ನವದೆಹಲಿ: ದೆಹಲಿಯಲ್ಲಿ ಇನ್ನುಮುಂದೆ ಕಾರಿನಲ್ಲಿ ಒಬ್ಬರೇ ಇದ್ದಾಗ ಮಾಸ್ಕ್ ಧರಿಸುವ ಅಗತ್ಯವಿಲ್ಲ. ದೆಹಲಿಯಲ್ಲಿ ಮಾಸ್ಕ್ ಧರಿಸುವುದರಿಂದ ವಿನಾಯಿತಿ ನೀಡಲಾಗಿದೆ. ದೆಹಲಿ ಹೈಕೋರ್ಟ್ (Delhi High Court) ಅಭಿಪ್ರಾಯದಂತೆ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ನಿರ್ಧಾರ ಮಾಡಿದೆ. ದೆಹಲಿಯಲ್ಲಿ ತಮ್ಮ ಕಾರಿನಲ್ಲಿ ಏಕಾಂಗಿಯಾಗಿ ಚಾಲನೆ ಮಾಡುವವರು ಇನ್ನು ಮುಂದೆ ಮಾಸ್ಕ್ (Mask) ಧರಿಸುವ ಅಗತ್ಯವಿಲ್ಲ ಎಂದು ರಾಷ್ಟ್ರೀಯ ರಾಜಧಾನಿಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಇಂದು ಕೋವಿಡ್ ನಿರ್ಬಂಧಗಳನ್ನು ಪರಿಶೀಲಿಸುವ ಸಭೆಯಲ್ಲಿ ನಿರ್ಧರಿಸಿದೆ. ದೆಹಲಿ ಹೈಕೋರ್ಟ್ ನಿರ್ದೇಶನವನ್ನು “ಅಸಂಬದ್ಧ” ಎಂದು ಕರೆದ ಕೆಲವು ದಿನಗಳ ಬಳಿಕ ಇದೀಗ ಈ ನಿರ್ಧಾರಕ್ಕೆ ಬರಲಾಗಿದೆ.
ತನ್ನ ತಾಯಿಯೊಂದಿಗೆ ಕಾರಿನಲ್ಲಿ ಕುಳಿತು ಕಿಟಕಿಗಳನ್ನು ಮೇಲಕ್ಕೆತ್ತಿ ಕಾಫಿ ಕುಡಿಯುತ್ತಿದ್ದಾಗ ಮಾಸ್ಕ್ ಧರಿಸದ ವ್ಯಕ್ತಿಯೊಬ್ಬನಿಗೆ ದಂಡ ವಿಧಿಸಿದ ಘಟನೆ ದೆಹಲಿಯಲ್ಲಿ ನಡೆದಿತ್ತು. “ಇದು ದೆಹಲಿ ಸರ್ಕಾರದ ಆದೇಶ, ನೀವು ಅದನ್ನು ಏಕೆ ಹಿಂತೆಗೆದುಕೊಳ್ಳಬಾರದು? ಇದು ಅಸಂಬದ್ಧವಾಗಿದೆ. ನಾವು ನಮ್ಮ ಸ್ವಂತ ಕಾರಿನಲ್ಲಿ ಕುಳಿತಾಗ ನಾವು ಏಕೆ ಮಾಸ್ಕ್ ಧರಿಸಬೇಕು?” ಎಂದು ಹೈಕೋರ್ಟ್ ನ್ಯಾಯಪೀಠ ಪ್ರಶ್ನಿಸಿತ್ತು.
ವಿಚಾರಣೆಯ ಸಂದರ್ಭದಲ್ಲಿ ದೆಹಲಿ ಸರ್ಕಾರವನ್ನು ಪ್ರತಿನಿಧಿಸುವ ಹಿರಿಯ ವಕೀಲ ರಾಹುಲ್ ಮೆಹ್ರಾ, 2021ರ ಏಪ್ರಿಲ್ 7ರ ಹೈಕೋರ್ಟ್‌ನ ಏಕ ಸದಸ್ಯರ ನ್ಯಾಯಪೀಠದ ಆದೇಶವು ಖಾಸಗಿ ಕಾರು ಚಾಲನೆ ಮಾಡುವಾಗ ಮಾಸ್ಕ್ ಧರಿಸದಿದ್ದಕ್ಕಾಗಿ ಚಲನ್‌ಗಳನ್ನು ವಿಧಿಸುವ ದೆಹಲಿ ಸರ್ಕಾರದ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿರುವುದು ಬಹಳ ದುರದೃಷ್ಟಕರ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸೋಮವಾರ ದೆಹಲಿಗೆ ಹಾರಲಿರುವ ಸಿಎಂ ಬೊಮ್ಮಾಯಿ; ಬಜೆಟ್ ಕುರಿತು ವರಿಷ್ಠರ ಜೊತೆ ಚರ್ಚೆ
Rain Updates: ದೆಹಲಿ, ಪಂಜಾಬ್, ಹರಿಯಾಣದಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ಭಾರೀ ಮಳೆ ಸಾಧ್ಯತೆ