UP Assembly Election 2022 ಮಾಫಿಯಾ ವ್ಯಕ್ತಿಗೆ ಟಿಕೆಟ್ ಇಲ್ಲ; ಮುಖ್ತಾರ್ ಅನ್ಸಾರಿಗೆ ಟಿಕೆಟ್ ನಿರಾಕರಿಸಿದ ಬಿಎಸ್​​ಪಿ

Mukhtar Ansari: ಮುಂಬರುವ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಮಾಫಿಯಾ ಅಥವಾ ಪ್ರಬಲ ವ್ಯಕ್ತಿಗೆ ಪಕ್ಷದ ಟಿಕೆಟ್ ನೀಡದಂತೆ ಬಿಎಸ್​​ಪಿ​​  ಪ್ರಯತ್ನಿಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಖ್ತಾರ್ ಅನ್ಸಾರಿ ಬದಲು ಭೀಮ್ ರಾಜಭರ್ ಅವರನ್ನು ಮೌ ಕ್ಷೇತ್ರದ ಅಭ್ಯರ್ಥಿಯನ್ನಾಗಿ ನಿರ್ಧರಿಸಲಾಗಿದೆ

UP Assembly Election 2022 ಮಾಫಿಯಾ ವ್ಯಕ್ತಿಗೆ ಟಿಕೆಟ್ ಇಲ್ಲ; ಮುಖ್ತಾರ್ ಅನ್ಸಾರಿಗೆ ಟಿಕೆಟ್ ನಿರಾಕರಿಸಿದ ಬಿಎಸ್​​ಪಿ
ಮಾಯಾವತಿ- ಮುಖ್ತಾರ್ ಅನ್ಸಾರಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 10, 2021 | 12:42 PM

ಲಕ್ನೊ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಜೈಲಿನಲ್ಲಿರುವ ಪಕ್ಷದ ಶಾಸಕ ಮುಖ್ತಾರ್  ಅನ್ಸಾರಿಗೆ ಮುಂದಿನ ವರ್ಷದ ರಾಜ್ಯ ಚುನಾವಣೆಗೆ ಟಿಕೆಟ್ ನಿರಾಕರಿಸಿದ್ದಾರೆ. ಗ್ಯಾಂಗ್ ಸ್ಟರ್ ಆಗಿದ್ದ ಅನ್ಸಾರಿ ಆಮೇಲೆ ರಾಜಕಾರಣಿಯಾಗಿದ್ದರು. ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಉತ್ತರ ಪ್ರದೇಶದ ಮುಖ್ಯಸ್ಥ ಭೀಮ್ ರಾಜಭರ್ ಅವರು ಮುಖ್ತಾರ್  ಅನ್ಸಾರಿ ಬದಲಿಗೆ ಮೌದಿಂದ ಅಭ್ಯರ್ಥಿಯಾಗಲಿದ್ದಾರೆ ಎಂದು ಮಾಯಾವತಿ ಹೇಳಿದ್ದಾರೆ.

“ಮುಂಬರುವ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಮಾಫಿಯಾ ಅಥವಾ ಪ್ರಬಲ ವ್ಯಕ್ತಿಗೆ ಪಕ್ಷದ ಟಿಕೆಟ್ ನೀಡದಂತೆ ಬಿಎಸ್​​ಪಿ​​  ಪ್ರಯತ್ನಿಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಖ್ತಾರ್ ಅನ್ಸಾರಿ ಬದಲು ಭೀಮ್ ರಾಜಭರ್ ಅವರನ್ನು ಮೌ ಕ್ಷೇತ್ರದ ಅಭ್ಯರ್ಥಿಯನ್ನಾಗಿ ನಿರ್ಧರಿಸಲಾಗಿದೆ ” ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.

ಆಡಳಿತಾರೂಢ ಬಿಜೆಪಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬಿಎಸ್‌ಪಿಯನ್ನು ಕ್ರಿಮಿನಲ್‌ಗಳು ಮತ್ತು ಬಲಿಷ್ಠರ ಪಕ್ಷ ಎಂದು ಬಿಂಬಿಸಿ ದಾಳಿ ನಡೆಸಬಹುದು ಎಂಬ ಮುಂದಾಲೋಚನೆಯಿಂದ ಬಿಎಸ್​​ಪಿ ಮುಖ್ತಾರ್ ಅನ್ಸಾರಿ ಅವರನ್ನು ಪಕ್ಷದಿಂದ ಹೊರಹಾಕಬಹುದು ಎಂದು ವರದಿಗಳು ಸೂಚಿಸುತ್ತವೆ. 58 ವರ್ಷದ ಅನ್ಸಾರಿ ಅವರು ಸಮಾಜವಾದಿ ಪಕ್ಷದೊಂದಿಗಿನ ಮಾತುಕತೆ ವಿಫಲವಾದ ನಂತರ ಉತ್ತರ ಪ್ರದೇಶದ ಚುನಾವಣೆಗೆ ಮುನ್ನ 2017 ರಲ್ಲಿ ಬಿಎಸ್​​ಪಿಗೆ ಸೇರಿದ್ದರು.

ಆ ಸಮಯದಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ ಸರ್ಕಾರ ಅನ್ಸಾರಿ ವಿರುದ್ಧ ಸುಳ್ಳು ಆರೋಪ ಹೊರಿಸಿತ್ತು ಎಂದು ಮಾಯಾವತಿ ಹೇಳಿದ್ದರು.

