ಉಪವಾಸ ಸತ್ಯಾಗ್ರಹ ಹಿಂಪಡೆದ ಮನೋಜ್ ಜಾರಂಗೆ ಪಾಟೀಲ್: ಮರಾಠ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿದ ಸಿಎಂ ಶಿಂಧೆ

ಮರಾಠಾ ಮೀಸಲಾತಿ ಆಂದೋಲನದ ಬೇಡಿಕೆಗಾಗಿ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್​ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಇದೀಗ ಹಿಂಪಡೆದಿದ್ದಾರೆ. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪವಾಸ ಕೈಬಿಟ್ಟಿದ್ದಕ್ಕೆ ಮನೋಜ ಜಾರಂಗೆ ಪಾಟೀಲ್​ ಹಾಗೂ ಸಕಲ ಮರಾಠ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಉಪವಾಸ ಸತ್ಯಾಗ್ರಹ ಹಿಂಪಡೆದ ಮನೋಜ್ ಜಾರಂಗೆ ಪಾಟೀಲ್: ಮರಾಠ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿದ ಸಿಎಂ ಶಿಂಧೆ
ಸಿಎಂ ಏಕನಾಥ್ ಶಿಂಧೆ
Follow us
ಗಂಗಾಧರ​ ಬ. ಸಾಬೋಜಿ
|

Updated on: Nov 02, 2023 | 10:53 PM

ಮುಂಬೈ, ನವೆಂಬರ್​​​​ 02: ಮರಾಠಾ ಮೀಸಲಾತಿ (Maratha reservation) ಆಂದೋಲನದ ಬೇಡಿಕೆಗಾಗಿ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್​ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಇದೀಗ ಹಿಂಪಡೆದಿದ್ದಾರೆ. ಬಳಿಕ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಮನೋಜ ಜಾರಂಗೆ ಪಾಟೀಲ್​ ಹಾಗೂ ಸಕಲ ಮರಾಠ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಮನೋಜ್ ಜಾರಂಗೆ ಪಾಟೀಲ್​ರನ್ನು ಮನವೊಲಿಸಿದ ಕಾನೂನು ತಜ್ಞರು, ಸಚಿವರು ಹಾಗೂ ಸಾರ್ವಜನಿಕ ಪ್ರತಿನಿಧಿಗಳಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ಮನೋಜ್ ಜಾರಂಗೆ ಪಾಟೀಲ್​ ಅವರು ತಮ್ಮ ಉಪವಾಸವನ್ನು ಕೈಬಿಟ್ಟದಕ್ಕೆ ಅವರಿಗೆ ಧನ್ಯವಾದಗಳು. ಅವರ ಸಮುದಾಯಕ್ಕೂ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ಸರ್ಕಾರದ ಕರೆಗೆ ಓಗೊಟ್ಟು ಉಪವಾಸ ಹಿಂಪಡೆದಿರುವ ಮರಾಠ ಸಮುದಾಯಕ್ಕೆ ಸಕಾಲ ಅಭಿನಂದನೆ ಸಲ್ಲಿಸಿದ್ದಾರೆ. ಜಾರಂಗೆಯವರು ನಮ್ಮ ಸರ್ಕಾರದ ನಿಯೋಗದ ಮುಂದೆ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದಾರೆ. ನಾನು ನ್ಯಾಯಮೂರ್ತಿ ಮರೋತ್ರಾವ್ ಗಾಯಕ್ವಾಡ್ ಮತ್ತು ನ್ಯಾಯಮೂರ್ತಿ ಸುನಿಲ್ ಶುಕ್ರೆ ಅವರನ್ನು ಸಹ ಅಭಿನಂದಿಸಿದ್ದಾರೆ.

ಇದನ್ನೂ ಓದಿ: ಮರಾಠ ಮೀಸಲಾತಿ: ದೆಹಲಿಯಲ್ಲಿ ಭೇಟಿಯಾಗಲಿದ್ದಾರೆ ಉನ್ನತ ನಾಯಕರು, ಇಲ್ಲಿವರೆಗೆ ಏನೇನಾಯ್ತು?

