Mann Ki Baat: ಸ್ಪಷ್ಟ ಉದ್ದೇಶ, ಪ್ರಾಮಾಣಿಕ ಪ್ರಯತ್ನವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು: ಪ್ರಧಾನಿ ಮೋದಿ

|

Updated on: Jun 18, 2023 | 11:34 AM

ಪ್ರಧಾನಿ ನರೇಂದ್ರ ಮೋದಿಯವರು 102ನೇ ಮನ್​ಕಿ ಬಾತ್​ನಲ್ಲಿ ನೀರಿನ ಸಮಸ್ಯೆ ಕುರಿತು ಚರ್ಚೆ ನಡೆಸಿದರು. ಉತ್ತರ ಪ್ರದೇಶ ಬಾಂದಾದ ತುಳಸೀರಾಮ್ ಅವರು 40ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿದ್ದಾರೆ.

Mann Ki Baat: ಸ್ಪಷ್ಟ ಉದ್ದೇಶ, ಪ್ರಾಮಾಣಿಕ ಪ್ರಯತ್ನವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು: ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us on

ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು 102ನೇ ಮನ್​ಕಿ ಬಾತ್​ನಲ್ಲಿ ನೀರಿನ ಸಮಸ್ಯೆ ಕುರಿತು ಮಾತನಾಡಿದರು. ಉತ್ತರ ಪ್ರದೇಶ ಬಾಂದಾದ ತುಳಸೀರಾಮ್ ಅವರು 40ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿದ್ದಾರೆ. ಇದರಿಂದಾಗಿ ಅಂತರ್ಜಲ ಮಟ್ಟ ಸುಧಾರಿಸುತ್ತಿದೆ. ಅದೇ ರೀತಿ ಹಾಪುರದಲ್ಲಿ ಕೂಡ ನಶಿಸಿ ಹೋಗುತ್ತಿರುವ ನೀಮ್ ನದಿಗೆ ಜನರು ಮರುಜೀವ ಕೊಟ್ಟಿದ್ದಾರೆ. ಜನರ ಸಾಮೂಹಿಕ ಪ್ರಯತ್ನದಿಂದ ನದಿಗಳು ಮತ್ತೆ ಜೀವಂತವಾಗಿವೆ ಎಂದು ಹೇಳಿದ್ದಾರೆ,  ಪ್ರಧಾನಿಯವರ ಈ ವಿಶೇಷ ಕಾರ್ಯಕ್ರಮ ಏಪ್ರಿಲ್ 30 ರಂದು 100 ಸಂಚಿಕೆಗಳನ್ನು ಪೂರೈಸಿತ್ತು.

ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಧಾನಿಯವರ ವಿಶೇಷ ಕಾರ್ಯಕ್ರಮ ನಡೆಯುತ್ತದೆ. ಈ ಬಾರಿ ಮನ್ ಕಿ ಬಾತ್ ಒಂದು ವಾರ ಮುಂಚಿತವಾಗಿ ನಡೆಯುತ್ತಿದೆ ಎಂದು ಪ್ರಧಾನಿ ಹೇಳಿದರು. ಮುಂದಿನ ವಾರ ಅಮೆರಿಕಕ್ಕೆ ತೆರಳುವುದಾಗಿ ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

ಮತ್ತಷ್ಟು ಓದಿ: Mann Ki Baat: ಮನ್ ಕಿ ಬಾತ್​​ನ 100ನೇ ಸಂಚಿಕೆ, 9 ಸಾವಿರ ಕಡೆಗಳಲ್ಲಿ ಸಾಕ್ಷಿಯಾಗಲಿರುವ ಹರಿಯಾಣದ 9 ಲಕ್ಷ ಜನ

ಅಂತಹ ಪರಿಸ್ಥಿತಿಯಲ್ಲಿ, ಸಾಕಷ್ಟು ಓಡಾಟ ಇರುತ್ತದೆ. ಅದಕ್ಕಾಗಿಯೇ ಪ್ರವಾಸಕ್ಕೆ ತೆರಳುವ ಮೊದಲು ನಾಗರಿಕರೊಂದಿಗೆ ಮಾತನಾಡಲು ಯೋಚಿಸಿದ್ದೇನೆ ಎಂದು ಪ್ರಧಾನಿ ಹೇಳಿದರು. ನಿಮ್ಮೊಂದಿಗೆ ಮಾತುಕತೆ ನಡೆಸುವುದಕ್ಕಿಂತ ಉತ್ತಮವಾದದ್ದು ಯಾವುದು ಎಂದು ಪ್ರಧಾನಿ ಹೇಳಿದರು. ನಿಮ್ಮ ಆಶೀರ್ವಾದ, ಸ್ಫೂರ್ತಿಯಿಂದ, ನನ್ನ ಶಕ್ತಿಯೂ ಹೆಚ್ಚುತ್ತದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ತಿಂಗಳ ಕೊನೆಯ ಭಾನುವಾರ ಮನ್​ ಕಿ ಬಾತ್​ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಆದರೆ ಈ ಬಾರಿ ಒಂದು ವಾರ ಮೊದಲೇ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ.
ಪ್ರಧಾನಿ ಮೋದಿ ಅಮೆರಿಕಕ್ಕೆ ತೆರಳಲಿರುವ ಹಿನ್ನೆಲೆಯಲ್ಲಿ ವಾರಕ್ಕೂ ಮೊದಲೇ ಮನ್​ ಕಿ ಬಾತ್​ ಕಾರ್ಯಕ್ರಮ ಪ್ರಸಾರಗೊಂಡಿದೆ.

ಭಾರತದ ಜನರ ಸಾಮೂಹಿಕ ಶಕ್ತಿಯು ಪ್ರತಿಯೊಂದು ಸವಾಲನ್ನೂ ಪರಿಹರಿಸುತ್ತದೆ. ಎರಡು ಮೂರು ದಿನಗಳ ಹಿಂದೆ ಬಿಪೋರ್​ಜಾಯ್ ಸೈಕ್ಲೋನ್ ಕಚ್​ ಪ್ರದೇಶವನ್ನು ಸಾಕಷ್ಟು ಹಾಳು ಗೆಡವಿದೆ. ಆದರೆ ಜನರು ಧೈರ್ಯದಿಂದಿದ್ದಾರೆ.
ಕಳೆದ ಎರಡು ದಶಕಗಳ ಹಿಂದೆ ಕಚ್ಚನಲ್ಲಿ ಸಂಭವಿಸಿದ ಪ್ರಭಾವಿ ಭೂಕಂಪದ ಬಳಿಕ ಕಚ್ ಮೊದಲಿನಂತೆ ಎದ್ದು ನಿಲ್ಲಲು ಸಾಧ್ಯವಿಲ್ಲ ಎಂದು ಅಂದಾಜಿಸಲಾಗಿತ್ತು. ಆದರೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಕಚ್ ಕೂಡ ಒಂದು ಎಂದರು.

ಟಿಬಿ ಮುಕ್ತ ಭಾರತ
ದೇಶದಲ್ಲಿ ಟಿಬಿಯನ್ನು ಹೋಗಲಾಡಿಸುವ ಪ್ರಯತ್ನದಲ್ಲಿ ಯುವಕರ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. ದೇಶವನ್ನು ಟಿಬಿ ಮುಕ್ತಗೊಳಿಸಲು ನಮ್ಮ ಮಕ್ಕಳು ಮತ್ತು ಯುವಕರು ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Published On - 11:27 am, Sun, 18 June 23