಾಚಾರ ಪ್ರಕರಣವಾಗಿದ್ದರಿಂದ ಆಯುಕ್ತರು ಹೆಚ್ಚಿನ ನಿಗಾ ತೆಗದುಕೊಂಡರು. ಆಕೆ ಹೇಳಿದ ಮಾರ್ಗ, ಸ್ಥಳದಲ್ಲಿರುವ ಸಿಸಿಟಿವಿ ಫೂಟೇಜ್​ಗಳ ಪರಿಶೀಲನೆಗಾಗಿ ಪೊಲೀಸ್​ ತಂಡ ರಚಿಸಿದರು.

Shocking News: ಗ್ಯಾಂಗ್​ ರೇಪ್​ ಕತೆ ಕಟ್ಟಿ ಒಂದಿಡೀ ದಿನ ಪೊಲೀಸರನ್ನು ಆಟವಾಡಿಸಿದ ಯುವತಿ; ಸಿಸಿಟಿವಿ ಫೂಟೇಜ್​ ನೋಡಿ ಶಾಕ್​ ಆದ ಖಾಕಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Dec 14, 2021 | 4:51 PM

19 ವರ್ಷದ ಹುಡುಗಿಯೊಬ್ಬಳು ತನ್ನ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ ಎಂದು ಪೊಲೀಸರಿಗೆ ಸುಳ್ಳು ದೂರು ಕೊಟ್ಟು, ಒಂದಿಡೀ ದಿನ ನಾಗ್ಪುರ ಪೊಲೀಸರನ್ನು ಆಟವಾಡಿಸಿದ್ದಾಳೆ. ಆಕೆಯ ದೂರು ದಾಖಲಿಸಿಕೊಂಡು ತನಿಖೆ ನಡೆಸಿ ಪೊಲೀಸರು ಹೈರಾಣಾದ ಬಳಿಕ ಆಕೆ ತಾನು ಸುಳ್ಳು ಹೇಳಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ. ಆದರೆ ಆಕೆ ಇಷ್ಟೆಲ್ಲ ಮಾಡಿದ್ದು ತನ್ನ ಪ್ರಿಯಕರನನ್ನು ಮದುವೆಯಾಗಲು ಎಂದು ಹೇಳಿಕೊಂಡಿದ್ದಾಳೆ.

ಈ ಯುವತಿ ಸೋಮವಾರ ಬೆಳಗ್ಗೆ 11 ಗಂಟೆ ಹೊತ್ತಿಗೆ ಕಲಾಮ್ನಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ನಾಗ್ಪುರದ ಚಿಖಾಲಿ ಪ್ರದೇಶದ ಒಂದು ನಿರ್ಜನ ಸ್ಥಳದಲ್ಲಿ ನನ್ನ ಮೇಲೆ ಇಬ್ಬರು ಅತ್ಯಾಚಾರ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಳು.  ಅದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿವಿಧ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡರು. ಕೂಡಲೇ ತನಿಖೆ ಶುರುವಿಟ್ಟುಕೊಂಡರು. ನಾಗ್ಪುರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್​ ಮತ್ತು ಇತರ ಹಿರಿಯ ಅಧಿಕಾರಿಗಳನ್ನೊಳಗೊಂಡಂತೆ ಹಲವು ಭದ್ರತಾ ಸಿಬ್ಬಂದಿ ವಿವಿಧ ಆಯಾಮಗಳಲ್ಲಿ ತನಿಖೆ ಶುರು ಮಾಡಿದರು. ಆಕೆ ಹೇಳಿದ ಸ್ಥಳ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಇದ್ದ ಸುಮಾರು 250 ಸಿಸಿಟಿವಿ ಫೂಟೇಜ್​ಗಳನ್ನು ಪರಿಶೀಲಿಸಿದ್ದಾರೆ.  ಆದರೆ ಒಂದೇ ಒಂದು ಸಾಕ್ಷಿಯಾಗಲಿ ಸಿಗಲಿಲ್ಲ. ನಂತರ ಪೊಲೀಸರಿಗೇ ಅನುಮಾನ ಬಂದು ಯುವತಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆಕೆ, ತಾನು ಪ್ರಿಯಕರನನ್ನು ಮದುವೆಯಾಗಲು ಹೀಗೊಂದು ನಾಟಕವಾಡಿದೆ ಎಂದು ಒಪ್ಪಿಕೊಂಡಿದ್ದಾಳೆ. ಆದರೆ ತಾನೇನು ಯೋಜನೆ ಹಾಕಿಕೊಂಡಿದ್ದಳು ಎಂಬುದನ್ನು ನಿಖರವಾಗಿ ತಿಳಿಸಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಯುವತಿ ದೂರಿನಲ್ಲಿ ಹೇಳಿದ್ದೇನು? ಕಲಾಮ್ನಾ ಪೊಲೀಸ್ ಠಾಣೆಗೆ ಬಂದ ಯುವತಿ, ನಾನು ಬೆಳಗ್ಗೆ ಒಂದು ಸಂಗೀತ ಕ್ಲಾಸ್​ಗೆ ಹೊರಟಿದ್ದೆ. ಮಾರ್ಗ ಮಧ್ಯದಲ್ಲಿ ಒಂದು ಬಿಳಿ ಬಣ್ಣದ ವಾಹನ ನನ್ನ ಎದುರು ನಿಂತಿತು. ಅದರಲ್ಲಿದ್ದವರು ನನ್ನ ಬಳಿ ದಾರಿ ಕೇಳುವ ನೆಪದಲ್ಲಿ ನನ್ನನ್ನು ಬಲವಂತವಾಗಿ ಎಳೆದು ಕಾರಿನಲ್ಲಿ ಹಾಕಿಕೊಂಡು ಹೋದರು. ನನ್ನ ಮುಖವನ್ನು ಸಂಪೂರ್ಣವಾಗಿ ಮುಚ್ಚಿದ್ದರು. ಬಳಿಕ ನನ್ನನ್ನು ಒಂದು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದರು  ಎಂದು ಹೇಳಿದ್ದಳು.

