ದೆಹಲಿಯಲ್ಲಿ ಉಚಿತ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಲು ಬಿಜೆಪಿ ಬಯಸುತ್ತಿದೆ: ಅರವಿಂದ ಕೇಜ್ರಿವಾಲ್

ಎಎಪಿಗೆ ಒಂದು ಅವಕಾಶ ನೀಡಿ. ನಾವು ಉಚಿತವಾಗಿ ವಿದ್ಯುತ್ ಮತ್ತು ನೀರು ಸರಬರಾಜು ಮಾಡಿದಂತೆ,  ಕಸದ ಸಮಸ್ಯೆಯನ್ನು ಸಹ ನಿಭಾಯಿಸುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿಯಲ್ಲಿ ಉಚಿತ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಲು ಬಿಜೆಪಿ ಬಯಸುತ್ತಿದೆ: ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್
Edited By:

Updated on: Nov 20, 2022 | 2:55 PM

ದೆಹಲಿ: ದೆಹಲಿಯಲ್ಲಿ ಉಚಿತ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಲು ಬಿಜೆಪಿ (BJP) ಬಯಸುತ್ತಿದೆ. ಆದರೆ ಅದು ಯಶಸ್ವಿಯಾಗುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್(Arvind Kejriwal) ಹೇಳಿದ್ದಾರೆ. ದೆಹಲಿಯ ಪಹರ್‌ಗಂಜ್‌ನಲ್ಲಿ ಮುಂಬವರುವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಪ್ರಚಾರ ನಡೆಸಿದ ಕೇಜ್ರಿವಾಲ್, ಡಿಸೆಂಬರ್ 4 ರಂದು ನಡೆಯಲಿರುವ ನಾಗರಿಕ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ, ಅವರು ನಗರದ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸುತ್ತಾರೆ ಎಂದು ಹೇಳಿದ್ದಾರೆ. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. “ಅವರು ಅದನ್ನು ಉಚಿತ ವಿದ್ಯುತ್ (freebie) ಎಂದು ಕರೆಯುತ್ತಾರೆ. ನಾವು ಯಾಚಕರು, ಅವರು ನಮಗೆ ಉಪಕಾರ ಮಾಡುತ್ತಿರುವಂತೆ ವರ್ತಿಸುತ್ತಾರೆ. ಅವರು ಅದನ್ನು ಬಿಟ್ಟಿ ಎಂದು ಏಕೆ ಕರೆಯುತ್ತಾರೆ? ಏಕೆಂದರೆ ಅವರು ದೆಹಲಿಯಲ್ಲಿ ಉಚಿತ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಲು ಬಯಸುತ್ತಾರೆ. ಆದರೆ ಕೇಜ್ರಿವಾಲ್ ಬದುಕಿರುವವರೆಗೂ ವಿದ್ಯುತ್ ಸರಬರಾಜು ಉಚಿತವಾಗಿರುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

ಕೇಜ್ರಿವಾಲ್ ಅವರು 2019 ರಲ್ಲಿ ದೆಹಲಿಯಲ್ಲಿ ಉಚಿತ ವಿದ್ಯುತ್ ಯೋಜನೆಯನ್ನು ಘೋಷಿಸಿದ್ದರು. ಮುಂಬರುವ ಗುಜರಾತ್ ಚುನಾವಣೆಯಲ್ಲಿ ಇದೇ ರೀತಿಯ ಭರವಸೆಗಳನ್ನು ಎಎಪಿ ನೀಡುತ್ತಿದೆ.  ಕಸ ನಿರ್ವಹಣೆ ಬಿಜೆಪಿಯ ಜವಾಬ್ದಾರಿಯಾಗಿದ್ದು, ಎಂಸಿಡಿಯಲ್ಲಿ ಎಎಪಿ ಅಧಿಕಾರಕ್ಕೆ ಬಂದ ನಂತರ ಅದನ್ನು ನಿಭಾಯಿಸುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಹೇಳಿದ್ದಾರೆ.

ಎಎಪಿಗೆ ಒಂದು ಅವಕಾಶ ನೀಡಿ. ನಾವು ಉಚಿತವಾಗಿ ವಿದ್ಯುತ್ ಮತ್ತು ನೀರು ಸರಬರಾಜು ಮಾಡಿದಂತೆ,  ಕಸದ ಸಮಸ್ಯೆಯನ್ನು ಸಹ ನಿಭಾಯಿಸುತ್ತೇವೆ ಎಂದು ಅವರು ಹೇಳಿದರು. ಕಸದ ವಿಲೇವಾರಿ ಬಗ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, “ಕೆಲವು ಲ್ಯಾಂಡ್‌ಫಿಲ್ ಸೈಟ್ ಬರಲಿದೆ ಎಂದು ನಾನು ಕೇಳಿದ್ದೇನೆ” ಎಂದು ಹೇಳಿದರು.

ಎಎಪಿ ಎಮ್‌ಸಿಡಿಯಲ್ಲಿ 250 ಸ್ಥಾನಗಳಲ್ಲಿ 230 ಸ್ಥಾನಗಳನ್ನು ಪಡೆಯಬೇಕು. ಹಾಗಾದರೆ ಎಎಪಿ ರಾಜ್ಯ ಮತ್ತು ನಾಗರಿಕ ಸಂಸ್ಥೆಯಲ್ಲಿ ಅಧಿಕಾರಕ್ಕೆ ಬಂದಂತಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದರು.

ಬಿಜೆಪಿ ಗೆದ್ದರೆ, ಎಲ್ಲಾ ಅಭಿವೃದ್ಧಿ ಕೆಲಸಗಳು ನಿಲ್ಲುತ್ತವೆ, ಅವರು ಈಗ ಮಾಡುತ್ತಿರುವಂತೆ ಪ್ರತಿದಿನ ನಮ್ಮೊಂದಿಗೆ ಜಗಳವಾಡುತ್ತಾರೆ. ಎಎಪಿ ಎರಡೂ ಸ್ಥಳಗಳಲ್ಲಿ ಅಧಿಕಾರದಲ್ಲಿರಬೇಕು, ಕೇಜ್ರಿವಾಲ್ ಮಾತ್ರ ಕೆಲಸ ಆಗುವುದನ್ನು ಖಚಿತಪಡಿಸುತ್ತಾರೆ ಎಂದಿದ್ದಾರೆ ದೆಹಲಿ ಮುಖ್ಯಮಂತ್ರಿ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