ಯೋಗಿ ಆದಿತ್ಯನಾಥ್ ವಿರುದ್ಧ ಮಾತನಾಡಿದ್ದ ಮಾಜಿ ರಾಜ್ಯಪಾಲ ಅಜೀಜ್ ಖುರೇಷಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು
Aziz Qureshi: ಅಜೀಜ್ ಖುರೇಷಿ ಮೂಲತಃ ಮಧ್ಯಪ್ರದೇಶದ ಭೋಪಾಲ್ನ ಹಿರಿಯ ಕಾಂಗ್ರೆಸ್ ನಾಯಕ. ಅವರಿಗೆ ಈಗ 81 ವರ್ಷ. ಉತ್ತರಾಖಂಡ, ಉತ್ತರಪ್ರದೇಶ ಮತ್ತು ಮಿಜೋರಾಂ ರಾಜ್ಯಗಳ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ.
ಬರೇಲಿ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Uttar Pradesh Chief Minister Yogi Adityanath) ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದ, ಮಾಜಿ ರಾಜ್ಯಪಾಲ ಅಜೀಜ್ ಖುರೇಷಿ (Aziz Quresh)ವಿರುದ್ಧ ಪೊಲೀಸರು ದೇಶದ್ರೋಹದ ಪ್ರಕರಣ (Sedition Case) ದಾಖಲಿಸಿದ್ದಾರೆ. ಸೆಪ್ಟೆಂಬರ್ 4ರಂದು ಅಜೀಜ್ ಖುರೇಷಿ, ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ, ಸದ್ಯ ಜೈಲಿನಲ್ಲಿರುವ ಅಜಂ ಖಾನ್ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಅಜಂ ಖಾನ್ ಪತ್ನಿ ತಂಜೀಮ್ ಫಾತ್ಮಾರ ಬಳಿ ಮಾತುಕತೆ ನಡೆಸಿದ್ದರು. ಅವರ ಮನೆಯಿಂದ ಹೊರಡುವಾಗ ಮಾಧ್ಯಮಗಳ ಜತೆ ಮಾತನಾಡಿದ್ದ ಅಜೀಜ್ ಖುರೇಷಿ, ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
‘ಅಜಂ ಖಾನ್ಗೆ ಇಲ್ಲಿನ ಸರ್ಕಾರ ಎಷ್ಟು ಹಿಂಸೆ ನೀಡುತ್ತಿದೆ ಎಂಬುದನ್ನು ವಿವರಿಸಬೇಕಾಗಿಲ್ಲ. ನಾನೀಗ ಇಲ್ಲಿಗೆ, ಫಾತ್ಮಾರಿಗೆ ಧೈರ್ಯ ತುಂಬಲು ಬಂದಿದ್ದೇನೆ. ನಾವು, ಜನರು ಆಕೆಯೊಂದಿಗೆ ಸದಾ ಇರುತ್ತೇವೆ. ಯೋಗಿ ಆದಿತ್ಯನಾಥ್ ಸರ್ಕಾರ ರಾಕ್ಷಸ ಸರ್ಕಾರ ಮತ್ತು ಜನರ ರಕ್ತ ಹೀರುವ ಪಿಶಾಚಿಗಳು ಎಂದು ವಾಗ್ದಾಳಿ ನಡೆಸಿದ್ದರು. ಅಷ್ಟೇ ಅಲ್ಲ, ಅಜೀಂ ಖಾನ್ ನಮ್ಮ ಮುಸ್ಲಿಂ ಸಮುದಾಯದ ಒಳಿತಿಗಾಗಿ ಕೆಲಸ ಮಾಡಿದ್ದರು. ಆದರೆ ಕೆಲವರಿಗೆ ನಮ್ಮ ಸಮುದಾಯ ಶಿಕ್ಷಣವಂತರಾಗುವುದು, ಅವರಿಗೆ ಒಳಿತಾಗುವುದು ಇಷ್ಟವಿಲ್ಲ’ ಎಂದು ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ಅಜೀಜ್ ಖುರೇಷಿಯವರ ಈ ಮಾತುಗಳ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕಾಶ್ ಸೆಕ್ಷೇನಾ, ರಾಂಪುರ ಜಿಲ್ಲೆಯ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಭಾನುವಾರ ರಾತ್ರಿ ದೂರು ದಾಖಲಿಸಿದ್ದರು. ಖುರೇಷಿಯವರ ಹೇಳಿಕೆ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ಚರ್ಚೆಯಾಗುತ್ತಿದೆ. ಅಷ್ಟೇ ಅಲ್ಲ ಎರಡು ಸಮುದಾಯಗಳ ನಡುವೆ ವಾದ-ವಾಗ್ವಾದ ನಡೆಯುತ್ತಿದೆ. ಇದು ಕೋಮು ಸಂಘರ್ಷಕ್ಕೆ ಕಾರಣವಾಗಬಹುದು ಎಂದೂ ಆಕಾಶ್ ಉಲ್ಲೇಖಿಸಿದ್ದರು. ಅದರ ಬೆನ್ನಲ್ಲೇ ಯುಪಿ ಪೊಲೀಸರು ಅಜೀಜ್ ಖುರೇಷಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ.
ಅಜೀಜ್ ಖುರೇಷಿ ಕಾಂಗ್ರೆಸ್ ನಾಯಕ ಅಜೀಜ್ ಖುರೇಷಿ ಮೂಲತಃ ಮಧ್ಯಪ್ರದೇಶದ ಭೋಪಾಲ್ನ ಹಿರಿಯ ಕಾಂಗ್ರೆಸ್ ನಾಯಕ. ಅವರಿಗೆ ಈಗ 81 ವರ್ಷ. ಉತ್ತರಾಖಂಡ, ಉತ್ತರಪ್ರದೇಶ ಮತ್ತು ಮಿಜೋರಾಂ ರಾಜ್ಯಗಳ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನು ಅಜೀಂ ಖಾನ್ ಮತ್ತು ಅವರ ಪುತ್ರ ಸದ್ಯ ಜೈಲಿನಲ್ಲಿದ್ದಾರೆ. ಫೋರ್ಜರಿ, ನಕಲಿ ಬರ್ತ್ ಸರ್ಟಿಫಿಕೇಟ್ ಸೇರಿ ಹಲವು ಪ್ರಕರಣಗಳಲ್ಲಿ ಅಜೀಂ ಖಾನ್, ಅವರ ಪತ್ನಿ ಮತ್ತು ಪುತ್ರ ಮೂವರೂ ಕಳೆದ ವರ್ಷ ಜೈಲು ಸೇರಿದ್ದರು. ಅದರಲ್ಲಿ ಪತ್ನಿ ಫಾತ್ಮಾಗೆ ಜಾಮೀನು ಸಿಕ್ಕಿದೆ.
ಇದನ್ನೂ ಓದಿ: ‘ನನ್ನ ಜೊತೆ ಮನೆಯಲ್ಲೇ ಇರು’ ಎಂದು ರಶ್ಮಿಕಾಗೆ ಒತ್ತಾಯ; ಹೀಗಾದರೆ ಕೆಲಸ ಮಾಡೋದು ಹೇಗೆ?
ಪಂಜಶಿರ್ ಹೋರಾಟ ಪಡೆಯ ವಕ್ತಾರ ಫಾಹಿಮ್ ದಷ್ಟಿ ಸಾವು; ಮೂವರು ಪ್ರಮುಖ ನಾಯಕರನ್ನು ಕೊಂದ ತಾಲಿಬಾನ್