ಮಹಾರಾಷ್ಟ್ರ ಸರ್ಕಾರ ಡಿಸೆಂಬರ್ 24ರೊಳಗೆ ಮರಾಠರಿಗೆ ಮೀಸಲಾತಿ ಘೋಷಿಸಬೇಕು: ಮನೋಜ್ ಜಾರಂಗೆ ಪಾಟೀಲ್

ಮರಾಠಾ ಸಮುದಾಯಕ್ಕೆ ಮೀಸಲಾತಿ(Reservation)ನೀಡುವಂತೆ ಒತ್ತಾಯಿಸಿ ಮನೋಜ್ ಜಾರಂಗೆ ಪಾಟೀಲ್ ಚಳವಳಿ ಆರಂಭಿಸಿದ್ದಾರೆ. ಮರಾಠಾ ಮೀಸಲಾತಿ ಆಂದೋಲನದ ಅಂಗವಾಗಿ ರಾಜ್ಯ ಪ್ರವಾಸ ಕೈಗೊಂಡಿರುವ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಅವರು ಡಿಸೆಂಬರ್ 24 ರೊಳಗೆ ಸಮುದಾಯಕ್ಕೆ ಮೀಸಲಾತಿಯನ್ನು ಸರ್ಕಾರ ಘೋಷಿಸಬೇಕು ಎಂದು ಒತ್ತಾಯಿಸಿದರು.

ಮಹಾರಾಷ್ಟ್ರ ಸರ್ಕಾರ ಡಿಸೆಂಬರ್ 24ರೊಳಗೆ ಮರಾಠರಿಗೆ ಮೀಸಲಾತಿ ಘೋಷಿಸಬೇಕು: ಮನೋಜ್ ಜಾರಂಗೆ ಪಾಟೀಲ್
ಮನೋಜ್Image Credit source: The Print
Follow us
ನಯನಾ ರಾಜೀವ್
|

Updated on: Nov 16, 2023 | 11:34 AM

ಮರಾಠಾ ಸಮುದಾಯಕ್ಕೆ ಮೀಸಲಾತಿ(Reservation)ನೀಡುವಂತೆ ಒತ್ತಾಯಿಸಿ ಮನೋಜ್ ಜಾರಂಗೆ ಪಾಟೀಲ್ ಚಳವಳಿ ಆರಂಭಿಸಿದ್ದಾರೆ. ಮರಾಠಾ ಮೀಸಲಾತಿ ಆಂದೋಲನದ ಅಂಗವಾಗಿ ರಾಜ್ಯ ಪ್ರವಾಸ ಕೈಗೊಂಡಿರುವ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಅವರು ಡಿಸೆಂಬರ್ 24 ರೊಳಗೆ ಸಮುದಾಯಕ್ಕೆ ಮೀಸಲಾತಿಯನ್ನು ಸರ್ಕಾರ ಘೋಷಿಸಬೇಕು ಎಂದು ಒತ್ತಾಯಿಸಿದರು.

ಧಾರಾಶಿವ್‌ನ ವಾಶಿ ಗ್ರಾಮದಲ್ಲಿ ರ್ಯಾಲಿಯೊಂದಿಗೆ ಪ್ರಾರಂಭವಾದ ಪ್ರವಾಸವು ಡಿಸೆಂಬರ್ 24 ರಂದು ಅಹ್ಮದ್‌ನಗರ ಜಿಲ್ಲೆಯ ಶೆಗಾಂವ್‌ನಲ್ಲಿ ಮುಕ್ತಾಯಗೊಳ್ಳಲಿದೆ – ಎಲ್ಲಾ ಮರಾಠರಿಗೆ ಕುಣಬಿ ಜಾತಿ ಪ್ರಮಾಣಪತ್ರಗಳನ್ನು ನೀಡಲು ಡಿಸೆಂಬರ್ 24ರವರೆಗೆ ಗಡುವು ನೀಡಿದ್ದಾರೆ.

ಪ್ರವಾಸವು ಕೊಂಕಣ ಮತ್ತು ಪಶ್ಚಿಮ ಮಹಾರಾಷ್ಟ್ರದ ಭಾಗಗಳನ್ನು ಒಳಗೊಂಡಿದೆ. ಪ್ರವಾಸ ಆರಂಭಿಸಿದ ಪಾಟೀಲ್, ಡಿಸೆಂಬರ್ 24 ರೊಳಗೆ ಸರ್ಕಾರ ಮೀಸಲಾತಿ ಪ್ರಕಟಿಸಬೇಕು, ನಮಗೆ ಮೀಸಲಾತಿ ನೀಡುವವರೆಗೆ ನಾವು ಸುಮ್ಮನಿರುವುದಿಲ್ಲ ಎಂದಿದ್ದಾರೆ. ರಾಜ್ಯಾದ್ಯಂತ ಪ್ರವಾಸವು ಮೂರು ಹಂತಗಳಲ್ಲಿ ನಡೆಯಲಿದೆ. ಒಂಬತ್ತು ದಿನಗಳ ಮೊದಲ ಹಂತವು ಇಂದು ಪ್ರಾರಂಭವಾಗಲಿದೆ ಎಂದು ಜಾರಂಗೆ ಪಾಟೀಲ್ ಆಪ್ತರು ತಿಳಿಸಿದ್ದಾರೆ.