ನಾನು ಹಿಂದಿನ ದಿನ ಜಾರಂಗೆ ಜೊತೆ ಚರ್ಚೆ ನಡೆಸಿದ್ದೆ. ಅವರು ಕೆಲವು ವಿಚಾರಗಳನ್ನು ತಿಳಿಸಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಮತ್ತು ಸೂಕ್ತವಾದ ಮೀಸಲಾತಿಯನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಕುಂಬಿ ದಾಖಲೆಗಳನ್ನು ಹುಡುಕಲಾಗುತ್ತಿದೆ. ಮರಾಠವಾಡದಲ್ಲಿ ಮೀಸಲಾತಿ ನೀಡುತ್ತಿದ್ದೇವೆ. ಕುಂಬಿ ಪ್ರಮಾಣ ಪತ್ರ ನೀಡುವಲ್ಲಿ ಶಿಂಧೆ ಸಮಿತಿ ಯಶಸ್ವಿಯಾಗಿದೆ. 13 ಸಾವಿರ ದಾಖಲೆಗಳನ್ನು ಹುಡುಕಿದ್ದು ದೊಡ್ಡ ಸಾಧನೆ. ಶಿಂಧೆ ಸಮಿತಿ ಹಗಲಿರುಳು ಕೆಲಸ ಮಾಡಿದೆ. ಇನ್ನಷ್ಟು ಕುಂಬಿ ದಾಖಲೆಗಳು ಪತ್ತೆಯಾಗಲಿವೆ ಎಂದು ಹೇಳಿದ್ದಾರೆ.

ಇದು ಇತಿಹಾಸದಲ್ಲಿ ಮೊದಲ ಘಟನೆ

ಕಾನೂನು ತಜ್ಞರೊಬ್ಬರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ಇತಿಹಾಸದಲ್ಲೇ ಮೊದಲ ನಿದರ್ಶನವಾಗಲಿದೆ. ಗಾಯಕ್ವಾಡ್ ಅವರಿಗೆ ಈ ವಿಷಯದ ಸಂಪೂರ್ಣ ಜ್ಞಾನವಿತ್ತು. ನಿವೃತ್ತ ನ್ಯಾಯಾಧೀಶರ ಜತೆ ಮಾತನಾಡಿದ ಬಳಿಕ ಅವರಿಗೆ ಮನವರಿಕೆ ಆಗಿರಬೇಕು ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.

ಇದನ್ನೂ ಓದಿ: Maratha Reservation: ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯದ ಮೀಸಲಾತಿಗೆ ಸಮ್ಮತಿ: ಏಕನಾಥ್ ಶಿಂಧೆ

ಮರಾಠಾ ಮೀಸಲಾತಿ ಆಂದೋಲನದ ಬೇಡಿಕೆಗಾಗಿ ಜಾಲ್ನಾದ ಅಂತರವಳಿ-ಸಾರತಿಯಲ್ಲಿ ಮನೋಜ್ ಜಾರಂಗೆ ಪಾಟೀಲ್ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಅವರ ಉಪವಾಸ ಸತ್ಯಾಗ್ರಹ ಇಂದಿಗೆ ಒಂಬತ್ತನೇ ದಿನಕ್ಕೆ ಕಾಲಿಟ್ಟಿದ್ದು, ನಿನ್ನೆ ರಾತ್ರಿಯಿಂದ ಮನೋಜ ಜಾರಂಗೆ ಪಾಟೀಲ್ ನೀರು ಕುಡಿಯುವುದನ್ನು ಸಹ ನಿಲ್ಲಿಸಿದ್ದರು. ಆದರೆ ಸದ್ಯ ತಮ್ಮ ಉಪವಾಸ ಸತ್ಯಾಗ್ರಹವನ್ನು ಅವರು ಹಿಂಪಡೆದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