AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mangalore: ಬೇಡ ಬೇಡ ಎಂದರೂ ವಿಮಾನ ಇಳಿಸಿದ್ದನಾ ಪೈಲಟ್? ಮಂಗಳೂರು ವಿಮಾನ ದುರಂತದ ಕರಾಳ ನೆನಪು

2010 Air India Express flight incident in Mangalore Bajpe airport: ಅಹ್ಮದಾಬಾದ್​​ನ ವಿಮಾನ ನಿಲ್ದಾಣದ ಬಳಿ ಏರ್​​ಇಂಡಿಯಾ ಫ್ಲೈಟ್​​ವೊಂದು ಅಪಘಾತಕ್ಕೊಳಗಾಗಿ 242 ಮಂದಿ ದುರ್ಮರಣ ಅಪ್ಪಿದ್ದಾರೆ. 2010ರಲ್ಲಿ ಮಂಗಳೂರಿನಲ್ಲೂ ಏರ್ ಇಂಡಿಯಾ ಎಕ್ಸ್​ಪ್ರೆಸ್ ವಿಮಾನ ಅಪಘಾತವಾಗಿ 158 ಮಂದಿ ಬಲಿಯಾಗಿದ್ದರು. ಅಂದಿನ ಘಟನೆಗೆ ಏನು ಕಾರಣ? ಪೈಲಟ್ ಮಾಡಿದ ಯಡವಟ್ಟಾ, ಅಸಮರ್ಪಕ ರನ್​ವೇಗಳಾ? ಆ ಘಟನೆಯ ಒಂದು ಕರಾಳ ನೆನಪು ಇಲ್ಲಿದೆ...

Mangalore: ಬೇಡ ಬೇಡ ಎಂದರೂ ವಿಮಾನ ಇಳಿಸಿದ್ದನಾ ಪೈಲಟ್? ಮಂಗಳೂರು ವಿಮಾನ ದುರಂತದ ಕರಾಳ ನೆನಪು
ಮಂಗಳೂರು ವಿಮಾನ ಅಪಘಾತ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 12, 2025 | 6:32 PM

Share

ಗುಜರಾತ್​​ನ ಅಹ್ಮದಾಬಾದ್​​ನಲ್ಲಿ ಏರ್ ಇಂಡಿಯಾದ ವಿಮಾನ ಅಪಘಾತಕ್ಕೊಳಗಾಗಿ 242 ಮಂದಿ ಬಲಿಯಾಗಿದ್ದಾರೆ. ಭಾರತದಲ್ಲಿ ಸಂಭವಿಸಿರುವ ಹಲವು ಅಪಘಾತಗಳ ಸಾಲಿಗೆ ಇದು ಸೇರ್ಪಡೆಯಾಗಿದೆ. ದೇಶ ಕಂಡ ಭೀಕರ ವಿಮಾನ ಅಪಘಾತ ದುರಂತಗಳಲ್ಲಿ (Plane  crash) ಇದೂ ಒಂದೆನಿಸಿದೆ. ಹದಿನೈದು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ವಿಮಾನ ಅಪಘಾತ ದುರ್ಘಟನೆಯೂ (2010 Mangalore plane crash incident) ಕೂಡ ಜನಮಾನಸದಿಂದ ಎಂದೂ ಮರೆಯಲಾಗದ ಕಹಿ ನೆನಪಾಗಿ ಉಳಿದಿದೆ. ಸಿಬ್ಬಂದಿ ತೋರಿದ ಅಚಾತುರ್ಯ ಹಾಗೂ ಅಸುರಕ್ಷಿತ ಏರ್​ಪೋರ್ಟ್ ಅಂದಿನ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ.

