UP Assembly Election 2022: ಉತ್ತರ ಪ್ರದೇಶ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಇಲ್ಲ: ಬಿಎಸ್​​ಪಿ

BSP: ಮುಂಬರುವ ಚುನಾವಣೆಯಲ್ಲಿ ಬಿಎಸ್‌ಪಿಯ ಹೋರಾಟ ನರೇಂದ್ರ ಮೋದಿ ಅಥವಾ ಯೋಗಿ ಆದಿತ್ಯನಾಥ ವಿರುದ್ಧವೇ ಎಂದು ಕೇಳಿದಾಗ, ಮಿಶ್ರಾ ನೇರವಾಗಿ ಉತ್ತರಿಸಲಿಲ್ಲ, ಬದಲಿಗೆ ಮುಂಬರುವ ಚುನಾವಣೆ ಉತ್ತರ ಪ್ರದೇಶಕ್ಕಾಗಿರುವುದು ಮತ್ತು ದೇಶಕ್ಕಾಗಿ ಅಲ್ಲ ಎಂದು ಹೇಳಿದರು.

UP Assembly Election 2022: ಉತ್ತರ ಪ್ರದೇಶ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಇಲ್ಲ: ಬಿಎಸ್​​ಪಿ
ಬಿಎಸ್​​ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 12, 2021 | 1:36 PM

ಲಕ್ನೋ: ಸಮಾಜವಾದಿ ಪಕ್ಷದೊಂದಿಗೆ (Samajwadi Party) 2019 ರ ಮೈತ್ರಿಯ “ಕಹಿ ಅನುಭವ” ವನ್ನು ಉಲ್ಲೇಖಿಸಿ 2022 ರ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಡುವ ತನ್ನ ನಿರ್ಧಾರವನ್ನು ಪಕ್ಷ ತೆಗೆದುಕೊಂಡಿದೆ ಎಂದು ಬಿಎಸ್​​ಪಿ (BSP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ (Satish Chandra Mishra)  ಶನಿವಾರ ಹೇಳಿದ್ದಾರೆ. ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ಐಡಿಯಾ ಎಕ್ಸ್‌ಚೇಂಜ್ ಸೆಶನ್‌ನಲ್ಲಿ ಮಾತನಾಡಿದ ಮಿಶ್ರಾ ಬಿಎಸ್‌ಪಿ ಯಾವಾಗಲೂ ಪ್ರತಿಪಕ್ಷಗಳ ಪರವಾಗಿದ್ದರೂ, ಅದು ತನ್ನದೇ ಆದ ನಿಯಮಗಳನ್ನು ಅನುಸರಿಸುತ್ತದೆ. ನಿರ್ಣಾಯಕ ಮಸೂದೆಗಳಲ್ಲಿ ಸರ್ಕಾರದೊಂದಿಗೆ ಆಗಾಗ್ಗೆ ಮತ ಚಲಾಯಿಸುವ ಬಗ್ಗೆ ಕೇಳಿದಾಗ, ರಾಷ್ಟ್ರೀಯ ಮತ್ತು ಸಾರ್ವಜನಿಕ ಹಿತಾಸಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಚರ್ಚಿಸಿದ ನಂತರ ಇದನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಆರ್ಟಿಕಲ್ 370 ರದ್ದತಿಯ ಬಗ್ಗೆ ನಿರ್ದಿಷ್ಟವಾಗಿ ಮಾತನಾಡಿದ, ಬಿಎಸ್​​ಪಿ ನಾಯಕ, “ಇದು ಡಾ ಅಂಬೇಡ್ಕರ್ ಅವರ ಚಿಂತನೆಗೆ ಅನುಗುಣವಾಗಿದೆ. ಬಿಜೆಪಿಯವರಿಗೂ ಆಶ್ಚರ್ಯವಾಯಿತು, ನಾವು ಈ ಕ್ರಮವನ್ನು ಬೆಂಬಲಿಸುತ್ತೇವೆ ಎಂದು ತಿಳಿದಿರಲಿಲ್ಲ. ಚಿಂತನೆಯು ಬಹಳ ಸಮಂಜಸವಾಗಿತ್ತು – ದೇಶದ ಉಳಿದ ಭಾಗಗಳಿಗೆ ಹೋಲಿಸಿದರೆ ಜಮ್ಮು ಮತ್ತು ಕಾಶ್ಮೀರ ಕಡಿಮೆ ಸಂಖ್ಯೆಯ ಮುಸ್ಲಿಮರನ್ನು ಹೊಂದಿದ್ದರೂ, ಹೊರಗಿನ ಜನರನ್ನು ಮದುವೆಯಾಗುವುದು, ಅಲ್ಲಿ ಆಸ್ತಿಯನ್ನು ಹೊಂದಿರುವುದು, ಅಲ್ಲಿ ಖಾಯಂ ಪ್ರಜೆಗಳಾಗುವುದರಲ್ಲಿ ನಿರ್ಬಂಧಗಳಿವೆ.

