Mia Khalifa: ಜಾಮೂನು, ಸಮೋಸಾ ತಿಂದು ರೈತರ ಪರವಾಗಿ ಮತ್ತೆ ಟ್ವೀಟ್​ ಮಾಡಿದ ಮಿಯಾ ಖಲೀಫಾ

ಈ ವೀಡಿಯೊವನ್ನು ಹಂಚಿಕೊಳ್ಳುವಾಗ ಮಿಯಾ ಶೀರ್ಷಿಕೆ ಒಂದನ್ನು ಬರೆದಿದ್ದಾರೆ. ಅದರಲ್ಲಿ, ನಿತ್ಯ ಒಂದು ಗುಲಾಬ್​ ಜಾಮೂನ್​ ತಿಂದರೆ ಫ್ಯಾಸಿಸಂ ದೂರವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

Mia Khalifa: ಜಾಮೂನು, ಸಮೋಸಾ ತಿಂದು ರೈತರ ಪರವಾಗಿ ಮತ್ತೆ ಟ್ವೀಟ್​ ಮಾಡಿದ ಮಿಯಾ ಖಲೀಫಾ
ಮಿಯಾ ಖಲೀಫಾ

Updated on: Feb 07, 2021 | 5:27 PM

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲವಾಗಿ ಲೆಬನಾನ್​ನ ಮಾಡೆಲ್ ಮತ್ತು ಮಾಜಿ ಪಾರ್ನ್​​ ತಾರೆ ಮಿಯಾ ಖಲೀಫಾ ನಿರಂತರವಾಗಿ ಟ್ವೀಟ್ ಮಾಡುತ್ತಿದ್ದಾರೆ. ರೈತರ ಬಗ್ಗೆ ಅವರು ಮಾಡಿದ್ದ ಟ್ವೀಟ್​ ಇಟ್ಟುಕೊಂಡು ಟ್ರೋಲ್​ ಮಾಡಲಾಗಿತ್ತು. ಮಿಯಾ ಖಲೀಫಾ ಆ ಟ್ರೋಲ್‌ಗಳಿಗೆ ಸೂಕ್ತ ಉತ್ತರ ನೀಡಿದ್ದರು. ಏತನ್ಮಧ್ಯೆ, ಮಿಯಾ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಭಾರತೀಯ ಖಾದ್ಯವನ್ನು ಅವರು ಆನಂದಿಸುತ್ತಿದ್ದಾರೆ. ಅಲ್ಲದೆ, ಆಹಾರವನ್ನು ಕಳುಹಿಸಿದ್ದಕ್ಕಾಗಿ ಮಿಯಾ ರೈತರಿಗೆ ಧನ್ಯವಾದ ಅರ್ಪಿಸಿದ್ದಾರೆ.

ರೈತರ ಪರವಾಗಿ ಟ್ವೀಟ್​ ಮಾಡುತ್ತಿರುವುದಕ್ಕೆ ಪ್ರತಿಯಾಗಿ ಮಿಯಾ ಹಣ ಪಡೆಯುತ್ತಿದ್ದಾರೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದಕ್ಕೆ ಪ್ರತಿಯಾಗಿ ಮಿಯಾ ಉತ್ತರಿಸಿದ್ದಾರೆ. ಕಷ್ಟಪಟ್ಟು ಕೆಲಸ ಮಾಡಿ ಏನನ್ನಾದರೂ ಪಡೆಯುವುದು ನಿಜಕ್ಕೂ ಖುಷಿ ನೀಡುತ್ತದೆ. ಸಾಮಾಜಿಕ ಜಾಲತಾಣದಲ್ಲಿ ರೈತರ ಪರವಾಗಿ ಟ್ವೀಟ್​ ಮಾಡಿದ್ದಕ್ಕೆ ಪ್ರತಿಯಾಗಿ ನನಗೆ ಈ ಊಟ ಸಿಕ್ಕಿದೆ. ಪ್ರತಿಯೊಂದಕ್ಕೂ ಮೌಲ್ಯವಿದೆ ಎಂದು ನಾನು ಭಾವಿಸಿದ್ದೇನೆ. ನನ್ನ ಕೆಲಸಕ್ಕಾಗಿ ನನಗೆ ಸಮೋಸಾ ಸಿಕ್ಕಿದೆ. ಈ ರುಚಿಕರವಾದ ಭೋಜನವನ್ನು ಕಳುಹಿಸಿದವರಿಗೆ ಧನ್ಯವಾದ ಎಂದಿದ್ದಾರೆ. ಈ ವೇಳೆ ರೈತರ ಬಗ್ಗೆಯೂ ಅವರು ಉಲ್ಲೇಖಿಸಿದ್ದಾರೆ.

ವಿಡಿಯೋವನ್ನು ಹಂಚಿಕೊಳ್ಳುವಾಗ ಮಿಯಾ ಶೀರ್ಷಿಕೆ ಒಂದನ್ನು ಬರೆದಿದ್ದಾರೆ. ‘ಸುಂದರ ಹಬ್ಬದೂಟಕ್ಕೆ ರೂಪಿ ಕೌರ್​​ ಅವರಿಗೆ ಧನ್ಯವಾದಗಳು. ಜಾಮೂನ್​ ನೀಡಿದ ಜಗ್ಮೀತ್ ಸಿಂಗ್​ಗೆ ಧನ್ಯವಾದ. ನಿತ್ಯ ಒಂದು ಗುಲಾಬ್​ ಜಾಮೂನ್​ ತಿಂದರೆ ಫ್ಯಾಸಿಸಂ ದೂರವಾಗುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಮೂರು ತಿಂಗಳ ಕಾಲವಷ್ಟೇ  ಪೋರ್ನ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ್ದರು ಮೀಯಾ.  ನೀಲಿ ಚಿತ್ರಗಳಲ್ಲಿ ನಟನೆ ನಿಲ್ಲಿಸಿದ್ದ ಮಿಯಾ ಇತ್ತೀಚೆಗೆ ಹೋರಾಟಗಳಲ್ಲಿ ಸಕ್ರಿಯವಾಗಿದ್ದಾರೆ. ಕೆಲವು ದಿನಗಳ ಹಿಂದೆ ಹಾಲಿವುಡ್ ನಟಿ ಈವನ್ ರಾಚೆಲ್​ವುಡ್ ತನ್ನ ಮೇಲೆ ರಾಕ್ ಸ್ಟಾರ್ ಮೆರ್ಲಿನ್ ಮಾನ್ಸನ್ ದೌರ್ಜನ್ಯವೆಸಗಿದ್ದಾರೆ ಎಂದು ಹೇಳಿ ಮುಂದೆ ಬಂದಾಗ, ಮಿಯಾ ಈವಾನ್ ಪರ ನಿಂತು ದೌರ್ಜನ್ಯದ ವಿರುದ್ಧ ದನಿಯೆತ್ತಿದ್ದರು.

Farmers Protest | ವ್ಯಂಗ್ಯವಾಡಿದ ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದ ಮಿಯಾ ಖಲೀಫಾ

 

Published On - 5:25 pm, Sun, 7 February 21

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us