AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಲ್ಕತ್ತಾದಲ್ಲಿ ಶೇ 80 ಕೊವಿಡ್ ಪ್ರಕರಣಗಳಲ್ಲಿ BA.2 ರೂಪಾಂತರಿ ಪತ್ತೆ, ಆತಂಕ ವ್ಯಕ್ತಪಡಿಸಿದ ವೈದ್ಯರು

ಸಾಮಾನ್ಯವಾಗಿ 'ಸ್ಟೆಲ್ತ್ ಆವೃತ್ತಿ' ಎಂದು ಕರೆಯಲ್ಪಡುವ BA.2 ರೂಪಾಂತರಿ ಅನ್ನು ಜೀನೋಮ್ ಸೀಕ್ವೆನ್ಸಿಂಗ್ ಮೂಲಕ ಮಾತ್ರ ಕಂಡುಹಿಡಿಯಬಹುದು ಮತ್ತು ಒಮಿಕ್ರಾನ್ ರೂಪಾಂತರದ ಉಪ-ವಂಶಾವಳಿಯಲ್ಲಿ ಇದೂ ಒಂದು. ಇದನ್ನು ಈಗ ಮೂರು ಉಪ-ವಿಧಗಳಾಗಿ ವಿಂಗಡಿಸಲಾಗಿದೆ ಅವುಗಳೆಂದರೆ BA.1, BA.2 , ಮತ್ತು BA.3.

ಕೊಲ್ಕತ್ತಾದಲ್ಲಿ ಶೇ 80 ಕೊವಿಡ್ ಪ್ರಕರಣಗಳಲ್ಲಿ BA.2 ರೂಪಾಂತರಿ ಪತ್ತೆ, ಆತಂಕ ವ್ಯಕ್ತಪಡಿಸಿದ ವೈದ್ಯರು
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jan 12, 2022 | 11:45 AM

Share

ಕೊಲ್ಕತ್ತಾ: ಕೊಲ್ಕತ್ತಾದ ಪ್ರಯೋಗಾಲಯಗಳಿಂದ ಜೀನೋಮ್ ಅನುಕ್ರಮಕ್ಕಾಗಿ (genome sequencing )ಕಳುಹಿಸಲಾದ ಕೊವಿಡ್ -19 (Covid-19) ಪ್ರಕರಣಗಳಲ್ಲಿ ಸುಮಾರು 80 ಪ್ರತಿಶತದಷ್ಟು ಒಮಿಕ್ರಾನ್ ರೂಪಾಂತರದ (Omicron variant)  ಉಪ-ವಂಶಾವಳಿಯ BA.2 ರೂಪಾಂತರಿ (BA.2 Variant) ಪತ್ತೆಯಾಗಿದೆ. ದೇಶದಲ್ಲಿ ಕೊರೊನಾ ಉಲ್ಬಣವಾಗುತ್ತಿರುವ ಹೊತ್ತಲ್ಲಿ ಇದು ಹೆಚ್ಚಿನ ಆತಂಕವನ್ನುಂಟು ಮಾಡಿದೆ. ಮಾದರಿಗಳನ್ನು ಡಿಸೆಂಬರ್ 22 ರಿಂದ 28 ರ ನಡುವೆ ಜೀನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗಿದೆ ಮತ್ತು ಅವುಗಳಲ್ಲಿ ಸುಮಾರು 80 ಪ್ರತಿಶತವು 30 ಕ್ಕಿಂತ ಕಡಿಮೆ CT ಮಟ್ಟದೊಂದಿಗೆ BA.2 ಪಾಸಿಟಿವ್ ಕಂಡುಬಂದಿದೆ. ಇದು ಹೆಚ್ಚಿನ ವೈರಲ್ ಪ್ರಮಾಣವನ್ನು ಸೂಚಿಸುತ್ತದೆ. ಒಂದು ಪ್ರಯೋಗಾಲಯದಿಂದ ಕಳುಹಿಸಲಾದ ಮಾದರಿಗಳಲ್ಲಿ 34 ಕೊವಿಡ್-ಪಾಸಿಟಿವ್ ಮಾದರಿಗಳು BA.2 ನೊಂದಿಗೆ ಕಂಡುಬಂದಿವೆ. ಒಂದು ಮಾದರಿಯು ಒಮಿಕ್ರಾನ್ ಬಿಎ.1 ಮತ್ತು ಎಂಟು ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ಆಗಿದೆ. ಮತ್ತೊಂದು ಪ್ರಯೋಗಾಲಯದಿಂದ ಕಳುಹಿಸಲಾದ 17 ಕೊವಿಡ್-ಪಾಸಿಟಿವ್ ಮಾದರಿಗಳಲ್ಲಿ, 14 ಒಮಿಕ್ರಾನ್ ಮತ್ತು BA.2 ವಂಶಕ್ಕೆ ಸೇರಿದವು ಮತ್ತು ಉಳಿದವು ಡೆಲ್ಟಾ. ಮೂರನೇ ಪ್ರಯೋಗಾಲಯವು ಕಳುಹಿಸಿದ 50 ಮಾದರಿಗಳ ಮೇಲಿನ ಸಂಶೋಧನೆಗಳು 35 ಪ್ರಕರಣಗಳಲ್ಲಿ BA.2 ಇದೆ ಎಂದು ತೋರಿಸಿದೆ.

ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಬಯಾಲಜಿಯ ಇಮ್ಯುನೊಲಾಜಿಸ್ಟ್ ದೀಪ್ಯಮನ್ ಗಂಗೂಲಿ, ಜಿನೋಮ್ ಸೀಕ್ವೆನ್ಸಿಂಗ್‌ನ ಸಂಶೋಧನೆಗಳು BA.2 ಕೊಲ್ಕತ್ತಾ ಮತ್ತು ಪಕ್ಕದ ಪ್ರದೇಶಗಳಲ್ಲಿ ಸಮುದಾಯದಲ್ಲಿ ಪ್ರಬಲವಾಗಿ ಹರಡುತ್ತಿರುವ ಉಪ-ವಂಶವನ್ನು ಸೂಚಿಸುತ್ತವೆ ಎಂದು ಹೇಳಿದರು.

“ಬಿಎ.2 ಸ್ಥಳೀಯ ಕ್ಲಸ್ಟರ್ ಸೋಂಕನ್ನು ಉಂಟುಮಾಡುವ ಸಾಧ್ಯತೆಯಿದೆ. ಈ ಉಪ-ವಂಶವು ಅದರ ಭಿನ್ನವಾಗಿದ್ದರೂ ಸಹ, ತಳೀಯವಾಗಿ ಇದು ಒಂದೇ ಕುಟುಂಬಕ್ಕೆ ಸೇರಿದೆ ಮತ್ತು ಆದ್ದರಿಂದ ರೋಗದ ಕ್ಲಿನಿಕಲ್ ಕೋರ್ಸ್‌ನಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸವಿಲ್ಲ ಎಂದು ದಿಪ್ಯಮನ್ ಗಂಗೂಲಿ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ಉಲ್ಲೇಖಿಸಿದೆ.

ಶೆಲ್ಲಿ ಶರ್ಮಾ ಗಂಗೂಲಿ, AMRI ಧಾಕುರಿಯಾ ಮೈಕ್ರೋಬಯಾಲಜಿಸ್ಟ್, ಸುಮಾರು ಶೇ 70 ಮಾದರಿಗಳು ಒಮಿಕ್ರಾನ್ ಗೆ ಧನಾತ್ಮಕವಾಗಿ ಪರೀಕ್ಷಿಸಲ್ಪಟ್ಟಿವೆ, ಹೆಚ್ಚಾಗಿ BA.2 ವಂಶಾವಳಿಯಲ್ಲಿದ್ದು, ಇದು ಒಂದು ವಾರದ ಹಿಂದೆ ಆಗಿತ್ತು,. ಆದ್ದರಿಂದ ಒಮಿಕ್ರಾನ್ ಉಪಸ್ಥಿತಿಯು ಈಗ ಹಲವಾರು ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ. ಡಿಸೆಂಬರ್‌ನಲ್ಲಿ ಒಮಿಕ್ರಾನ್‌ನ ಸಮುದಾಯ ಪ್ರಸರಣವನ್ನು ಪತ್ತೆಹಚ್ಚಲು ಜೀನೋಮ್-ಸೀಕ್ವೆನ್ಸಿಂಗ್‌ಗಾಗಿ 30 CT ಮೌಲ್ಯ 30ರ ಅಡಿಯಲ್ಲಿರುವ ಎಲ್ಲಾ ಸಕಾರಾತ್ಮಕ ಮಾದರಿಗಳನ್ನು ಕಳುಹಿಸಲು ಸರ್ಕಾರ ನಿರ್ಧರಿಸಿತ್ತು. ಆದಾಗ್ಯೂ ಒಂದು ವಾರದ ನಂತರ ಒಮಿಕ್ರಾನ್‌ನ ಸಮುದಾಯ ಪ್ರಸರಣ ಪ್ರಾರಂಭವಾಗಿದೆ ಎಂದು ಸ್ಪಷ್ಟವಾದಾಗ ನಿರ್ಧಾರವನ್ನು ಬದಲಾಯಿಸಲಾಯಿತು.