2010ರ ಮಂಗಳೂರು ವಿಮಾನ ಅಪಘಾತ ಘಟನೆ

ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ 2010ರ ಮೇ 22ರಂದು ಏರ್ ಇಂಡಿಯಾ ಎಕ್ಸ್​ಪ್ರೆಸ್ ಫ್ಲೈಟ್ 812 ಅಪಘಾತಗೊಂಡಿತ್ತು. ಅದು ಬೋಯಿಂಗ್ 737-8ಎಚ್​ಜಿ ವಿಮಾನ. ಅಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ 158 ಮಂದಿ ದುರ್ಮರಣ ಅಪ್ಪಿದ್ದರು.

​ದುಬೈ ಇಂಟರ್ನ್ಯಾಷನಲ್ ಏರ್​​ಪೋರ್ಟ್​​ನಿಂದ ಆ ವಿಮಾನ ಮಂಗಳೂರಿಗೆ ಬಂದಿತ್ತು. ಆರು ಮಂದಿ ಸಿಬ್ಬಂದಿ ಹಾಗೂ 160 ಮಂದಿ ಪ್ರಯಾಣಿಕರು ಸೇರಿ 166 ಮಂದಿ ಆ ವಿಮಾನದಲ್ಲಿದ್ದರು. ಇವರಲ್ಲಿ ಎಂಟು ಮಂದಿ ಪ್ರಯಾಣಿಕರು ಬಿಟ್ಟು ಉಳಿದೆಲ್ಲಾ 158 ಮಂದಿ ಅಸು ನೀಗಿದ್ದರು. ವಿಮಾನವು ಲ್ಯಾಂಡ್ ಆಗುವಾಗ ರನ್​​ವೇಯಿಂದ ಹೊರಗೆ ಬಂದು ಕೆಳಗಿನ ಕಣಿವೆಗೆ ಜಾರಿ ಬಿದ್ದಿತ್ತು.

ಇದನ್ನೂ ಓದಿ: ಅಹಮದಾಬಾದ್​​ನಲ್ಲಿ ಏರ್ ಇಂಡಿಯಾ ವಿಮಾನ ಪತನ; ಎಲ್ಲ 242 ಪ್ರಯಾಣಿಕರ ಸಾವು

ಟೇಬಲ್ ಟಾಪ್ ರನ್​ವೇ ಇರುವ ಏರ್​ಪೋರ್ಟ್

ಬಜ್ಪೆ ವಿಮಾನ ನಿಲ್ದಾಣದಲ್ಲಿದ್ದ ರನ್​​ವೇ ಬಹಳ ಅಪಾಯಕಾರಿ ಎನಿಸಿತ್ತು. ಟೇಬಲ್ ಟಾಪ್ ವಿನ್ಯಾಸದ್ದು. ಇಲ್ಲಿಯ ರನ್​ವೇಗಳಲ್ಲಿ ವಿಮಾನ ಇಳಿಸುವುದು ಬಹಳ ಅಪಾಯಕಾರಿ. ವಿಮಾನವು ರನ್​ವೇ ದಾಟಿ ಕಾಂಪೌಂಡ್ ಸೀಳಿ ಕೆಳಗಿನ ಕಣಿವೆಗೆ ಬಿದ್ದಿತ್ತು. ಇದಕ್ಕೆ ಏರ್​​ಪೋರ್ಟ್​​ನ ಟೇಬಲ್ ಟಾಪ್ ರನ್​​ವೇ ವಿನ್ಯಾಸ ಒಂದು ಕಾರಣ ಇರಬಹುದು.

ವಿಮಾನದ ಕ್ಯಾಪ್ಟನ್ ಮಾಡಿದ ಯಡವಟ್ಟು ಕಾರಣವಾ?

