AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ಹೈವೇ ಹೀರೋಸ್: ಟ್ರಕ್ ಡ್ರೈವರ್​ಗಳ ಅಭ್ಯುದಯಕ್ಕೆ ವಿವಿಧ ಕಾರ್ಯಕ್ರಮಗಳು- ಸಚಿವ ಹರ್ಷ್ ಮಲ್ಹೋತ್ರಾ ಹೇಳಿಕೆ

TV9 Network and Sriram Group organize second edition of 'Highway Heroes': ಟಿವಿ9 ನೆಟ್ವರ್ಕ್, ಶ್ರೀರಾಮ್ ಗ್ರೂಪ್ ಆಯೋಜಿಸಿದ್ದ ಹೈವೇ ಹೀರೋಸ್ ಎರಡನೇ ಆವೃತ್ತಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹರ್ಷ್ ಮಲ್ಹೋತ್ರಾ ಮಾತನಾಡಿದರು. ಹೈವೇ ಹೀರೋಗಳಾದ ಟ್ರಕ್ ಡ್ರೈವರ್​ಗಳ ಘನತೆ ಹೆಚ್ಚಿಸುವ ಮತ್ತು ಅಂತರ್ಗತವಾದ ಸಾರಿಗೆ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ನಿರ್ಮಿಸುತ್ತಿದೆ ಎಂದರು.

ಟಿವಿ9 ಹೈವೇ ಹೀರೋಸ್: ಟ್ರಕ್ ಡ್ರೈವರ್​ಗಳ ಅಭ್ಯುದಯಕ್ಕೆ ವಿವಿಧ ಕಾರ್ಯಕ್ರಮಗಳು- ಸಚಿವ ಹರ್ಷ್ ಮಲ್ಹೋತ್ರಾ ಹೇಳಿಕೆ
ಹೈವೇ ಹೀರೋಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 15, 2025 | 12:02 PM

Share

ನವದೆಹಲಿ, ಜುಲೈ 15: ದೇಶದಲ್ಲಿ ಮತ್ತಷ್ಟು ಗೌರವಯುತವಾದ, ಸುರಕ್ಷಿತವಾದ ಮತ್ತು ಅಂತರ್ಗತವಾದ ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸಲು ಕೇಂದ್ರ ಸರ್ಕಾರ (Central govt) ಬದ್ಧವಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಮತ್ತು ಕಾರ್ಪೊರೇಟ್ ವ್ಯವಹಾರ ಖಾತೆಗಳ ರಾಜ್ಯ ಸಚಿವ ಹರ್ಷ್ ಮಲ್ಹೋತ್ರಾ (Harsh Malhotra) ಹೇಳಿದ್ದಾರೆ. ಇಲ್ಲಿ ನಿನ್ನೆ ಸೋಮವಾರ ಟಿವಿ9 ನೆಟ್ವರ್ಕ್ ಮತ್ತು ಶ್ರೀರಾಮ್ ಗ್ರೂಪ್ ಜಂಟಿಯಾಗಿ ಆಯೋಜಿಸಿದ್ದ ಎರಡನೇ ಆವೃತ್ತಿಯ ‘ಹೈವೇ ಹೀರೋಸ್’ (Highway Heroes) ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

‘ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕಳೆದೊಂದು ದಶಕದಲ್ಲಿ ಭಾರತದ ಇನ್​ಫ್ರಾಸ್ಟ್ರಕ್ಚರ್ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಮಾರ್ಗದರ್ಶನದಲ್ಲಿ 60,000 ಕಿಮೀ ಹೆದ್ದಾರಿಯನ್ನು ನಿರ್ಮಿಸಲಾಗಿದೆ. ಈ ಮೂಲಕ ರಾಷ್ಟ್ರೀಯ ಸಂಪರ್ಕತೆ (national connectivity) ಹಾಗೂ ಆರ್ಥಿಕ ಏಕೀಕರಣವನ್ನು (economic integration) ಹೆಚ್ಚಿಸಿದೆ’ ಎಂದು ಸಚಿವ ಹರ್ಷ್ ಮಲ್ಹೋತ್ರಾ ತಿಳಿಸಿದ್ದಾರೆ.

