AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶದ ಅಭಿವೃದ್ಧಿಯ ಜಾಹೀರಾತಿನಲ್ಲಿ ಕೊಲ್ಕತ್ತಾದ ಫೋಟೋಗಳು; ಯೋಗಿ ಸರ್ಕಾರದ ವಿರುದ್ಧ ಟಿಎಂಸಿ ಲೇವಡಿ

ಮಮತಾ ಬ್ಯಾನರ್ಜಿ ಸರ್ಕಾರ ನಿರ್ಮಿಸಿರುವ ಕೊಲ್ಕತ್ತಾ ಫ್ಲೈಓವರ್ (ಮಾ ಫ್ಲೈಓವರ್), ಕೊಲ್ಕತ್ತಾದ ಬೃಹತ್ ಕಟ್ಟಡಗಳನ್ನು ಯೋಗಿ ಸರ್ಕಾರದ ಜಾಹೀರಾತಿನಲ್ಲಿ ಬಳಸಿಕೊಳ್ಳಲಾಗಿದೆ.

ಉತ್ತರ ಪ್ರದೇಶದ ಅಭಿವೃದ್ಧಿಯ ಜಾಹೀರಾತಿನಲ್ಲಿ ಕೊಲ್ಕತ್ತಾದ ಫೋಟೋಗಳು; ಯೋಗಿ ಸರ್ಕಾರದ ವಿರುದ್ಧ ಟಿಎಂಸಿ ಲೇವಡಿ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
TV9 Web
| Edited By: |

Updated on: Sep 12, 2021 | 3:47 PM

Share

ಕೊಲ್ಕತ್ತಾ: ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಕಳೆದ 5 ವರ್ಷಗಳಲ್ಲಿ ಉತ್ತರ ಪ್ರದೇಶವನ್ನು ಯಾವ ರೀತಿ ಅಭಿವೃದ್ಧಿಪಡಿಸಿದ್ದಾರೆ ಎಂಬುದನ್ನು ತೋರಿಸಲು ಪತ್ರಿಕೆಗಳ ಮುಖಪುಟದಲ್ಲಿ ಬೃಹತ್ ಜಾಹೀರಾತು ನೀಡಲಾಗಿತ್ತು. ಆ ಜಾಹೀರಾತಿನಿಂದ ಬಿಜೆಪಿಗೆ ಈಗ ಭಾರೀ ಮುಖಭಂಗ ಅನುಭವಿಸುವಂತಾಗಿದೆ. ಇಡೀ ಪುಟದಲ್ಲಿ ನೀಡಲಾಗಿದ್ದ ಜಾಹೀರಾತಿನಲ್ಲಿ ಉತ್ತರ ಪ್ರದೇಶದ ಅಭಿವೃದ್ಧಿ ಕಾರ್ಯಗಳ ಫೋಟೋ ಬದಲಾಗಿ ಪಶ್ಚಿಮ ಬಂಗಾಳದ ಕೆಲವು ಫೋಟೋಗಳನ್ನು ಬಳಸಿಕೊಳ್ಳಲಾಗಿದೆ. ಮಮತಾ ಬ್ಯಾನರ್ಜಿ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ತನ್ನ ಸರ್ಕಾರದ ಜಾಹೀರಾತಿನಲ್ಲಿ ಹಾಕಿಸಿಕೊಂಡಿರುವ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಟಿಎಂಸಿ ಭಾರೀ ಲೇವಡಿ ಮಾಡಿದೆ.

ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ನೀಡಿರುವ ಜಾಹೀರಾತು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಮಮತಾ ಬ್ಯಾನರ್ಜಿ ಸರ್ಕಾರ ನಿರ್ಮಿಸಿರುವ ಕೊಲ್ಕತ್ತಾ ಫ್ಲೈಓವರ್ (ಮಾ ಫ್ಲೈಓವರ್), ಕೊಲ್ಕತ್ತಾದ ಬೃಹತ್ ಕಟ್ಟಡಗಳನ್ನು ಯೋಗಿ ಸರ್ಕಾರದ ಜಾಹೀರಾತಿನಲ್ಲಿ ಬಳಸಿಕೊಳ್ಳಲಾಗಿದೆ. ಈ ಫೋಟೋವನ್ನು ಶೇರ್ ಮಾಡಿಕೊಂಡಿರುವ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಮತ್ತಿತರ ನಾಯಕರು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವನ್ನು ಟೀಕೆ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಕಟ್ಟಡ, ಕಾಮಗಾರಿಗಳ ಫೋಟೋವನ್ನು ಉತ್ತರ ಪ್ರದೇಶ ಸರ್ಕಾರ ಕದ್ದಿದೆ ಎಂದು ಟೀಕಿಸಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೃಷ್ಟಿಯಲ್ಲಿ ಅಭಿವೃದ್ಧಿ ಅಥವಾ ಬದಲಾವಣೆ ಎಂದರೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ಮಾಡಲಾದ ಅಭಿವೃದ್ಧಿ ಕಾರ್ಯಗಳ ಫೋಟೋಗಳನ್ನು ಕದಿಯುವುದಾಗಿದೆ. ಆ ಫೋಟೋಗಳನ್ನು ಕದಿಯುವುದಷ್ಟೇ ಅಲ್ಲದೆ ಅದು ತನ್ನದೇ ಸಾಧನೆ ಎಂದು ಪತ್ರಿಕೆಗಳಲ್ಲಿ ಬಿಂಬಿಸಿಕೊಳ್ಳುವುದೇ ಯೋಗಿ ಆದಿತ್ಯನಾಥ್ ಅವರ ಸಾಧನೆ. ಬಿಜೆಪಿಯ ಪ್ರಭಾವಶಾಲಿ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಡಬಲ್ ಎಂಜಿನ್ ಮಾಡೆಲ್ ಸರ್ಕಾರ ವಿಫಲವಾಗಿದೆ ಎಂಬುದನ್ನು ಇದು ಸಾರಿ ಹೇಳುತ್ತಿದೆ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷಏಕ್ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಸಚಿವರು, ಸಂಸದರು, ಟಿಎಂಸಿ ನಾಯಕರು ಕೂಡ ಈ ಜಾಹೀರಾತಿನ ಫೋಟೋವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡು ಬಿಜೆಪಿಯ ಕಾಲೆಳೆದಿದ್ದಾರೆ. ಈಗಾಗಲೇ ಆ ಇಂಗ್ಲಿಷ್ ಪತ್ರಿಕೆಯ ಡಿಜಿಟಲ್ ಪ್ಲಾಟ್​ಫಾರ್ಮ್ ಹಾಗೂ ಇ-ಪೇಪರ್​ಗಳಲ್ಲಿ ಜಾಹೀರಾತಿನಲ್ಲಿದ್ದ ಫೋಟೋಗಳನ್ನು ಡಿಲೀಟ್ ಮಾಡಲಾಗಿದೆ.

ಇದನ್ನೂ ಓದಿ: ಯೋಗಿ ಆದಿತ್ಯನಾಥ್​​ ವಿರುದ್ಧ ಮಾತನಾಡಿದ್ದ ಮಾಜಿ ರಾಜ್ಯಪಾಲ ಅಜೀಜ್​ ಖುರೇಷಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಮಾಜಿ ಪೊಲೀಸ್ ಅಧಿಕಾರಿ ಅಮಿತಾಭ್ ಠಾಕೂರ್ ಸ್ಪರ್ಧೆ ಸಾಧ್ಯತೆ

(Kolkata Flyover In Uttar Pradesh CM Yogi Adityanath Development Advertisement TMC Criticize)

ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು