​​India-China Border: ಭಾರತ-ಚೀನಾ ಗಡಿಯ ನಿರ್ಬಂಧಿತ ಪ್ರದೇಶದಲ್ಲಿ 10 ತಿಂಗಳ ನಂತರ ಪತ್ತೆಯಾದ ಮಾನಸಿಕ ಅಸ್ವಸ್ಥ ವ್ಯಕ್ತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 10, 2022 | 1:42 PM

ಕಳೆದ 10 ತಿಂಗಳಿಂದ ನಾಪತ್ತೆಯಾಗಿದ್ದ 22 ವರ್ಷದ ಯುವಕನನ್ನು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು (ಐಟಿಬಿಪಿ) ಭಾನುವಾರ ಸೋನಮ್ ಪ್ರದೇಶದಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಹರ್ಷಿಲ್ ಸ್ಟೇಷನ್ ಹೌಸ್ ಆಫೀಸರ್ ದಿಲ್ ಮೋಹನ್ ಸಿಂಗ್ ತಿಳಿಸಿದ್ದಾರೆ.

​​India-China Border: ಭಾರತ-ಚೀನಾ ಗಡಿಯ ನಿರ್ಬಂಧಿತ ಪ್ರದೇಶದಲ್ಲಿ 10 ತಿಂಗಳ ನಂತರ ಪತ್ತೆಯಾದ ಮಾನಸಿಕ ಅಸ್ವಸ್ಥ ವ್ಯಕ್ತಿ
ಸಾಂದರ್ಭಿಕ ಚಿತ್ರ
Follow us on

ಉತ್ತರಕಾಶಿ: ಉತ್ತರಾಖಂಡದ ಭಾರತ-ಚೀನಾ ಗಡಿಯ ನಿರ್ಬಂಧಿತ ಪ್ರದೇಶದಲ್ಲಿ ಬಿಹಾರದ ಮಾನಸಿಕ ಅಸ್ಥಿರ ವ್ಯಕ್ತಿಯೊಬ್ಬ ಗಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ 10 ತಿಂಗಳಿಂದ ನಾಪತ್ತೆಯಾಗಿದ್ದ 22 ವರ್ಷದ ಯುವಕನನ್ನು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು (ಐಟಿಬಿಪಿ) ಭಾನುವಾರ ಸೋನಮ್ ಪ್ರದೇಶದಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಹರ್ಷಿಲ್ ಸ್ಟೇಷನ್ ಹೌಸ್ ಆಫೀಸರ್ ದಿಲ್ ಮೋಹನ್ ಸಿಂಗ್ ತಿಳಿಸಿದ್ದಾರೆ.

ಸೋಮವಾರದಂದು ಸ್ಥಳೀಯ ನ್ಯಾಯಾಲಯವು ವ್ಯಕ್ತಿಯ ಮಾನಸಿಕ ಆರೋಗ್ಯವನ್ನು ಪರೀಕ್ಷಿಸಲು ಮಂಡಳಿಯನ್ನು ರಚಿಸುವಂತೆ ಜಿಲ್ಲಾ ಆಸ್ಪತ್ರೆಗೆ ಕೇಳಿದೆ. ಸೋನಂ ಭಾರತ-ಚೀನಾ ಗಡಿಯಲ್ಲಿರುವ ನಿರ್ಬಂಧಿತ ಪ್ರದೇಶವಾಗಿದ್ದು, ಸೇನೆ, ITBP ಮತ್ತು ಆಡಳಿತ ಸಿಬ್ಬಂದಿ ಮಾತ್ರ ಅಲ್ಲಿಗೆ ಹೋಗಬಹುದು. ಈ ರೀತಿಯ ಸೂಕ್ಷ್ಮ ಮತ್ತು ನಿರ್ಬಂಧಿತ ಪ್ರದೇಶಕ್ಕೆ ವ್ಯಕ್ತಿಯೊಬ್ಬರು ಪ್ರವೇಶಿಸಿರುವುದು ಗಡಿ ಪ್ರದೇಶದ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ವ್ಯಕ್ತಿಯ ಮನೆಯಿಂದ ಹೊರ ಹಾಕಲಾಗಿದೆ. ಇದೀಗ 10 ತಿಂಗಳ ನಂತರ ಸಿಕ್ಕಿದ್ದಾನೆ ಎಂದು ಸಿಂಗ್ ಹೇಳಿದರು. ಇದೀಗ ಈ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ. ಹೆಚ್ಚಿನ ಮಾಹಿತಿ ಪಡೆದು ಆತನ ಮನೆಯವರಿಗೆ ತಿಳಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Published On - 1:28 pm, Wed, 10 August 22