ದೇಶ ಬಿಟ್ಟು ಪರಾರಿಯಾಗಿರುವ ದೊಡ್ಡ ಉದ್ಯಮಿ, ಬ್ಯಾಂಕ್ ವಂಚಕ ಆರೋಪಿ ಮೆಹುಲ್ ಚೋಸ್ಕಿ ಆಂಟಿಗುವಾದಲ್ಲಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ (PNB Scam) ಪ್ರಮುಖ ಆರೋಪಿ ಚೋಸ್ಕಿ ಆಂಟಿಗುವಾದ ಬಂದರು ಪ್ರದೇಶದಲ್ಲಿ ಭಾನುವಾರದಿಂದ ಕಣ್ಮರೆಯಾಗಿದ್ದು, ಸ್ಥಳೀಯ ಪೊಲೀಸರು ಆತನ ಹುಡುಕಾಟದಲ್ಲಿ ತೊಡಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಮೆಹುಲ್ ಚೋಸ್ಕಿ ನಾಪತ್ತೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಆತನ ಸುರಕ್ಷತೆ ಬಗ್ಗೆ ಕುಟುಂಬಸ್ಥರು ಆತಂಕಗೊಂಡಿದ್ದಾರೆ.
ವಜ್ರ ವ್ಯಾಪಾರಿ ಮೆಹುಲ್ ಚೋಸ್ಕಿ ಪರ ವಕೀಲರ ಪ್ರಕಾರ ಮೆಹುಲ್ ಚೋಸ್ಕಿ ನಾಪತ್ತೆಯಾಗಿದ್ದಾನೆ. ಆತನ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ನನ್ನೊಂದಿಗೆ ಮಾತನಾಡಲು ಕುಟುಂಬಸ್ಥರು ಕರೆ ಮಾಡಿದ್ದಾರೆ. ಆಂಟಿಗುವಾ ಶೋಧ ಕಾರ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
61 ವರ್ಷ ಪ್ರಾಯದ ವಜ್ರದ ವ್ಯಾಪಾರಿ ಮೆಹುಲ್ ಚೋಸ್ಕಿ ಮತ್ತು ಅವನ ಸಂಬಂಧೀ ನೀರವ್ ಮೋದಿ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ (Punjab National Bank -PNB) 13,500 ಕೋಟಿ ರೂಪಾಯಿ ವಂಚನೆ ಎಸಗಿ ಪರಾರಿಯಾಗಿದ್ದಾರೆ ಎಂದು ಸಿಬಿಐ ತನ್ನ ತನಿಖೆಯಲ್ಲಿ ತಿಳಿಸಿದೆ. ಸದ್ಯ ನೀರವ್ ಮೋದಿ ಲಂಡನ್ ಜೈಲಿನಲ್ಲಿದ್ದು, ಆತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಅಲ್ಲಿನ ನ್ಯಾಯಾಲಯ ಆದೇಶ ನೀಡಿದೆ.
2018ರ ಜನವರಿಯಲ್ಲಿ ಮೆಹುಲ್ ಚೋಸ್ಕಿ ಭಾರತ ಬಿಟ್ಟು ಪರಾರಿಯಾಗುದ್ದಾನೆ. ಅದಕ್ಕೂ ಮುನ್ನ ತಾನು ಹೂಡಿಕೆ ಮಾಡುತ್ತೇನೆ ಎಂದು ಹೇಳಿ 2017ರಲ್ಲಿ ವೆಸ್ಟ್ ಇಂಡೀಸ್ ದ್ವೀಪ ರಾಷ್ಟ್ರ್ಗಗಳಾದ ಆಂಟಿಗುವಾ ಮತ್ತು ಬರ್ಬುಡಾದ ಪೌರತ್ವ ಪಡೆದಿದ್ದಾನೆ. ಆತ ಪರಾರಿಯಾದ ಬಳಿಕ ಪಿಎನ್ಬಿ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು.
ವರದಿಗಳ ಪ್ರಕಾರ ಸೋಮವಾರ ಸಂಜೆ ಮೆಹುಲ್ ಚೋಸ್ಕಿ ಆಂಟಿಗುವಾದಲ್ಲಿ ಖ್ಯಾತ ರೆಸ್ಟೋರೆಂಟ್ಗೆ ರಾತ್ರಿ ಭೋಜನಕ್ಕೆ ಎಂದು ಹೋದವ ಅದಾದ ಬಳಿಕ ಕಾಣೆಯಾಗಿದ್ದಾನೆ. ಆತನ ವಾಹನ ಜಾಲಿ ಬಂದರಿನಲ್ಲಿ ಪತ್ತೆಯಾಗಿದೆ. ಉನ್ನತ ಪೊಲೀಸ್ ಅಧಿಕಾರಿಗಳು ಆತನ ಬೇಟೆಯಲ್ಲಿದ್ದಾರೆ ಎಂದು ಆಂಟಿಗುವಾದ ಟಿವಿ ಮಾಧ್ಯಮಗಳು ವರದಿ ಮಾಡಿವೆ.
( Mehul Choksi Missing: Fugitive Businessman Mehul Choksi Wanted in PNB Scam facing a CBI probe Goes Missing in Antigua)
Mehul Choksi: 2027ಕ್ಕೆ ಮೊದಲು ಮೆಹುಲ್ ಚೋಕ್ಸಿ ಭಾರತಕ್ಕೆ ಬರುವುದು ಅನುಮಾನ
Published On - 10:22 am, Tue, 25 May 21