ನನಗೆ ಕರೆ ಮಾಡಿದವರು ಆಕೆ ಆತ್ಮಹತ್ಯೆಯಿಂದ ಸಾವಿಗೀಡಾಗಿರಬಹುದು ಎಂದು ಹೇಳಿದ್ದರು: ಕೋಲ್ಕತ್ತಾ ಸಂತ್ರಸ್ತೆಯ ಅಪ್ಪ
ಎರಡನೇ ಕರೆಯಲ್ಲಿ ಆಕೆಯ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಕರೆ ಮಾಡಿದವರು ಹೇಳಿದ್ದಾರೆ ಎಂದು ಸಂತ್ರಸ್ತೆಯ ಅಪ್ಪ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ. ಮೂರನೇ ಕರೆಯಲ್ಲಿ, ಸಿಬ್ಬಂದಿಯೊಬ್ಬರು, "ಅವಳು ಆತ್ಮಹತ್ಯೆ ಮಾಡಿಕೊಂಡಿರಬಹುದು ಅಥವಾ ಸತ್ತಿರಬಹುದು. ಇಲ್ಲಿ ಪೊಲೀಸರು ಇದ್ದಾರೆ, ನಾವು ಆಸ್ಪತ್ರೆಯಲ್ಲಿ, ಎಲ್ಲರ ಮುಂದೆ, ಈ ಕರೆ ಮಾಡುತ್ತಿದ್ದೇವೆ"ಎಂದಿದ್ದಾರೆ.
ಕೋಲ್ಕತ್ತಾ ಆಗಸ್ಟ್ 29: ಆಗಸ್ಟ್ 9 ರಂದು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಅತ್ಯಾಚಾರ- ಕೊಲೆಯಾದ ಕೋಲ್ಕತ್ತಾ ವೈದ್ಯರ ಪೋಷಕರಿಗೆ ಅಪರಾಧ ನಡೆದ ರಾತ್ರಿ ಆಸ್ಪತ್ರೆಯ ಉದ್ಯೋಗಿಯಿಂದ ಮೂರು ಕರೆಗಳು ಬಂದವು ಎಂದು ವರದಿಯೊಂದು ಗುರುವಾರ ತಿಳಿಸಿದೆ. ಎಲ್ಲಾ ಮೂರು ಕರೆಗಳಲ್ಲಿ, 31 ವರ್ಷದ ಮಹಿಳೆಗೆ ಏನಾಯಿತು ಎಂಬುದನ್ನು ಬಹಿರಂಗಪಡಿಸಲು ಕರೆ ಮಾಡಿದವರು ನಿರಾಕರಿಸಿದ್ದಾರೆ.
ಮೊದಲ ಕರೆಯಲ್ಲಿ ಆರ್‌ಜಿ ಕರ್ ಆಸ್ಪತ್ರೆಯ ಸಹಾಯಕ ಅಧೀಕ್ಷಕರು ಮಹಿಳೆಯ ಪೋಷಕರನ್ನು ಆಸ್ಪತ್ರೆಗೆ ಬರುವಂತೆ ಹೇಳಿದರು. “ನಿಮ್ಮ ಮಗಳಿಗೆ ಹುಷಾರಿಲ್ಲ. ದಯವಿಟ್ಟು ತಕ್ಷಣ ಆಸ್ಪತ್ರೆಗೆ ಬರಬಹುದೇ?” ಎಂದು ಅವರು ಕೇಳಿದ್ದರು ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಸಂತ್ರಸ್ತೆಯ ತಂದೆ ಹೆಚ್ಚಿನ ವಿವರಗಳನ್ನು ಕೇಳಿದಾಗ, ಆ ವ್ಯಕ್ತಿ ಆಕೆಗೆ ಹುಷಾರಿಲ್ಲ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಎಂದು ಹೇಳಿದರು. ಮಗಳಿಗೆ ಏನಾಗಿದೆ ಎಂದು ಕೇಳಿದಾಗ, ಏನಾಯಿತು ಎಂದು ವೈದ್ಯರು ತಿಳಿಸುತ್ತಾರೆ. ನೀವು ಆಸ್ಪತ್ರೆಗೆ ಬಂದುಬಿಡಿ ಎಂದು ಹೇಳಿದ್ದಾರೆ.
ಎರಡನೇ ಕರೆಯಲ್ಲಿ ಆಕೆಯ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಕರೆ ಮಾಡಿದವರು ಹೇಳಿದ್ದಾರೆ ಎಂದು ಸಂತ್ರಸ್ತೆಯ ಅಪ್ಪ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ. ಮೂರನೇ ಕರೆಯಲ್ಲಿ, ಸಿಬ್ಬಂದಿಯೊಬ್ಬರು, “ಅವಳು ಆತ್ಮಹತ್ಯೆ ಮಾಡಿಕೊಂಡಿರಬಹುದು ಅಥವಾ ಸತ್ತಿರಬಹುದು. ಇಲ್ಲಿ ಪೊಲೀಸರು ಇದ್ದಾರೆ, ನಾವು ಆಸ್ಪತ್ರೆಯಲ್ಲಿ, ಎಲ್ಲರ ಮುಂದೆ, ಈ ಕರೆ ಮಾಡುತ್ತಿದ್ದೇವೆ”ಎಂದಿದ್ದಾರೆ.
ತನ್ನ 36 ಗಂಟೆಗಳ ಸುದೀರ್ಘ ಪಾಳಿಯಲ್ಲಿದ್ದ ವೈದ್ಯರು ವಿಶ್ರಾಂತಿ ಪಡೆಯಲು ಆಸ್ಪತ್ರೆಯ ಸೆಮಿನಾರ್ ಹಾಲ್‌ಗೆ ಹೋಗಿದ್ದಾಗ ಸಂಜಯ್ ರಾಯ್ ಎಂಬ ವ್ಯಕ್ತಿ ಆಕೆಯ ಮೇಲೆ ದೌರ್ಜನ್ಯವೆಸಗಿದ್ದ.
ಆಕೆಯ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆಕೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವುದು ದೃಢಪಟ್ಟಿದೆ. ಆಗಸ್ಟ್ 9 ರಂದು ಮುಂಜಾನೆ 4.03 ಕ್ಕೆ ಸೆಮಿನಾರ್ ಹಾಲ್‌ಗೆ ಪ್ರವೇಶಿಸಿದ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಸಂಜಯ್ ರಾಯ್ ನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ‘ಬಂಗಾಳವನ್ನು ಸುಟ್ಟರೆ…’; ಪ್ರಧಾನಿ ಮೋದಿಗೆ ಎಚ್ಚರಿಕೆ ನೀಡಿದ ಮಮತಾ ಬ್ಯಾನರ್ಜಿ ವಿರುದ್ಧ ದೂರು
ಶವಪರೀಕ್ಷೆಯಲ್ಲಿ ಆಕೆಯ ದೇಹದ ಮೇಲೆ 25 ಆಂತರಿಕ ಮತ್ತು ಬಾಹ್ಯ ಗಾಯಗಳಿದ್ದವು.
ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಕೊಲೆ ಮತ್ತು ಅತ್ಯಾಚಾರವನ್ನು ಆತ್ಮಹತ್ಯೆ ಎಂದು ಸಾಬೀತುಪಡಿಸಲು ಪ್ರಯತ್ನಿಸಿದ್ದಾರೆ ಎಂದು ಸುಪ್ರೀಂಕೋರ್ಟ್ ಟೀಕಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