AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರಗಾಲದಲ್ಲೂ ಬೀಜ ಬಿತ್ತುವ ಮನಸ್ಥಿತಿ ಇದ್ದಾಗ ನಿಜವಾದ ಬದಲಾವಣೆ ಸಾಧ್ಯ; ಡಾ. ಪ್ರೀತಿ ಅದಾನಿ ಸ್ಪೂರ್ತಿದಾಯಕ ಭಾಷಣ

ಹಾಂಗ್ ಕಾಂಗ್‌ನಲ್ಲಿ ನಡೆದ ಏಷ್ಯನ್ ವೆಂಚರ್ ಲೋಕೋಪಕಾರ ನೆಟ್‌ವರ್ಕ್ (AVPN) ಶೃಂಗಸಭೆಯಲ್ಲಿ, ಅದಾನಿ ಫೌಂಡೇಶನ್ ಅಧ್ಯಕ್ಷೆ ಡಾ. ಪ್ರೀತಿ ಅದಾನಿ ಅವರು ಲೋಕೋಪಕಾರವನ್ನು ಮೀರಿದ ಜವಾಬ್ದಾರಿಯನ್ನು ಆಧರಿಸಿದ ಸಹಯೋಗದ ಧ್ಯೇಯಕ್ಕೆ ಕರೆ ನೀಡಿದರು. ನಿಜವಾದ ಬದಲಾವಣೆಯು ಕೇವಲ ದಾನಿಗಳಾಗಿರದೆ ಸಹ-ಸೃಷ್ಟಿಕರ್ತರಾಗುವುದರಲ್ಲಿದೆ ಎಂದು ಅವರು ಹೇಳಿದರು. ಬರಗಾಲದಲ್ಲೂ ನಂಬಿಕೆಯಿಂದ ಬೀಜಗಳನ್ನು ಬಿತ್ತುವವರಿಂದ ನಿಜವಾದ ಬದಲಾವಣೆ ಸಾಧ್ಯ ಎಂದು ಕಚ್‌ನ ಮಹಿಳೆಯ ಕಥೆಯ ಮೂಲಕ ಅವರು ವಿವರಿಸಿದರು.

ಬರಗಾಲದಲ್ಲೂ ಬೀಜ ಬಿತ್ತುವ ಮನಸ್ಥಿತಿ ಇದ್ದಾಗ ನಿಜವಾದ ಬದಲಾವಣೆ ಸಾಧ್ಯ; ಡಾ. ಪ್ರೀತಿ ಅದಾನಿ ಸ್ಪೂರ್ತಿದಾಯಕ ಭಾಷಣ
Priti Adani
ಸುಷ್ಮಾ ಚಕ್ರೆ
|

Updated on:Sep 09, 2025 | 10:10 PM

Share

ನವದೆಹಲಿ, ಸೆಪ್ಟೆಂಬರ್ 9: ಏಷ್ಯನ್ ವೆಂಚರ್ ಲೋಕೋಪಕಾರ ನೆಟ್​ವರ್ಕ್ (AVPN) ಶೃಂಗಸಭೆಯನ್ನು ಹಾಂಗ್ ಕಾಂಗ್‌ನಲ್ಲಿ ಆಯೋಜಿಸಲಾಗಿತ್ತು. ಅದಾನಿ ಫೌಂಡೇಶನ್ (Adani Foundation) ಅಧ್ಯಕ್ಷೆ ಡಾ. ಪ್ರೀತಿ ಅದಾನಿ ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ಅವರು ಲೋಕೋಪಕಾರದ ಸಾಂಪ್ರದಾಯಿಕ ವ್ಯಾಖ್ಯಾನವನ್ನು ಪ್ರಶ್ನಿಸಿದರು. ಹಾಗೇ, ಜವಾಬ್ದಾರಿ ಮತ್ತು ಪಾಲುದಾರಿಕೆ ದಾನಕ್ಕಿಂತ ಮುಖ್ಯ ಎಂದು ಅವರು ಹೇಳಿದರು. ಅವರ ಭಾಷಣವು ಹಾಜರಿದ್ದವರ ಹೃದಯಗಳನ್ನು ಗೆದ್ದಿತು. ಡಾ. ಪ್ರೀತಿ ಅದಾನಿ ತಮ್ಮ ಮುಖ್ಯ ಭಾಷಣದಲ್ಲಿ, ಸಾಮಾಜಿಕ ಅಭಿವೃದ್ಧಿಯ ಮುಂದಿನ ಹೆಜ್ಜೆ ಸಹಯೋಗದ ಮೇಲೆ ಮತ್ತು ಪ್ರತಿಯೊಂದು ಲೋಕೋಪಕಾರಿ ಸಂಸ್ಥೆ, NGO ಮತ್ತು ಪಾಲುದಾರರನ್ನು ಒಂದೇ ವೇದಿಕೆಗೆ ತರುವುದರ ಮೇಲೆ ಅವಲಂಬಿತವಾಗಿದೆ ಎಂದು ಅವರು ಒತ್ತಿ ಹೇಳಿದರು.