ಪಾಟೀಲ್​ರ ಬೆಂಬಲಿಗರ ಪ್ರಕಾರ ಪ್ರವಾಸದ ವೇಳೆ ಮರಾಠಾ ಸಮುದಾಯದವರನ್ನು ಭೇಟಿ ಮಾಡಿ ಅವರ ಜತೆ ಸಂವಾದ ನಡೆಸಿ ಆತ್ಮವಿಶ್ವಾಸ ಹೆಚ್ಚಿಸಲಿದ್ದಾರೆ. ಸಮುದಾಯಕ್ಕೆ ಮೀಸಲಾತಿ ಸಿಗುತ್ತದೆ ಎಂಬ ನಂಬಿಕೆಯನ್ನೂ ಅವರಲ್ಲಿ ಮೂಡಿಸಲಿದ್ದು, ಸರಕಾರ ಕೋಟಾ ನೀಡದ ಹೊರತು ಆಂದೋಲನ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.

ಡಿಸೆಂಬರ್ 24ರೊಳಗೆ ಎಲ್ಲಾ ಮರಾಠಿಗರಿಗೆ ಕುಂಬಿ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಸರ್ಕಾರದ ನಿಯೋಗದೊಂದಿಗೆ ಚರ್ಚೆ ನಡೆಸಿದ ಹಿನ್ನೆಲೆಯಲ್ಲಿ ಪಾಟೀಲ್ ಅವರು ನವೆಂಬರ್ 2 ರಂದು ತಮ್ಮ 9 ದಿನಗಳ ಉಪವಾಸ ಸತ್ಯಾಗ್ರಹವನ್ನು ಹಿಂಪಡೆದಿದ್ದರು.

ಮತ್ತಷ್ಟು ಓದಿ: ಮರಾಠಾ ಮೀಸಲಾತಿ: ಮಹಾರಾಷ್ಟ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ, ಇಲ್ಲಿದೆ ವಿವರ

ಈ ದಿನಾಂಕದೊಳಗೆ ಮರಾಠ ಸಮುದಾಯಕ್ಕೆ ಮೀಸಲಾತಿ ಸಿಗದಿದ್ದರೆ ಮತ್ತೆ ದೊಡ್ಡ ಚಳವಳಿ ಆರಂಭಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದೀಗ ಮನೋಜ್ ಜಾರಂಗೆ ಪಾಟೀಲ್ ಅವರು ಈ ಆಂದೋಲನವನ್ನು ಜಲ್ನಾದಲ್ಲಿ ಅಲ್ಲ ಮುಂಬೈನಲ್ಲಿ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ಡಿಸೆಂಬರ್ 25 ರಂದು ನಾವು ನಮ್ಮ ನಿಲುವನ್ನು ಪ್ರಕಟಿಸುತ್ತೇವೆ ಎಂದು ಹೇಳಿದ್ದಾರೆ.

ಇಲ್ಲಿಯವರೆಗೆ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ನಮ್ಮ ಜನರನ್ನು ಕೆಟ್ಟದಾಗಿ ನಡೆಸಿಕೊಂಡಿವೆ. ಮರಾಠ ಸಮಾಜಕ್ಕೆ ಸಂಬಂಧಿಸಿದ ಪುರಾವೆಗಳನ್ನು ಮರೆಮಾಡಲಾಗಿದೆ.

ಆದರೆ ಈಗ ಗುಪ್ತ ಸಾಕ್ಷಿಗಳು ಹೊರ ಬರುತ್ತಿವೆ. ಹೀಗಾಗಿ ಸರ್ಕಾರ ಹೆದರಿದೆ. ಈಗ ನಮಗೆ ಮೀಸಲಾತಿ ಸಿಗುವುದು ಖಚಿತ. ಇಲ್ಲವಾದರೆ 24ರ ನಂತರ ಮುಂಬೈನಲ್ಲಿ ಮುಂದಿನ ಆಂದೋಲನ ನಡೆಯಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