ಜಮ್ಮು-ಕಾಶ್ಮೀರದ (Jammu-Kashmir) ಬಾರಾಮುಲ್ಲಾ ಜಿಲ್ಲೆಯ ಹುಲ್ಲುಗಾವಲಿನಲ್ಲಿ ಭಾರಿ ಪ್ರಮಾಣದಲ್ಲಿ ಮೇಘಸ್ಫೋಟ (Cloudburst)ವಾದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಬಾರಾಮುಲ್ಲಾ ಜಿಲ್ಲೆಯ ರಫಿಯಾಬಾದ್ ಏರಿಯಾದ ಕಫರ್ನರ್ ಹುಲ್ಲುಗಾವಲಿನಲ್ಲಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಟುಂಬದಲ್ಲಿ ಒಟ್ಟು ಆರು ಮಂದಿ ಇದ್ದರು. ಅದರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇನ್ನೊಬ್ಬರು ಜೀವಂತವಾಗಿಯೇ ಸಿಕ್ಕಿದ್ದಾರೆ. ಹಾಗೇ ಮತ್ತೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಮೃತರಲ್ಲಿ ಮೂವರು ಮಕ್ಕಳಿದ್ದಾರೆ. ಭಯಂಕರ ಮೇಘಸ್ಫೋಟದಿಂದ ಇವರು ನೀರಿನಲ್ಲಿ ತೊಳೆದುಕೊಂಡು ಹೋಗಿದ್ದರು ಎನ್ನಲಾಗಿದೆ.
ಮೊಹಮ್ಮದ್ ತಾರಿಕ್ ಖರಿ (8), ಶಹನಾಜ್ ಬೇಗಮ್ (30) ನಾಝಿಯಾ ಅಕ್ತರ್ (14), ಆರಿಫ್ ಹುಸ್ಸೇನ್ ಖರಿ (5)ಮೃತರು. ಇವರೆಲ್ಲ ಕಲ್ಸಿಯಾನ್ ನೌಶೇರಾ ರಾಜೌರಿಯ ನಿವಾಸಿಗಳು ಎಂದು ಗುರುತಿಸಲಾಗಿದೆ. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ನಾಲ್ಕು ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ. ಇನ್ನೊಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ. ಮೇಘಸ್ಫೋಟ ಅದೆಷ್ಟು ಭೀಕರವಾಗಿತ್ತು ಎಂದರೆ, ಪ್ರವಾಹದ ನೀರು ಭತ್ತದ ಗದ್ದೆಗಳನ್ನೆಲ್ಲ ನಾಶ ಮಾಡಿದೆ. ಸ್ಥಳೀಯ ಸರ್ಕಾರಿ ಕಚೇರಿಯೊಳಗೂ ನುಗ್ಗಿದೆ.
ಇದನ್ನೂ ಓದಿ: Viral Video: ಕಾಳಿಂಗ ಸರ್ಪ ಉಸಿರಾಡುವ ಸದ್ದನ್ನು ಎಂದಾದರೂ ಕೇಳಿದ್ದೀರಾ? ಎಂತಹ ಗಟ್ಟಿಗರನ್ನೂ ಅಲುಗಾಡಿಸುತ್ತದೆ ಈ ವಿಡಿಯೋ
Delhi Rain: ದೆಹಲಿಯಲ್ಲಿ ವಿಪರೀತ ಮಳೆಗೆ ಜನ ತತ್ತರ; ಚರಂಡಿಯಲ್ಲಿ ಕೊಚ್ಚಿ ಹೋಗಿ ವ್ಯಕ್ತಿ ಸಾವು