ಡಾ. ಪ್ರೀತಿ ಅದಾನಿ ಗುಜರಾತ್‌ನ ಕಚ್‌ನ ಕಥೆಯೊಂದಿಗೆ ತಮ್ಮ ಭಾಷಣವನ್ನು ಪ್ರಾರಂಭಿಸಿದರು. “ಮರುಭೂಮಿಯ ಬಂಜರು ಭೂಮಿಯಲ್ಲಿ ಒಬ್ಬ ಮಹಿಳೆ ಬೀಜಗಳನ್ನು ಬಿತ್ತುವುದನ್ನು ನಾನು ನೋಡಿದೆ. ಈ ಒಣ ಭೂಮಿಯಲ್ಲಿ ಅವಳು ಏಕೆ ಬೀಜಗಳನ್ನು ಬಿತ್ತುತ್ತಿದ್ದಾಳೆಂದು ನಾನು ಅವಳನ್ನು ಕೇಳಿದೆ. ಅದಕ್ಕೆ ಆ ಮಹಿಳೆ, ಒಂದು ದಿನ ಖಂಡಿತವಾಗಿಯೂ ಮಳೆ ಬರುತ್ತದೆ ಎಂದು ಉತ್ತರಿಸಿದಳು. ಭೂಮಿಯಲ್ಲಿ ಬೀಜವಿಲ್ಲದಿದ್ದರೆ ಮಳೆಯೂ ವ್ಯರ್ಥವಾಗುತ್ತದೆ. ಹೀಗಾಗಿ, ಬೀಜ ಬಿತ್ತುತ್ತಿದ್ದೇನೆ ಎಂದಳು” ಇಂತಹ ಚಿಂತನೆಯು ವಾಸ್ತವವಾಗಿ ಬದಲಾವಣೆಗೆ ಅಡಿಪಾಯವನ್ನು ಹಾಕುತ್ತದೆ ಎಂದು ಡಾ. ಪ್ರೀತಿ ಅದಾನಿ ಹೇಳಿದರು.

ಇದನ್ನೂ ಓದಿ: ಭೂತಾನ್‌ನಲ್ಲಿ ಅದಾನಿ ಪವರ್‌ನಿಂದ 570 ಮೆಗಾವ್ಯಾಟ್ ಜಲವಿದ್ಯುತ್‌ ಯೋಜನೆ: ಡ್ರಕ್‌ ಗ್ರೀನ್‌ ಜತೆ ಒಪ್ಪಂದಕ್ಕೆ ಸಹಿ

