ಇಂಫಾಲ್​ನಲ್ಲಿ ಮೈತಿ ಮುಖ್ಯಸ್ಥರಿದ್ದ ವಾಹನದ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ

ಇಂಫಾಲ್​ನ ಲಾಂಗೋಲ್ ಪ್ರದೇಶದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿಸಿದೆ. ಮಣಿಪುರದ ಮೈತಿ ಮುಖ್ಯಸ್ಥರನ್ನು ಕರೆದೊಯ್ಯುತ್ತಿದ್ದ ವಾಹನದ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಆರು ಗುಂಡುಗಳನ್ನು ವಾಹನದ ಮೇಲೆ ಹಾರಿಸಲಾಗಿದೆ, ಮೂಲಗಳ ಪ್ರಕಾರ ಶುಕ್ರವಾರ ಬೆಳಗ್ಗೆ 7.10ರ ಸುಮಾರಿಗೆ ಆಸ್ಪತ್ರೆಯೊಂದರ ಬಳಿ ಪ್ರಮೋತ್ ಸಿಂಗ್ ಅವರಿದ್ದ ವಾಹನವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.

ಇಂಫಾಲ್​ನಲ್ಲಿ ಮೈತಿ ಮುಖ್ಯಸ್ಥರಿದ್ದ ವಾಹನದ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ
ಪ್ರಮೋತ್​ ಸಿಂಗ್
Image Credit source: Frontline. The Hindu

Updated on: Nov 03, 2023 | 12:40 PM

ಇಂಫಾಲ್​ನ ಲಾಂಗೋಲ್ ಪ್ರದೇಶದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿಸಿದೆ. ಮಣಿಪುರದ ಮೈತಿ(Meitei )ಮುಖ್ಯಸ್ಥರನ್ನು ಕರೆದೊಯ್ಯುತ್ತಿದ್ದ ವಾಹನದ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಆರು ಗುಂಡುಗಳನ್ನು ವಾಹನದ ಮೇಲೆ ಹಾರಿಸಲಾಗಿದೆ, ಮೂಲಗಳ ಪ್ರಕಾರ ಶುಕ್ರವಾರ ಬೆಳಗ್ಗೆ 7.10ರ ಸುಮಾರಿಗೆ ಆಸ್ಪತ್ರೆಯೊಂದರ ಬಳಿ ಪ್ರಮೋತ್ ಸಿಂಗ್ ಅವರಿದ್ದ ವಾಹನವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.

ಸಿಂಗ್ ಈ ಕುರಿತು ಮಾಹಿತಿ ನೀಡಿದ್ದು, ನನಗೆ ಯಾವುದೇ ಹಾನಿಯಾಗಿಲ್ಲ ನಾನು ಆರೋಗ್ಯವಾಗಿದ್ದೇನೆ, ಸಿಂಗ್ ಇದ್ದ ಕಾರಿನ ಚಾಲಕ ಇನ್ನೇನು ಕಾರನ್ನು ನಿಲ್ಲಿಸಬೇಕೆನ್ನುವಷ್ಟರಲ್ಲಿ ಗುಂಡಿನ ದಾಳಿ ನಡೆದಿದೆ. ಪ್ರಮೋತ್​ ಸಿಂಗ್ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಹೆಚ್ಚಿಸುವ ಪಿತೂರಿ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.

ಮೇ3 ರಿಂದ ಮೈತಿ ಹಾಗೂ ಬುಡಕಟ್ಟು ಸಮುದಾಯ ಕುಕಿ ನಡುವೆ ಹಿಂಸಾಚಾರ ನಡೆಯುತ್ತಿದೆ. ಈ ಹಿಂಸಾಚಾರದಲ್ಲಿ ಕನಿಷ್ಠ 175 ಮಂದಿ ಮೃತಪಟ್ಟಿದ್ದಾರೆ. 50 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಕುಕಿ ಗುಂಪುಗಳು ಮಣಿಪುರದಲ್ಲಿ ಹಿಂಸಾಚಾರವನ್ನು ಪ್ರಚೋದಿಸುತ್ತಿವೆ ಎಂದು ಮೈತಿ ಸಮುದಾಯ ಆರೋಪಿಸಿದೆ.

ಮತ್ತಷ್ಟು ಓದಿ: ಮಣಿಪುರ: ಇಬ್ಬರು ಮೈತಿ ವಿದ್ಯಾರ್ಥಿಗಳನ್ನು ಅಪಹರಿಸಿ, ಹತ್ಯೆ ಪ್ರಕರಣದಲ್ಲಿ 5ನೇ ಆರೋಪಿ ಬಂಧನ

ಜೂನ್ 7 ರಂದು ದಿ ವೈರ್‌ನ ಪತ್ರಕರ್ತರೊಂದಿಗಿನ ಸಂದರ್ಶನದ ನಂತರ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಂದರ್ಶನದಲ್ಲಿ ಅವರು ಕುಕಿಗಳನ್ನು ಹೊರಗಿನವರು ಮತ್ತು ಮಣಿಪುರದ ಸ್ಥಳೀಯರಲ್ಲ ಎಂದು ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us