ಶ್ರೀನಗರ: ಶಂಕಿತ ಉಗ್ರರ ಗುಂಪೊಂದು ಜಮ್ಮು-ಕಾಶ್ಮೀರ (Jammu-Kashmir)ದ ಶ್ರೀನಗರದಲ್ಲಿರುವ ಖನ್ಯಾರ್ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ (Police Officer) ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ನೀಡಿರುವ ಖನ್ಯಾರ್ ಠಾಣೆಯ ಪಿಎಸ್ಐ ಅರ್ಶಿದ್ ಅಹ್ಮದ್, ಇಂದು ಮಧ್ಯಾಹ್ನ 1.35ರ ಹೊತ್ತಿಗೆ ಖನ್ಯಾರ್ನ ಪೊಲೀಸ್ ನಾಖಾ ಬಳಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಗಂಭೀರವಾಗಿ ಗಾಯಗೊಂಡ ಪೊಲೀಸ್ ಅಧಿಕಾರಿಯನ್ನು ಎಸ್ಎಂಎಚ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆ ಇಡೀ ಪ್ರದೇಶಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಉಗ್ರರಿಗಾಗಿ ಹುಡುಕಾಟವೂ ನಡೆಯುತ್ತಿದೆ. ಕಳೆದ ತಿಂಗಳು ಬಿಎಸ್ಎಫ್ ಯೋಧರ ಮೇಲೆ ಜಮ್ಮು-ಕಾಶ್ಮೀರದ ಕುಲಗಾಂವ್ನಲ್ಲಿ ಭಯೋತ್ಪಾದಕರ ದಾಳಿಯಾಗಿತ್ತು. ಆದರೆ ಅದೃಷ್ಟವಶಾತ್ ಯಾರಿಗೂ ಏನೂ ಆಗಿರಲಿಲ್ಲ. ಜಮ್ಮು-ಕಾಶ್ಮೀರದಲ್ಲಿ ಉಗ್ರದಾಳಿ ಸಾಮಾನ್ಯವಾಗಿದೆ. ರಕ್ಷಣಾ ಪಡೆಗಳೂ ಕೂಡ ಭಯೋತ್ಪಾದಕರ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುತ್ತಿವೆ. ಅದರಲ್ಲೂ ಪುಲ್ವಾಮಾ, ಕುಲಗಾಂವ್ಗಳಲ್ಲಿ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಉಗ್ರರ ಹಾವಳಿಯಿದೆ.
Jammu and Kashmir | One police personnel injured in the terrorist attack on a police party at Khanyar in Old Srinagar city
(Visuals deferred by unspecified time) pic.twitter.com/dqlHeZbclv
— ANI (@ANI) September 12, 2021
ಇದನ್ನೂ ಓದಿ: ತುಮಕೂರು: ಕಾರಿಗೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ಕೆಎಸ್ಆರ್ಟಿಸಿ ಬಸ್ ಅಪಘಾತ
ಜಮ್ಮು-ಕಾಶ್ಮೀರದಲ್ಲಿ ಮೇಘಸ್ಫೋಟ; ಒಂದೇ ಕುಟುಂಬದ ನಾಲ್ವರು ಸಾವು, ಒಬ್ಬ ನಾಪತ್ತೆ
Published On - 3:43 pm, Sun, 12 September 21