ಪ್ರಸ್ತುತ, ಆರೋಗ್ಯ ಇಲಾಖೆಯು ವಿದೇಶಿ ಪ್ರಯಾಣದ ಇತಿಹಾಸ ಹೊಂದಿರುವ ಮಾದರಿಗಳನ್ನು ಮಾತ್ರ ಕಳುಹಿಸಲು ಲ್ಯಾಬ್‌ಗಳಿಗೆ ಕೇಳಿದೆ. ಆರ್‌ಎನ್ ಟ್ಯಾಗೋರ್ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್ ಮೈಕ್ರೋಬಯಾಲಜಿಸ್ಟ್ ಸ್ವಾತಿಲೇಖಾ ಬ್ಯಾನರ್ಜಿ, ಡೆಲ್ಟಾವನ್ನು ಒಮಿಕ್ರಾನ್ ಬದಲಿಸುತ್ತಿದೆ ಎಂದು ದೃಢಪಡಿಸಿದರು, BA.2 ಉಪವಿಧವು ಹೆಚ್ಚು ಪ್ರಚಲಿತದಲ್ಲಿದೆ ಎಂಬ ಸೂಚನೆಯಿದ್ದರೂ, ತೀರ್ಮಾನವನ್ನು ತೆಗೆದುಕೊಳ್ಳಲು ಅವರಿಗೆ ದೊಡ್ಡ ಮಾದರಿ ಗಾತ್ರದ ಅಗತ್ಯವಿದೆ ಎಂದು ಅವರು ಹೇಳಿದರು.

ಸಾಮಾನ್ಯವಾಗಿ ‘ಸ್ಟೆಲ್ತ್ ಆವೃತ್ತಿ’ ಎಂದು ಕರೆಯಲ್ಪಡುವ BA.2 ರೂಪಾಂತರಿ ಅನ್ನು ಜೀನೋಮ್ ಸೀಕ್ವೆನ್ಸಿಂಗ್ ಮೂಲಕ ಮಾತ್ರ ಕಂಡುಹಿಡಿಯಬಹುದು ಮತ್ತು ಒಮಿಕ್ರಾನ್ ರೂಪಾಂತರದ ಉಪ-ವಂಶಾವಳಿಯಲ್ಲಿ ಇದೂ ಒಂದು. ಇದನ್ನು ಈಗ ಮೂರು ಉಪ-ವಿಧಗಳಾಗಿ ವಿಂಗಡಿಸಲಾಗಿದೆ ಅವುಗಳೆಂದರೆ BA.1, BA.2 , ಮತ್ತು BA.3.

ವರದಿಗಳ ಪ್ರಕಾರ ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ BA.1 ಪ್ರಬಲವಾಗಿ ಪ್ರಸಾರವಾಗುತ್ತಿರುವಾಗ, ಡೆಲ್ಟಾ ರೂಪಾಂತರವನ್ನು ವೇಗವಾಗಿ ಬದಲಾಯಿಸುತ್ತಿದೆ. ಉಪ-ವಿಧದ BA.3 ಭಾರತದಲ್ಲಿ ಇನ್ನೂ ಪತ್ತೆಯಾಗಿಲ್ಲ. ಇತ್ತೀಚೆಗೆ ವಿದೇಶಕ್ಕೆ ಪ್ರಯಾಣಿಸಿದವರಲ್ಲಿ BA.2 ಪತ್ತೆಯಾಗಿದೆ ಆದರೆ BA.1 ಸೋಂಕಿತರು ಯಾವುದೇ ಪ್ರಯಾಣದ ಇತಿಹಾಸವನ್ನು ಹೊಂದಿಲ್ಲ.

ಕೊವಿಡ್‌ನ ಒಮಿಕ್ರಾನ್ ರೂಪಾಂತರವು ಹದಿನೈದು ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಕೊಲ್ಕತ್ತಾದ ಜನಸಂಖ್ಯೆಯಲ್ಲಿ ಡೆಲ್ಟಾ ರೂಪಾಂತರಿ ಅನ್ನು ಮೀರಿಸಿದೆ. ಡಿಸೆಂಬರ್ ಕೊನೆಯ ವಾರದಲ್ಲಿ 10 ಕೊವಿಡ್ -19 ಮಾದರಿಗಳಲ್ಲಿ ಏಳನ್ನು ಸಂಗ್ರಹಿಸಲಾಗಿದೆ ಮತ್ತು ಜೀನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗಿದೆ. ಕಲ್ಯಾಣಿಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬಯೋಮೆಡಿಕಲ್ ಜೀನೋಮಿಕ್ಸ್ (NIBMG) ಪ್ರಕಾರ ಇದು ‘ಕಾಳಜಿಯ ರೂಪಾಂತರಿ’ ಆಗಿದೆ.

ಇದನ್ನೂ ಓದಿ: ಕೊವಿಡ್​ ಪರೀಕ್ಷಾ ವರದಿ ಪರಿಶೀಲನೆಗೆ​ ಇಲ್ಲಿದೆ ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್

ಇದನ್ನೂ ಓದಿ: Coronavirus cases in India: ದೇಶದಲ್ಲಿ ಒಂದೇ ದಿನ 1,94,720 ಹೊಸ ಕೊವಿಡ್ ಪ್ರಕರಣ ಪತ್ತೆ, 9.5 ಲಕ್ಷ ಗಡಿ ದಾಟಿದ ಸಕ್ರಿಯ ಪ್ರಕರಣ