ಹೈವೇ ಹೀರೋಗಳೆನಿಸಿದ ಟ್ರಕ್ ಡ್ರೈವರ್​ಗಳ ಕಲ್ಯಾಣಕ್ಕೆ ಸರ್ಕಾರ ಕೈಗೊಂಡಿರುವ ಯೋಜನೆಗಳನ್ನು ಅವರು ವಿವರಿಸಿದ್ದಾರೆ.

ಹರ್ಷ್ ಮಲ್ಹೋತ್ರಾ ಮಾಡಿದ ಎಕ್ಸ್ ಪೋಸ್ಟ್

‘ಕೌಶಲ್ಯ ಅಭಿವೃದ್ಧಿ, ರೀಫ್ರೆಶರ್ ಪ್ರೋಗ್ರಾಮ್, ಆರೋಗ್ಯ ಮತ್ತು ಕಲ್ಯಾಣ ಯೋಜನೆಗಳು ಒಳಗೊಂಡಂತೆ, ನಮ್ಮ ಹೈವೇ ಹೀರೋಗಳ ಅಭ್ಯುದಯಕ್ಕಾಗಿ ಸರ್ಕಾರವು ಹಲವು ಪರಿವರ್ತನೀಯ ಉಪಕ್ರಮಗಳನ್ನು ಕೈಗೊಂಡಿದೆ. ರಸ್ತೆ ಅಪಘಾತಕ್ಕೊಳಗಾದವರಿಗೆ ಕ್ಯಾಷ್​ಲೆಸ್ ಟ್ರೀಟ್ಮೆಂಟ್, ಸಕಾಲಿಕ ಔಷಧ ಉಪಚಾರದ ವ್ಯವಸ್ಥೆ ಇತ್ಯಾದಿಯನ್ನೂ ಮಾಡಲಾಗಿದೆ’ ಎಂದು ಹರ್ಷ್ ಮಲ್ಹೋತ್ರಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಶೈಕ್ಷಣಿಕ ಸಾಧನೆ ಮಾಡಿದ ಬುಡಕಟ್ಟು ವಿದ್ಯಾರ್ಥಿಗಳಿಗೆ ರಾಷ್ಟ್ರಪತಿಯಿಂದ 62.40 ಲಕ್ಷ ರೂ. ಬಿಡುಗಡೆ

‘2028-29ರೊಳಗೆ ರಾಷ್ಟ್ರೀಯ ಹೆದ್ದಾರಿಗಳಾದ್ಯಂತ 700ಕ್ಕೂ ಅಧಿಕ ದಾರಿಬದಿ ಸೌಲಭ್ಯಗಳನ್ನು (WSA- Wayside Amenities) ನಿರ್ಮಿಸುತ್ತಿದ್ದೇವೆ. ಈ WSAಗಳಲ್ಲಿ ಪೆಟ್ರೋಲ್ ಬಂಕ್, ಇವಿ ಚಾರ್ಜಿಂಗ್ ಪಾಯಿಂಟ್, ಟಾಯ್ಲೆಟ್, ಕುಡಿಯುವ ನೀರು, ಪಾರ್ಕಿಂಗ್, ಹೋಟೆಲ್, ಡಾರ್ಮಿಟರಿ ಇತ್ಯಾದಿ ವ್ಯವಸ್ಥೆ ಇರುತ್ತವೆ. ನಮ್ಮ ಚಾಲಕರ ಜೀವನ ಗುಣಮಟ್ಟ ಮತ್ತು ಘನತೆಯನ್ನು ಇದು ಹೆಚ್ಚಿಸಲಿದ್ದೇವೆ’ ಎಂದು ಕೇಂದ್ರ ರಸ್ತೆ ಸಾರಿಗೆ ಖಾತೆ ರಾಜ್ಯ ಸಚಿವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:01 pm, Tue, 15 July 25

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?