ಮುಂಬರುವ ಚುನಾವಣೆಯಲ್ಲಿ ಬಿಎಸ್‌ಪಿಯ ಹೋರಾಟ ನರೇಂದ್ರ ಮೋದಿ ಅಥವಾ ಯೋಗಿ ಆದಿತ್ಯನಾಥ ವಿರುದ್ಧವೇ ಎಂದು ಕೇಳಿದಾಗ, ಮಿಶ್ರಾ ನೇರವಾಗಿ ಉತ್ತರಿಸಲಿಲ್ಲ, ಬದಲಿಗೆ ಮುಂಬರುವ ಚುನಾವಣೆ ಉತ್ತರ ಪ್ರದೇಶಕ್ಕಾಗಿರುವುದು ಮತ್ತು ದೇಶಕ್ಕಾಗಿ ಅಲ್ಲ ಎಂದು ಹೇಳಿದರು. “ಯುಪಿ ಚುನಾವಣೆಯಲ್ಲಿ ಏಕ್ ತರಫ್ ಯೋಗಿಜಿ ಹೈ, ಏಕ್ ತಾರಾಫ್  ಬೆೆಹನ್  ಜೀ ಹೇ (ಯುಪಿ ಚುನಾವಣೆಯಲ್ಲಿ ಯೋಗಿಜಿ ಒಂದು ಕಡೆ ಮತ್ತೊಂದು ಕಡೆ ಬೆಹನ್ ಜೀ (ಮಾಯಾವತಿ) ಇದ್ದಾರೆ)” ಎಂದು ಅವರು ಹೇಳಿದರು. ಬಿಎಸ್‌ಪಿ ಆದಿತ್ಯನಾಥ ಸರ್ಕಾರವನ್ನು ಕಿತ್ತುಹಾಕುತ್ತದೆ, ಅದು ಎಲ್ಲಾ ವಿಷಯಗಳಲ್ಲಿ ವಿಫಲವಾಗಿದೆ ಎಂದಿದ್ದಾರೆ ಮಿಶ್ರಾ.

ಪ್ರತಿಪಕ್ಷದ ಒಗ್ಗಟ್ಟಿನ ಬಗ್ಗೆ ಬಿಎಸ್​​ಪಿ ನಿಲುವು ಏಕೆ ಸ್ಪಷ್ಟವಾಗಿಲ್ಲ ಎಂದು ಕೇಳಿದಾಗ ಮಿಶ್ರಾ ಅವರು ಕಾಂಗ್ರೆಸ್ ವಿಧಾನದ ಬಗ್ಗೆ ಮಾತನಾಡಿದರು. “ನಾವು 40-41 ಸಂಸದರನ್ನು ಹೊಂದಿದ್ದಾಗ ನಾವು ಅವರನ್ನು (ಕಾಂಗ್ರೆಸ್) ಬೆಂಬಲಿಸಿದ್ದೆವು, ಆದರೆ ಅವರು ಏನು ಮಾಡಿದರು? ಅವರು ರಾಜಸ್ಥಾನ, ಹಿಮಾಚಲ, ಇತರ ಕೆಲವು ಸ್ಥಳಗಳಲ್ಲಿ ನಮ್ಮ ಶಾಸಕರನ್ನು ಕರೆದುಕೊಂಡು ಹೋದರು. ಒಂದೆಡೆ, ನೀವು ಬಿಎಸ್​​ಪಿಯನ್ನು ಮುರಿಯಲು ಈ ಎಲ್ಲ ಕೆಲಸಗಳನ್ನು ಮಾಡುತ್ತೀರಿ. ಮತ್ತೊಂದೆಡೆ ಬಿಎಸ್​​ಪಿ ನಿಮ್ಮೊಂದಿಗೆ ಯಾವಾಗಲೂ ನಿಲ್ಲಬೇಕು ಎಂದು ನೀವು ಹೇಳುತ್ತೀರಿ.

ತ್ರಿಕೋನ ಸ್ಪರ್ಧೆಯಿಂದ (ಎಸ್‌ಪಿ ಮತ್ತು ಬಿಎಸ್‌ಪಿ ಪ್ರತ್ಯೇಕವಾಗಿ ಹೋರಾಡುವುದರಿಂದ) ಬಿಜೆಪಿ ಲಾಭ ಪಡೆಯುತ್ತದೆಯೇ ಎಂದು ಕೇಳಿದಾಗ “ಅವರು ಯಾವುದೇ ಲಾಭ ಪಡೆಯುವುದಿಲ್ಲ. ಈ ಬಾರಿ ಯಾವುದೇ ಮತದಾರ ಅಥವಾ ಜನರು ಅವರೊಂದಿಗೆ ಇಲ್ಲ ಎಂದು ಮಿಶ್ರಾ ಹೇಳಿದ್ದಾರೆ.