“ನನ್ನ ಸರ್ಕಾರ ಯಾವಾಗಲೂ ಅಪರಾಧಿಗಳ ಮೇಲೆ ಕಠಿಣವಾಗಿದೆ. ಆದರೆ ಸುಳ್ಳು ಪ್ರಕರಣಗಳಲ್ಲಿ ಯಾರನ್ನೂ ಸಿಲುಕಿಸದಂತೆ ನಾನು ಖಾತ್ರಿಪಡಿಸುತ್ತೇನೆ. ಮುಖ್ತಾರ್ ಅನ್ಸಾರಿ ಅವರ ಕುಟುಂಬವು ಅಂತಹ ಒಂದು ಉದಾಹರಣೆಯಾಗಿದೆ. ಅವರ ಕುಟುಂಬವನ್ನು ಸುಳ್ಳು ಪ್ರಕರಣಗಳಲ್ಲಿ ಬಂಧಿಸಲಾಗಿದೆ” ಎಂದು ಮಾಯಾವತಿ ಹೇಳಿದ್ದರು.

ಮೌ ಕ್ಷೇತ್ರದಲ್ಲಿ ನಲ್ಲಿ ಮುಖ್ತಾರ್ ಅನ್ಸಾರಿ ಪರ ಪ್ರಚಾರ ಕೂಡ ಮಾಡಿದ್ದರು ಮಾಯಾವತಿ . ಅವರ ವಿಜಯವು ಅವರ “ಬಾಹುಬಲಿ (ಬಲಶಾಲಿ)” ಇಮೇಜ್​​ನ್ನು ಅಳಿಸಿಹಾಕುತ್ತದೆ ಎಂದು ಬಿಎಸ್​​ಪಿ ಮುಖ್ಯಸ್ಥರು ಆಗ ಹೇಳಿದ್ದರು.

ಮುಖ್ತಾರ್ ಅನ್ಸಾರಿ ಕೊಲೆ ಮತ್ತು ಅಪಹರಣ ಸೇರಿದಂತೆ 50 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಹದಿನೈದು ಪ್ರಕರಣಗಳ ವಿಚಾರಣೆ ನಡೆದಿದೆ. ಅವರು 2005 ರಿಂದ ವಿವಿಧ ಆರೋಪಗಳ ಮೇಲೆ ಉತ್ತರ ಪ್ರದೇಶದಾದ್ಯಂತ ಜೈಲುಗಳಲ್ಲಿದ್ದಾರೆ.

ಸುಲಿಗೆ ಪ್ರಕರಣದಲ್ಲಿ ಪಂಜಾಬ್ ಜೈಲಿನಲ್ಲಿದ್ದ ಅವರನ್ನು ಈ ವರ್ಷದ ಆರಂಭದಲ್ಲಿ ಮತ್ತೆ ಉತ್ತರ ಪ್ರದೇಶದ ಜೈಲಿಗೆ ಕಳುಹಿಸಲಾಯಿತು.

1996 ರ ಚುನಾವಣೆಯಲ್ಲಿ ಮೌವಿನಿಂದ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅವರು ಮೊದಲ ಚುನಾವಣೆ ಗೆದ್ದಿದ್ದರು. ಅಂದಿನಿಂದ, ಅವರು ಜೈಲಿನಿಂದಲೂ ಹಲವಾರು ಚುನಾವಣೆಗಳಲ್ಲಿ ಜಯಗಳಿಸಿದ್ದಾರೆ. 2017 ರಲ್ಲಿ ಯೋಗಿ ಆದಿತ್ಯನಾಥ ಅಧಿಕಾರಕ್ಕೆ ಬಂದಾಗ, ಅನ್ಸಾರಿ ಮತ್ತು ಅವರ ಜಾಲದ ಮೇಲೆ ಗಮನ ಕೇಂದ್ರೀಕರಿಸಿತು. ಅವನ 100 ಸಹವರ್ತಿಗಳನ್ನು ಬಂಧಿಸಿ ಜೈಲಿಗೆ ಹಾಕಲಾಯಿತು. ಕೆಲವರು ಪೊಲೀಸರೊಂದಿಗೆ ನಡೆದ ಎನ್​​ಕೌಂಟರ್​​ನಲ್ಲಿ ಕೊಲ್ಲಲ್ಪಟ್ಟರು.

2019 ರಲ್ಲಿ ಅನ್ಸಾರಿ ಮೇಲಿರುವ ಪ್ರಕರಣಗಳ ಬಾಕಿ ಇರುವ ವಿಚಾರಣೆಯ ಕಾರಣ ಪಂಜಾಬ್ ಜೈಲಿಗೆ ಸ್ಥಳಾಂತರಿಸಲಾಯಿತು. ಇದು ಉತ್ತರ ಪ್ರದೇಶ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದ್ದು ಅಂತಿಮವಾಗಿ ಏಪ್ರಿಲ್‌ನಲ್ಲಿ ಮರಳಿ ಉತ್ತರ ಪ್ರದೇಶ ಜೈಲಿಗೆ ಕರೆತರಲಾಯಿತು.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಬಿಎಸ್​ಪಿಯನ್ನು ಅಧಿಕಾರಕ್ಕೆ ತರಲು ದಲಿತರು- ಬ್ರಾಹ್ಮಣರು ಒಗ್ಗಟ್ಟಾಗಿ; ಮಾಯಾವತಿ ಕರೆ

ಇದನ್ನೂ ಓದಿ:  ಚುನಾವಣೆಯಲ್ಲಿ ಗೆದ್ದರೆ ಪಾರ್ಕ್,ಸ್ಮಾರಕ ನಿರ್ಮಿಸುವುದಿಲ್ಲ: ಬಿಎಸ್​ಪಿ ನಾಯಕಿ ಮಾಯಾವತಿ

Uttara Pradesh Election BSP leader Mayawati drops jailed party MLA Mukhtar Ansari as candidate from Mau field Bhim Rajbhar)

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್