Mann Ki Baat Today: ಇಂದು ಬೆಳಗ್ಗೆ 11ಕ್ಕೆ ಪ್ರಸಾರವಾಗಲಿದೆ ಮೋದಿಯವರ ಮನ್ ಕಿ ಬಾತ್ 101ನೇ ಸಂಚಿಕೆ
Mann Ki Baat 101st Episode: ಕಳೆದ ತಿಂಗಳು (ಏಪ್ರಿಲ್ 30)ರಂದು ಮನ್ ಕಿ ಬಾತ್ ನ 100ನೇ ಸಂಚಿಕೆ ಪ್ರಸಾರವಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಮನ್ ಕೀ ಬಾತ್ ಕೇವಲ ಕಾರ್ಯಕ್ರಮವಲ್ಲ ಜನರೇ ದೇವರು. ಇದು ವ್ರತ ಇದ್ದಂತೆ ಎಂದು ಹೇಳಿದ್ದಾರೆ
ಇಂದು (ಭಾನುವಾರ) ಬೆಳಗ್ಗೆ 11 ಗಂಟೆಗೆ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್ (Mann Ki Baat) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶ ಮತ್ತು ವಿದೇಶದ ಜನರೊಂದಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ. ಇದು ಮಾಸಿಕ ರೇಡಿಯೋ ಕಾರ್ಯಕ್ರಮದ 101 ನೇ ಸಂಚಿಕೆ. ಈ ಕಾರ್ಯಕ್ರಮವನ್ನು ಆಕಾಶವಾಣಿ ಮತ್ತು ದೂರದರ್ಶನದ ಎಲ್ಲ ನೆಟ್‌ವರ್ಕ್, ಆಕಾಶವಾಣಿ ವೆಬ್‌ಸೈಟ್ ಮತ್ತು ನ್ಯೂಸನ್ ಏರ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಇದನ್ನು ಆಕಾಶವಾಣಿ, ಡಿಡಿ ನ್ಯೂಸ್, ಪಿಎಂಒ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಯೂಟ್ಯೂಬ್ ಚಾನೆಲ್‌ಗಳಲ್ಲಿ ಲೈವ್-ಸ್ಟ್ರೀಮ್ ಮಾಡುತ್ತದೆ. ಆಕಾಶವಾಣಿ ಹಿಂದಿ ಪ್ರಸಾರವಾದ ತಕ್ಷಣ ಪ್ರಾದೇಶಿಕ ಭಾಷೆಗಳಲ್ಲಿ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತದೆ.
ಅಕ್ಟೋಬರ್ 3, 2014 ರಿಂದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ.
ಕಳೆದ ತಿಂಗಳು (ಏಪ್ರಿಲ್ 30)ರಂದು ಮನ್ ಕಿ ಬಾತ್ ನ 100ನೇ ಸಂಚಿಕೆ ಪ್ರಸಾರವಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಮನ್ ಕೀ ಬಾತ್ ಕೇವಲ ಕಾರ್ಯಕ್ರಮವಲ್ಲ ಜನರೇ ದೇವರು. ಇದು ವ್ರತ ಇದ್ದಂತೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿಯವರ ಪ್ರಕಾರ, ಇಷ್ಟು ತಿಂಗಳುಗಳು ಮತ್ತು ಇಷ್ಟು ವರ್ಷಗಳು ಹೇಗೆ ಕಳೆದವು ಎಂದು ಕೆಲವೊಮ್ಮೆ ನಂಬಲು ಸಾಧ್ಯವಿಲ್ಲ. ಪ್ರತಿ ಬಾರಿ ಮನ್ ಕೀ ಬಾತ್ ಸಂಚಿಕೆ ಇರುತ್ತಿತ್ತು. ದೇಶದ ಮೂಲೆ ಮೂಲೆಯಿಂದ ಜನ ಸೇರುತ್ತಲೇ ಇದ್ದರು. ಸ್ವಾತಂತ್ರ್ಯದ ಅಮೃತ ಮಹೋತ್ಸವವೇ ಇರಲಿ ಅಥವಾ ಭೇಟಿ ಬಚಾವೋ ಭೇಟಿ ಪಢಾವೊ, ಎಲ್ಲವನ್ನೂ ಮನ್ ಕಿ ಬಾತ್ ನಲ್ಲಿ ಉಲ್ಲೇಖಿಸಲಾಗಿದೆ ಎಂದರು.
ಇದನ್ನೂ ಓದಿ: ಪುಸ್ತಕ, ಕಡತಗಳನ್ನು ತಡಕಾಡಿ ಸೆಂಗೋಲ್ ವಿವರಗಳನ್ನು ಪತ್ತೆ ಹಚ್ಚಲು ಮೋದಿ ಸರ್ಕಾರ ತೆಗೆದುಕೊಂಡಿದ್ದು 2 ವರ್ಷಗಳು!
ಮನ್ ಕಿ ಬಾತ್ ಕಾರ್ಯಕ್ರಮ ಕೇವಲ ತನಗೆ ಒಂದು ಕಾರ್ಯಕ್ರಮವಲ್ಲ, ಪೂಜೆ, ನಂಬಿಕೆ ಮತ್ತು ವ್ರತವಿದ್ದಂತೆ ಎಂದು ಪ್ರಧಾನಿ ಮೋದಿ ಹೇಳಿದರು. ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಜನತೆಯೊಂದಿಗೆ ಮಾತನಾಡಲು, ಅವರ ಸಮಸ್ಯೆಗಳನ್ನು ಆಲಿಸಲು ಸಾಧ್ಯವಾಗುತ್ತಿತ್ತು, ಏಕಾಏಕಿ ಪ್ರಧಾನಿಯಾಗಿ ದೆಹಲಿಗೆ ಬಂದ ಬಳಿಕ ಏನೋ ಖಾಲಿ ಖಾಲಿ ರೀತಿ ಭಾಸವಾಗುತ್ತಿತ್ತು, ಪ್ರೋಟೋಕಾಲ್ನಿಂದಾಗಿ ಜನರ ಮಧ್ಯೆ ತೆರಳಿ ಕಷ್ಟಗಳನ್ನು ಆಲಿಸುವುದು ಸಾಧ್ಯವಿಲ್ಲ, ಆಗ ಈ ಮನ್ ಕೀ ಬಾತ್ ಶುರು ಮಾಡುವ ಬಗ್ಗೆ ಆಲೋಚನೆ ಬಂದಿತ್ತು, ಈಗ ದೇಶಾದ್ಯಂತ ಇರುವ ಜನರನ್ನು ತಲುಪಲು ಸಾಧ್ಯವಾಗಿದೆ ಈ ಕುರಿತು ಹೆಮ್ಮೆ ಇದೆ ಎಂದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