ಅತ್ಯಾಚಾರ ಪ್ರಕರಣವಾಗಿದ್ದರಿಂದ ಆಯುಕ್ತರು ಹೆಚ್ಚಿನ ನಿಗಾ ತೆಗದುಕೊಂಡರು. ಆಕೆ ಹೇಳಿದ ಮಾರ್ಗ, ಸ್ಥಳದಲ್ಲಿರುವ ಸಿಸಿಟಿವಿ ಫೂಟೇಜ್​ಗಳ ಪರಿಶೀಲನೆ, ನಗರದಲ್ಲಿರುವ ಬಿಳಿ ಬಣ್ಣದ ವಾಹನಗಳ ಪತ್ತೆ ಮತ್ತು ಮಾಲೀಕರ ವಿಚಾರಣೆ, ಆ ಯುವತಿಯ ಸ್ನೇಹಿತರು, ಹತ್ತಿರದವರ ವಿಚಾರಣೆಗಾಗಿ ಸುಮಾರು 1000 ಪೊಲೀಸರ 40 ತಂಡಗಳನ್ನು ಸಿದ್ಧಪಡಿಸಿದರು. ಹಾಗೇ, ಯುವತಿಯನ್ನು ಮಾಯೋ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗಾಗಿ ಕಳಿಸಲಾಯಿತು. ಸುಮಾರು 6 ತಾಸುಗಳಲ್ಲಿ 50 ಜನರನ್ನು ವಿಚಾರಣೆಗೆ ಒಳಪಡಿಸಿ, ಎಲ್ಲ ರೀತಿಯ ತನಿಖೆಯೂ ಮುಗಿದ ಬಳಿಕ ಪೊಲೀಸರಿಗೆ ಆಕೆ ಹೇಳಿದ್ದು ಸುಳ್ಳು ಎಂಬ ಸಂಶಯ ಬಂತು. ಹೀಗಾಗಿಯೇ ಆಕೆಯನ್ನೇ ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಿದರು.

ಸಿಸಿಟಿವಿಯಲ್ಲಿ ಯುವತಿಯ ಚಹರೆ ಹೀಗೆ ಯುವತಿ ಹೇಳಿದ ಸ್ಥಳಗಳ ಸಿಸಿಟಿವಿ ಫೂಟೇಜ್​​ಗಳನ್ನೆಲ್ಲ ಪರಿಶೀಲನೆ ಮಾಡುತ್ತ ಹೋದ ಪೊಲೀಸರಿಗೆ ಶಾಕ್ ಆಗಿತ್ತು. ಯುವತಿ ಬೆಳಗ್ಗೆ 9.50ರ ಹೊತ್ತಿಗೆ ವೆರೈಟಿ ಚೌಕದ ಬಳಿ ಬಸ್​ನಿಂದ ಇಳಿದಳು. ನಂತರ 10 ಗಂಟೆ ಹೊತ್ತಿಗೆ ಝಾನ್ಸಿ ರಾಣಿ ಚೌಕದತ್ತ ನಡೆದುಕೊಂಡು ಹೊರಟಳು. ನಂತರ ಆನಂದ್ ಟಾಕೀಸ್​ ಸ್ಕ್ವಾರ್​ನಲ್ಲಿ 10.15ಕ್ಕೆ ಆಟೋ ರಿಕ್ಷಾವೊಂದನ್ನು ಹತ್ತಿದಳು. ಅದಾದ ಬಳಿಕ ಮಾಯೋ ಆಸ್ಪತ್ರೆಯ ಬಳಿ 10.25ರ ಹೊತ್ತಿಗೆ ಇಳಿದಿದ್ದಾಳೆ. ಅಲ್ಲಿಂದ ಇನ್ನೊಂದು ಆಟೋ ರಿಕ್ಷಾ ಹತ್ತಿ ಚಿಖಾಲಿ ಸ್ಕ್ವಾರ್​ ಬಳಿ 10.54ರ ಹೊತ್ತಿಗೆ ಇಳಿದಳು. ನಂತರ ಪೆಟ್ರೋಲ್​ ಪಂಪ್​ ಬಳಿ ಅಳವಡಿಸಿದ್ದ ಸಿಸಿಟಿವಿಯಲ್ಲಿ  ಆಕೆ 11.4ರ ಹೊತ್ತಿಗೆ ಕಲಾಮ್ನಾ ಠಾಣೆಯತ್ತ ನಡೆದುಕೊಂಡು ಬಂದಿದ್ದು ಕಂಡು ಬಂದಿದೆ. ಇದೀಗ ಈಕೆಯನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಸ್ವಲ್ಪದರಲ್ಲೇ ತಪ್ಪಿತು ಭಾರಿ ವಿಮಾನ ದುರಂತ; ನಟಿ ರೋಜಾ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