ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್ ಖಾತೆ ಹ್ಯಾಕ್; ಅಕೌಂಟ್ ಹೆಸರನ್ನು ಎಲೋನ್ ಮಸ್ಕ್ ಎಂದು ಬದಲಿಸಿದ ಹ್ಯಾಕರ್ಸ್ !
ಕೆಲವೇ ಹೊತ್ತಿನಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತನ್ನ ಟ್ವಿಟರ್ ಖಾತೆಯ ಮೇಲೆ ನಿಯಂತ್ರಣ ಹೊಂದಿದೆ. ಹ್ಯಾಕರ್ಸ್ಗಳ ಕೈಯಿಂದ ವಾಪಸ್ ಅಕೌಂಟ್ನ್ನು ಪಡೆದು, ಪ್ರೊಫೈಲ್ನ್ನು ಬದಲಿಸಿಕೊಂಡಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್ ಖಾತೆ(Twitter Account Of I&B Ministry)ಯನ್ನು ಇಂದು ಹ್ಯಾಕ್ ಮಾಡಲಾಗಿತ್ತು. ಟ್ವಿಟರ್ ಅಕೌಂಟ್ ಹ್ಯಾಕ್ ಮಾಡಿದ್ದ ಹ್ಯಾಕರ್ಸ್ಗಳು, ಖಾತೆಯ ಹೆಸರನ್ನು ಎಲೋನ್ ಮಸ್ಕ್ (Elon Musk) ಎಂದು ಬದಲಿಸಿದ್ದರು. ಹಾಗೇ, ಗ್ರೇಟ್ ಜಾಬ್ (ಅದ್ಭುತ ಕೆಲಸ) ಎಂದೂ ಟ್ವೀಟ್ ಮಾಡಿದ್ದರು. ಇನ್ನು ಒಂದಿಷ್ಟು ಲಿಂಕ್ಗಳನ್ನೆಲ್ಲ ಪೋಸ್ಟ್ ಮಾಡಿದ್ದರು. ಆದರೆ ಕೆಲವೇ ಹೊತ್ತಿನಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತನ್ನ ಟ್ವಿಟರ್ ಖಾತೆಯ ಮೇಲೆ ನಿಯಂತ್ರಣ ಹೊಂದಿದೆ. ಹ್ಯಾಕರ್ಸ್ಗಳ ಕೈಯಿಂದ ವಾಪಸ್ ಅಕೌಂಟ್ನ್ನು ಪಡೆದು, ಪ್ರೊಫೈಲ್ನ್ನು ಬದಲಿಸಿಕೊಂಡಿದೆ. ಅಷ್ಟೇ ಅಲ್ಲ ಹ್ಯಾಕರ್ಸ್ ಮಾಡಿದ್ದ ಟ್ವೀಟ್ಗಳನ್ನೂ ಡಿಲೀಟ್ ಮಾಡಿದೆ. ಸದ್ಯ ಸಚಿವಾಲಯದ ಟ್ವಿಟರ್ ಖಾತೆಯನ್ನೀಗ ಭದ್ರಪಡಿಸಲಾಗಿದೆ.
ಸರಿಯಾಗಿ ಒಂದು ತಿಂಗಳ ಹಿಂದೆ, ಅಂದರೆ 2021ರ ಡಿಸೆಂಬರ್ 12ರಂದು ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಟ್ವಿಟರ್ ಖಾತೆ ಹ್ಯಾಕ್ ಆಗಿತ್ತು. ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿದ್ದ ಕಿಡಿಗೇಡಿಗಳು ಅದರಲ್ಲಿ ಬಿಟ್ಕಾಯಿನ್ ಸಂಬಂಧಪಟ್ಟ ಟ್ವೀಟ್ ಗಳನ್ನು ಮಾಡಿದ್ದರು. ಬಿಟ್ಕಾಯಿನ್ಗಳನ್ನು ಸರ್ಕಾರವೇ ಅಧಿಕೃತವಾಗಿ ಖರೀದಿ ಮಾಡಿದೆ ಎಂದೂ ಹೇಳಿದ್ದರು. ನಂತರ ಕೆಲವೇ ಹೊತ್ತಲ್ಲಿ ಪ್ರಧಾನಿ ಟ್ವಿಟರ್ ಖಾತೆ ಭದ್ರಗೊಂಡಿತ್ತು. ಬಳಿಕ ಟ್ವೀಟ್ ಮಾಡಿ ಸ್ಪಷ್ಟನೆ ಕೊಟ್ಟಿದ್ದ ಪ್ರಧಾನಮಂತ್ರಿ ಕಾರ್ಯಾಲಯ, ನರೇಂದ್ರ ಮೋದಿಯವರ ವೈಯಕ್ತಿಕ ಟ್ವಿಟರ್ ಖಾತೆ ಕೆಲಕಾಲ್ ಹ್ಯಾಕ್ ಆಗಿತ್ತು. ಆ ಸಮಯದಲ್ಲಿ ಮಾಡಲಾದ ಟ್ವೀಟ್ಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಹೇಳಿತ್ತು. ನಂತರ ಟ್ವೀಟ್ಗಳನ್ನು ಡಿಲೀಟ್ ಕೂಡ ಮಾಡಲಾಗಿತ್ತು. ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್ (ICWA), ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (IMA) ಮತ್ತು ಮನ್ ದೇಶಿ ಮಹಿಳಾ ಬ್ಯಾಂಕ್ (ಮೈಕ್ರೋ ಫೈನಾನ್ಸ್ ಬ್ಯಾಂಕ್) ಟ್ವಿಟರ್ ಖಾತೆಗಳನ್ನೂ ಹ್ಯಾಕ್ ಮಾಡಲಾಗಿತ್ತು. ಆಗಲೂ ಕೂಡ ಹ್ಯಾಕರ್ಸ್ ಟ್ವಿಟರ್ ಖಾತೆಯ ಹೆಸರನ್ನು ಎಲೋನ್ ಮಸ್ಕ್ ಎಂದೇ ಬದಲಿಸಿದ್ದರು.
ಇಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್ ಖಾತೆ ಹ್ಯಾಕ್ ಆದಾಗ ಮತ್ತು ಜನವರಿ 3ರಂದು ಹ್ಯಾಕ್ ಆಗಿದ್ದ ಟ್ವಿಟರ್ ಅಕೌಂಟ್ಗಳಲ್ಲಿ ಅಕ್ಷರಗಳ ಫಾಂಟ್ ಒಂದೇ ಇದೆ. ಹಾಗಾಗಿ ಈ ಖಾತೆಗಳನ್ನು ಹ್ಯಾಕ್ ಮಾಡಿದವರು ಒಬ್ಬರೇ ಇರಬಹುದು ಎಂದು ಅಂದಾಜಿಸಲಾಗಿದೆ. ಇಂದು ಟ್ವಿಟರ್ ಸುರಕ್ಷಿತವಾದ ಬೆನ್ನಲ್ಲೇ ಟ್ವೀಟ್ ಮಾಡಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಇದೀಗ ಟ್ವಿಟರ್ ಖಾತೆ ಸುರಕ್ಷಿತವಾಗಿದೆ ಎಂದು ಮಾಹಿತಿ ನೀಡಿದೆ.
The account @Mib_india has been restored. This is for the information of all the followers.
— Ministry of Information and Broadcasting (@MIB_India) January 12, 2022
Published On - 10:44 am, Wed, 12 January 22