AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸ್ಸಾಂ 2 ಬೋಟ್​​ಗಳ ಡಿಕ್ಕಿ: 6 ಜನರನ್ನು ಬಂಧಿಸಿದ ಪೊಲೀಸರು, ಹಲವರ ವಿಚಾರಣೆ

ಎರಡೂ ಬೋಟ್​ಗಳ ಮಾಲೀಕರಿಗೂ ಸಮನ್ಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗಬೇಕಾಗುತ್ತದೆ. ನಾವು ಕ್ರಿಮಿನಲ್ ಕೇಸ್​​ ದಾಖಲಿಸಿಯೇ ತನಿಖೆ ಶುರು ಮಾಡಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಸ್ಸಾಂ 2 ಬೋಟ್​​ಗಳ ಡಿಕ್ಕಿ: 6 ಜನರನ್ನು ಬಂಧಿಸಿದ ಪೊಲೀಸರು, ಹಲವರ ವಿಚಾರಣೆ
ಅಸ್ಸಾಂ ಬೋಟ್​ ದುರಂತ
TV9 Web
| Edited By: |

Updated on: Sep 12, 2021 | 4:13 PM

Share

ಅಸ್ಸಾಂನ ಬ್ರಹ್ಮಪುತ್ರಾ ನದಿಯಲ್ಲಿ((Brahmaputra River) ಸೆಪ್ಟೆಂಬರ್​ 8ರಂದು ನಡೆದ ಎರಡು ಬೋಟ್​​ಗಳ ಡಿಕ್ಕಿಗೆ ಸಂಬಂಧಪಟ್ಟಂತೆ ಪೊಲೀಸರು ಇದೀಗ 6 ಮಂದಿಯನ್ನು ಬಂಧಿಸಿದ್ದಾರೆ. ಹಾಗೇ, ವಿಚಾರಣೆಗಾಗಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಅಸ್ಸಾಂನ ಜೋರ್ಹತ್​ ಜಿಲ್ಲೆಯ ನೇಮತಿಘಾಟ್​ ಎಂಬಲ್ಲಿ ಎರಡು ಬೋಟ್​ಗಳು ಡಿಕ್ಕಿಯಾಗಿದ್ದವು. ಎರಡೂ ಬೋಟ್​​ಗಳಿಂದ ಸುಮಾರು 90 ಮಂದಿ ಪ್ರಯಾಣಿಕರಿದ್ದರು. ಅದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದರು.  ಹಾಗೇ, ಘಟನೆ ಸಂಬಂಧ ಕ್ರಿಮಿನಲ್​ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು. 

ಇದೀಗ  ತನಿಖೆಯ ಬೆಳವಣಿಗೆಗಳ ಬಗ್ಗೆ ಇಂಡಿಯಾ ಟುಡೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಜೋರ್ಹತ್​​ ಜಿಲ್ಲಾ ಎಸ್​ಪಿ ಅಂಕುರ್​ ಜೈನ್​, ಜೋರ್ಹತ್​ ಪೊಲೀಸರು ಈಗಾಗಲೇ ಆರು ಮಂದಿಯನ್ನು ಬಂಧಿಸಿದ್ದಾರೆ. ಮಜುಲಿ ಜಿಲ್ಲೆ ಪೊಲೀಸರು ಮೂವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.  ಹಾಗೇ, ತಾವು ಕ್ರಿಮಿನಲ್​ ಕೇಸ್​ ದಾಖಲಿಸಿಕೊಂಡೇ ತನಿಖೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಇನ್ನು ಬಂಧಿತ ಆರೂ ಮಂದಿ ಒಳನಾಡು ಜಲಸಾರಿಗೆ ವಿಭಾಗದ ಸಿಬ್ಬಂದಿಯೇ ಆಗಿದ್ದಾರೆ. ಅಂದು ನಡೆದ ಬೋಟ್​ ಆ್ಯಕ್ಸಿಡೆಂಟ್​​ನಲ್ಲಿ ಮೃತಪಟ್ಟವರ ಸಂಖ್ಯೆ ಕಡಿಮೆಯಾದರೂ ಇದು ದೊಡ್ಡ ದುರಂತವೇ ಹೌದು ಎಂದು ಅಂಕುರ್ ಜೈನ್​ ಹೇಳಿದ್ದಾರೆ.

