AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಿದರೂ, ಯೋಗಿ ಆದಿತ್ಯನಾಥ್ ಮಾಡಲಿಲ್ಲ ಯಾಕೆ?-ಅಖಿಲೇಶ್ ಯಾದವ್ ಹೇಳಿದ ಕಾರಣ ಇದು

ಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಸಕಲ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಪದೇಪದೆ ಉತ್ತರ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದು, ಅಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ.

ಪ್ರಧಾನಿ ಮೋದಿ ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಿದರೂ, ಯೋಗಿ ಆದಿತ್ಯನಾಥ್ ಮಾಡಲಿಲ್ಲ ಯಾಕೆ?-ಅಖಿಲೇಶ್ ಯಾದವ್ ಹೇಳಿದ ಕಾರಣ ಇದು
ಅಖಿಲೇಶ್ ಯಾದವ್
TV9 Web
| Edited By: |

Updated on: Dec 14, 2021 | 3:34 PM

Share

ನಿನ್ನೆ (ಡಿ.13) ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಾರಾಣಸಿಯಲ್ಲಿ ಲಲಿತಾ ಘಾಟ್​ ಬಳಿ ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಕೇಸರಿ ಉಡುಪು ಧರಿಸಿ, ರುದ್ರಾಕ್ಷಿ ಸರ ಕೈಯಲ್ಲಿ ಹಿಡಿದು ನದಿಯಲ್ಲಿ ಮುಳುಗಿ ನಮಸ್ಕರಿಸಿದ್ದಾರೆ. ಹಾಗೇ, ಸೂರ್ಯದೇವನಿಗೆ ಅರ್ಘ್ಯಕೊಟ್ಟು ಪೂಜೆ ಸಲ್ಲಿಸಿ, ಮಂತ್ರಪಠಣ ಮಾಡಿದ್ದಾರೆ. ಆದರೆ ಈಗ ಅಖಿಲೇಶ್​ ಯಾದವ್​ ಒಂದು ಪ್ರಶ್ನೆ ಎತ್ತಿದ್ದಾರೆ ಮತ್ತು ಅವರೇ ಅದಕ್ಕೆ ಉತ್ತರವನ್ನೂ ಕೊಟ್ಟಿದ್ದಾರೆ. ನಿನ್ನೆ ಬೆಳಗ್ಗೆ ಪ್ರಧಾನಿ ಮೋದಿ ವಾರಾಣಸಿ ತಲುಪಿದಾಗಿನಿಂದಲೂ ಮೋದಿಯವರ ಜತೆಗೇ ಇರುವ ಯೋಗಿ ಆದಿತ್ಯನಾಥ್​ ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಲಿಲ್ಲ ಎಂಬುದು ಅಖಿಲೇಶ್​ ಯಾದವ್ ಆಕ್ಷೇಪ. 

ಗಂಗಾನದಿಯನ್ನು ಸ್ವಚ್ಛ ಮಾಡಲು ಬಿಜೆಪಿ ನೇತೃತ್ವದ ಸರ್ಕಾರ ಕೋಟಿಗಳಷ್ಟು ಹಣ ಖರ್ಚು ಮಾಡುತ್ತಿದೆ. ಆದರೆ ಯೋಗಿ ಆದಿತ್ಯನಾಥ್​ ಗಂಗಾನದಿಯಲ್ಲಿ ಸ್ನಾನ ಮಾಡಲಿಲ್ಲ. ಯಾಕೆಂದರೆ ಆ ನದಿ ಇನ್ನೂ ಕೊಳಕಾಗಿದೆ..ಮಲಿನಯುಕ್ತವಾಗಿದೆ ಎಂಬುದು ಅವರಿಗೆ ಗೊತ್ತು. ಇದೇ ಕಾರಣಕ್ಕೆ ಯೋಗಿ ಪವಿತ್ರ ಸ್ನಾನ ಮಾಡಲಿಲ್ಲ ಎಂದು ಅಖಿಲೇಶ್ ಯಾದವ್​ ಪ್ರತಿಪಾದಿಸಿದ್ದಾರೆ.  ನಿಜಕ್ಕೂ ಗಂಗಾಮಾತೆ ಸಂಪೂರ್ಣವಾಗಿ ಸ್ವಚ್ಛವಾಗುತ್ತಾಳಾ?  ಗಂಗಾನದಿ ಸ್ವಚ್ಛಗೊಳಿಸಲೆಂದು ನಿಧಿಗಳು ಹರಿದುಬಂದಿವೆ. ಆದರೆ ನದಿ ಮಾತ್ರ ಇನ್ನೂ ಸಂಪೂರ್ಣವಾಗಿ ಸ್ವಚ್ಛವಾಗಿಲ್ಲ ಎಂದು ಹೇಳಿದ್ದಾರೆ.  ಉತ್ತರಪ್ರದೇಶದಲ್ಲಿ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳ ನಡುವೆ ವಾಗ್ದಾಳಿಯೂ ಹೆಚ್ಚಿದೆ.

ಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಸಕಲ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಪದೇಪದೆ ಉತ್ತರ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದು, ಅಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ. 339 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಕಾಶಿ ವಿಶ್ವನಾಥ ಕಾರಿಡಾರ್​ ಮೊದಲ ಹಂತವನ್ನು ನಿನ್ನೆ ಉದ್ಘಾಟನೆ ಮಾಡಿದ್ದಾರೆ. ಜತೆಗೆ ಕಾರಿಡಾರ್​ ನಿರ್ಮಾಣ ಮಾಡಿದ ಕಾರ್ಮಿಕ ಮೇಲೆ ಹೂಮಳೆ ಸುರಿಸುವ ಮೂಲಕ ಗೌರವ ಸಲ್ಲಿಸಿ, ಅವರೊಂದಿಗೇ ಕುಳಿತು ಊಟ ಮಾಡಿದ್ದಾರೆ. ಇಂದು ಬಿಜೆಪಿಯ ಎಲ್ಲ ಮುಖ್ಯಮಂತ್ರಿಗಳು, ಪ್ರಮುಖ ಗಣ್ಯರು ಕಾಶಿಯಲ್ಲಿದ್ದಾರೆ.

ಇದನ್ನೂ ಓದಿ: Kangana Ranaut: ಅಂಕಿತಾ- ವಿಕ್ಕಿ ಕಲ್ಯಾಣ; ಸಾಂಪ್ರದಾಯಿಕ ದಿರಿಸಿನಲ್ಲಿ ಕಂಗೊಳಿಸಿದ ಕಂಗನಾ- ಚಿತ್ರಗಳನ್ನು ನೋಡಿ