2007 ರಂತೆ ಬಿಎಸ್‌ಪಿ ಮತ್ತೆ ಅಧಿಕಾರಕ್ಕೆ ಮರಳುವ ಬಗ್ಗೆ ಮಿಶ್ರಾ ವಿಶ್ವಾಸ ವ್ಯಕ್ತಪಡಿಸಿದರು. “ಆಗ ನಮಗೆ ಯಾವುದೇ ಮೈತ್ರಿ ಇರಲಿಲ್ಲ. ಆ ಸಮಯದಲ್ಲಿ, ಜನರು ನಮ್ಮ ಸ್ಥಾನವನ್ನು ದುರ್ಬಲವೆಂದು ಪರಿಗಣಿಸಿದ್ದರು. ಪಕ್ಷ ಮುಗಿದಿದೆ ಎಂದು ಅವರು ಭಾವಿಸಿದರು. ಆದರೆ, ಫಲಿತಾಂಶಗಳನ್ನು ಘೋಷಿಸಲಾಯಿತು, ನಾವು ಸರ್ಕಾರವನ್ನು ರಚಿಸಿದೆವು.

ಆದಿತ್ಯನಾಥರ ಆಳ್ವಿಕೆಯನ್ನು “ಅಘೋಷಿತ ತುರ್ತುಸ್ಥಿತಿ” ಎಂದು ವಿವರಿಸಿದ ಮಿಶ್ರಾ. “ಇಸ್ ಎಮರ್ಜೆನ್ಸಿ ಸೆ ಬಾಹರ್ ಆನೇ ಕೆ ಲಿಯೆ ಲೋಗ್ ತೈಯಾರ್ ಬೈಟೇ ಹೈ (ಜನರು ಈ ತುರ್ತು ಪರಿಸ್ಥಿತಿಯಿಂದ ಹೊರಬರಲು ಸಿದ್ಧರಾಗಿದ್ದಾರೆ)” ಎಂದು ಅವರು ಹೇಳಿದರು.

2007 ರ ವಿಧಾನಸಭಾ ಚುನಾವಣೆಯಲ್ಲಿ 403 ಸದಸ್ಯರ ಸದನದಲ್ಲಿ 206 ಸ್ಥಾನಗಳನ್ನು ಮತ್ತು ಶೇ 30 ಮತಗಳ ಹಂಚಿಕೆಯೊಂದಿಗೆ ಬಿಎಸ್​​ಪಿ ಗೆಲುವು ಸಾಧಿಸಿದರೂ, ಪಕ್ಷದ ಸಾಧನೆ ಇಳಿಮುಖವಾಗಿದೆ. 2012 ರ ರಾಜ್ಯ ಚುನಾವಣೆಯಲ್ಲಿ, ಇದು ಕೇವಲ 80 ಸ್ಥಾನಗಳನ್ನು ಪಡೆಯಿತು, ಆದರೂ ಅದರ ಮತಗಳ ಪ್ರಮಾಣವು ಶೇ 26%ಕ್ಕಿಂತ ಕಡಿಮೆಯಾಗಿದೆ. 2017 ರಲ್ಲಿ ಅದು ಕನಿಷ್ಠ 19 ಸ್ಥಾನ ಮತ್ತು ಶೇ 22.23 ಮತಗಳಿಗೆ ಕುಸಿಯಿತು. ಲೋಕಸಭಾ ಚುನಾವಣೆಯಲ್ಲಿ, ಬಿಎಸ್ ಪಿಯ ಕುಸಿತವು ತೀವ್ರವಾಗಿದೆ – 2014 ರಲ್ಲಿ, ಇದು 0 ಸ್ಥಾನಗಳನ್ನು ಮತ್ತು ಶೇ 19.77 ಮತಗಳನ್ನು ಪಡೆಯಿತು. 2019 ರಲ್ಲಿ ಎಸ್‌ಪಿಯೊಂದಿಗಿನ ಮೈತ್ರಿ ಮಾಡಿಕೊಂಡಾಗ 10 ಸ್ಥಾನಗಳನ್ನು ಪಡೆದಿದ್ದು ಶೇ 19.42 ಮತಗಳನ್ನು ಪಡೆದಿತ್ತು.

ಇದನ್ನೂ ಓದಿ: UP Assembly Election 2022 ಮಾಫಿಯಾ ವ್ಯಕ್ತಿಗೆ ಟಿಕೆಟ್ ಇಲ್ಲ; ಮುಖ್ತಾರ್ ಅನ್ಸಾರಿಗೆ ಟಿಕೆಟ್ ನಿರಾಕರಿಸಿದ ಬಿಎಸ್​​ಪಿ

(UP polls BSP would stick by its decision to fight the 2022 Assembly elections alone)

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್