ಇನ್ನು ಘಟನೆ ಸಂಬಂಧ ಹಲವರ ಹೇಳಿಕೆಗಳು ನಮಗೆ ಅಗತ್ಯವಿದೆ. ಎರಡೂ ಬೋಟ್​ಗಳ ಮಾಲೀಕರಿಗೂ ಸಮನ್ಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗಬೇಕಾಗುತ್ತದೆ.  ಜೋಗನ್ ದಾಸ್, ಧನ್​ಬರ್​ ದಾಸ್, ಬಿಜು ಕುಮಾರ್ ದಾಸ್, ಜಯಂತ ದತ್ತ, ಬಿನೋದ್ ಬರುವಾ ಮತ್ತು ಬಾಬುಲ್ ನಿಯೋಗ್ ಬಂಧಿತರು ಎಂದು ಅಂಕುರ್ ಜೈನ್ ಮಾಹಿತಿ ನೀಡಿದ್ದಾರೆ.

ಅಂದು ಜೋರ್ಹತ್​ನ ನೇಮತಿ ಘಾಟ್​ನಲ್ಲಿ ಸಂಜೆ 4.30ರ ವೇಳೆಗೆ ಈ ದುರಂತ ಸಂಭವಿಸಿತ್ತು. ಎದುರು ಬದುರಾಗಿ ಚಲಿಸುತ್ತಿದ್ದ ಎರಡು ಬೋಟ್​ಗಳು ಡಿಕ್ಕಿ ಹೊಡೆದಿದ್ದವು.  ಗುವಾಹಟಿಯಿಂದ 350 ಕಿ.ಮೀ. ದೂರದಲ್ಲಿ ಈ ಘಟನೆ ನಡೆದಿದೆ. ಒಂದು ಬೋಟ್ ಬ್ರಹ್ಮಪುತ್ರನದಿಯ ದ್ವೀಪವಾದ ಮಜುಲಿ ಕಡೆಯಿಂದ ನೇಮತಿ ಘಾಟ್​ಗೆ ಬರುತ್ತಿತ್ತು. ಇನ್ನೊಂದು ಬೋಟ್ ನೇಮತಿ ಘಾಟ್​ನಿಂದ ವಾಪಾಸ್ ತೆರಳುತ್ತಿತ್ತು. ಹೀಗಾಗಿ ಘಟನೆ ಬಗ್ಗೆ ಜೋರ್ಹತ್ ಮತ್ತು ಮಜುಲಿ ಎರಡೂ ಜಿಲ್ಲೆಗಳ ಪೊಲೀಸರೂ ತನಿಖೆ ಶುರು ಮಾಡಿದ್ದಾರೆ.

ಇದನ್ನೂ ಓದಿ: ಅಸ್ಸಾಂ ಬೋಟ್​​ಗಳ ಡಿಕ್ಕಿ; ಕ್ರಿಮಿನಲ್​ ಕೇಸ್​ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದ ಸಿಎಂ ಹಿಮಂತ ಬಿಸ್ವಾ ಶರ್ಮಾ

ಚಿಕ್ಕಬಳ್ಳಾಪುರ: ಬೀದಿ ನಾಯಿಗೆ ಅದ್ದೂರಿ ಹುಟ್ಟುಹಬ್ಬ ಆಚರಣೆ; ಕೇಕ್ ಕತ್ತರಿಸಿ ಸನ್ಮಾನ ಮಾಡಿದ ಸ್ಥಳೀಯರು

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!