​ಅಂದಿನ ಫ್ಲೈಟ್​​ನಲ್ಲಿ ಪೈಲಟ್ ಸಿಬ್ಬಂದಿ ಮಾಡಿದ ಯಡವಟ್ಟು ಈ ಅಪಘಾತಕ್ಕೆ ಕಾರಣ ಆಗಿದ್ದಿರಬಹುದು ಎಂದು ಶಂಕಿಸಲಾಗಿದೆ. ವಿಮಾನದ ಕ್ಯಾಪ್ಟನ್ ಆಗಿದ್ದವರು ಝಾಟ್ಕೋ ಗ್ಲೂಶಿಕಾ. ಇವರು ಬ್ರಿಟಿಷ್ ಸರ್ಬಿನ್ ದೇಶದ ಮೂಲದವರು. ಫ್ಲೈಟ್​​ನ ಫಸ್ಟ್ ಆಫೀಸರ್ ಆಗಿದ್ದವರು ಹರ್ಬಿಂದರ್ ಸಿಂಗ್ ಅಹ್ಲುವಾಲಿಯಾ. ಇಬ್ಬರೂ ಕೂಡ ಅಪಾರ ಫ್ಲೈಟ್ ಅನುಭವಿಗಳು.

ಆದರೆ, ವಿಮಾನವು ಏರ್​​ಪೋರ್ಟ್​​ನಲ್ಲಿ ಲ್ಯಾಂಡ್ ಆಗುವಾಗ ಸಮಸ್ಯೆ ಆಗಿತ್ತು. ಈಗ ಲ್ಯಾಂಡ್ ಆಗುವುದು ಬೇಡ, ಹಾಗೆ ಸುತ್ತಿ ಬಂದು ನಂತರ ಲ್ಯಾಂಡಿಂಗ್ ಮಾಡುವಂತೆ ಫಸ್ಟ್ ಆಫೀಸರ್ ಅವರು ಕ್ಯಾಪ್ಟನ್​​ಗೆ ಸೂಚಿಸಿದ್ದರಂತೆ. ಆದರೂ ಕೂಡ ಕ್ಯಾಪ್ಟನ್ ಅವರು ವಿಮಾನವನ್ನು ಲ್ಯಾಂಡ್ ಮಾಡಿದ್ದಾರೆ.

ಇದನ್ನೂ ಓದಿ: ಗುಜರಾತ್​ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸಾವು

ಲ್ಯಾಂಡಿಂಗ್ ಮಾಡಲು ಉದ್ದೇಶಿಸಿದ್ದ ಜಾಗದಿಂದ 1,500 ಅಡಿ ದೂರಕ್ಕೆ ಆ ಫ್ಲೈಟ್ ಕೆಳಗಿಳಿದಿದೆ. ಅದಾದ ಬಳಿಕ ರನ್​​ವೇ ಉದ್ದವು ಫ್ಲೈಟ್ ನಿಲುಗಡೆಗೆ ಸಾಕಾಗುವಷ್ಟಿರಲಿಲ್ಲ. ಹೀಗಾಗಿ, ರನ್​ವೇ ಆಚೆ ಹೋಗಿ ಕೆಳಗಿನ ಕಣಿವೆಯೊಳಗೆ ಕುಸಿದಿತ್ತು.

ಸುಸ್ತಾಗಿದ್ದರಾ ಪೈಲಟ್?

ಪೈಲಟ್​ ಸಾಕಷ್ಟು ಅವಧಿ ಕೆಲಸ ಮಾಡಿದ್ದರಿಂದ ಬಳಲಿದ್ದಿರಬಹುದು ಎನ್ನುವ ಶಂಕೆ ಇದೆ. ಹಾಗೆಯೇ, ಬ್ಲ್ಯಾಕ್​​ಬಾಕ್ಸ್​​ನಿಂದ ಗೊತ್ತಾದ ಮಾಹಿತಿ ಪ್ರಕಾರ, ಕಾಕ್​​ಪಿಟ್​​ನೊಳಗೆ ಸ್ಪಷ್ಟ ಸಂವಹನ ಇರಲಿಲ್ಲ. ಫಸ್ಟ್ ಆಫೀಸರ್​​ನ ಧ್ವನಿ ಬಹಳ ಕ್ಷೀಣವಾಗಿ ಕೇಳುತ್ತಿತ್ತು. ಕ್ಯಾಪ್ಟನ್​​ಗೆ ಇದು ಸರಿಯಾಗಿ ಕೇಳಿಸಿದೇ ಇದ್ದಿರಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