ಡಾ. ಪ್ರೀತಿ ಅದಾನಿ ಅಹಮದಾಬಾದ್‌ನಲ್ಲಿ ದಂತವೈದ್ಯೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ, ಅವರು ತಮ್ಮ ಪತಿ ಗೌತಮ್ ಅದಾನಿಯವರ ರಾಷ್ಟ್ರ ನಿರ್ಮಾಣದ ಮಾರ್ಗವನ್ನು ಅನುಸರಿಸಲು ನಿರ್ಧರಿಸಿದರು. ಹೀಗಾಗಿ ತಮ್ಮ ಜೀವನವನ್ನು ಸಾಮಾಜಿಕ ಸೇವೆಗೆ ಮುಡಿಪಾಗಿಟ್ಟರು. ಪ್ರೀತಿ ತಮ್ಮ ಭಾಷಣದಲ್ಲಿ, ‘ನಿಜವಾದ ಅಭಿವೃದ್ಧಿಯು ಮೂಲಸೌಕರ್ಯ ಅಥವಾ ವ್ಯವಹಾರದಲ್ಲಿ ಮಾತ್ರ ಅಡಗಿಲ್ಲ. ಶಾಲೆಗಳು, ಆಸ್ಪತ್ರೆಗಳು ಮತ್ತು ಜೀವನೋಪಾಯಗಳ ಸುಸ್ಥಿರ ಅಭಿವೃದ್ಧಿಯಲ್ಲಿ ಅಡಗಿದೆ ಎಂದು ಗೌತಮ್ ಅದಾನಿ ನಂಬುತ್ತಾರೆ’ ಎಂದು ಹೇಳಿದರು. ಈ ಕಲ್ಪನೆಯನ್ನು ಆಧರಿಸಿ, ಅದಾನಿ ಫೌಂಡೇಶನ್ ಅನ್ನು 1996ರಲ್ಲಿ ಸ್ಥಾಪಿಸಲಾಯಿತು.

ಇದನ್ನೂ ಓದಿ: ಒಂದೇ ಒಂದು ನಿಷೇಧವು ಭಾರತದ ಡಿಜಿಟಲ್ ಆರ್ಥಿಕತೆಯನ್ನೇ ಸ್ಥಗಿತಗೊಳಿಸಬಹುದು: ಗೌತಮ್ ಅದಾನಿ ಎಚ್ಚರಿಕೆಯ ಕರೆಗಂಟೆ

ಕೇವಲ ದೇಣಿಗೆ ನೀಡುವುದರಿಂದ ಬದಲಾವಣೆ ಆಗುವುದಿಲ್ಲ. ನಿಜವಾದ ಬದಲಾವಣೆ ಎಂದರೆ ನಾವು ನೀಡಿದ ದೇಣಿಗೆ ಅಗತ್ಯವಿರುವವರನ್ನು ತಲುಪುವುದು. ಸರ್ಕಾರ, ವ್ಯವಹಾರ ಮತ್ತು ಸಮಾಜ ಒಟ್ಟಾಗಿ ಸೇರಿದರೆ, ತಲೆಮಾರುಗಳ ಮೇಲೆ ಪರಿಣಾಮ ಬೀರುವ ಬದಲಾವಣೆಗಳನ್ನು ನಾವು ಸೃಷ್ಟಿಸಬಹುದು. ಬರಗಾಲದಲ್ಲೂ ನಾವು ಬೀಜ ಬಿತ್ತುವ ಪೀಳಿಗೆಯಾಗಬೇಕು, ಏಕೆಂದರೆ ಅದು ಮಳೆ ಬರುತ್ತದೆ ಎಂದು ನಂಬಿಕೆಯಿರುತ್ತದೆ. ಆ ಮಳೆ ಬಂದಾಗ, ಯಾರೋ ಭರವಸೆಯ ಬೀಜಗಳನ್ನು ಬಿತ್ತಿದ್ದಾರೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗುತ್ತದೆ ಎಂದರು.

ಅದಾನಿ ಫೌಂಡೇಶನ್‌:

ಅದಾನಿ ಫೌಂಡೇಶನ್ ಇಂದು ಭಾರತದ ಅತಿದೊಡ್ಡ ಸಾಮಾಜಿಕ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಸಂಸ್ಥೆ ಶಿಕ್ಷಣ, ಆರೋಗ್ಯ, ಪೋಷಣೆ, ಸುಸ್ಥಿರ ಉದ್ಯೋಗ, ಗ್ರಾಮೀಣ ಮೂಲಸೌಕರ್ಯ ಮತ್ತು ಹವಾಮಾನ ಬದಲಾವಣೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇಲ್ಲಿಯವರೆಗೆ, ಸಂಸ್ಥೆಯು 7000ಕ್ಕೂ ಹೆಚ್ಚು ಹಳ್ಳಿಗಳು ಮತ್ತು 96 ಲಕ್ಷ ಜನರನ್ನು ತಲುಪಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 10:10 pm, Tue, 9 September 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