MG Ramachandran: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಪ್ರತಿಮೆ ವಿರೂಪಗೊಳಿಸಿದ ದುಷ್ಕರ್ಮಿಗಳು
ಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಸಂಸ್ಥಾಪಕ ಎಂಜಿ ರಾಮಚಂದ್ರನ್ ಅವರ ಪ್ರತಿಮೆಯನ್ನು ಮಂಗಳವಾರ ಚೆನ್ನೈನ ಟಿ ನಗರ ಪ್ರದೇಶದ ಜಿಎನ್ ಚೆಟ್ಟಿ ರಸ್ತೆಯಲ್ಲಿ ವಿರೂಪಗೊಳಿಸಲಾಗಿದೆ.
ತಮಿಳುನಾಡು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಸಂಸ್ಥಾಪಕ ಎಂಜಿ ರಾಮಚಂದ್ರನ್ ಅವರ ಪ್ರತಿಮೆಯನ್ನು ಮಂಗಳವಾರ ಚೆನ್ನೈನ ಟಿ ನಗರ ಪ್ರದೇಶದ ಜಿಎನ್ ಚೆಟ್ಟಿ ರಸ್ತೆಯಲ್ಲಿ ವಿರೂಪಗೊಳಿಸಲಾಗಿದೆ. ಸೆಪ್ಟೆಂಬರ್ 27ರ ಮಂಗಳವಾರ ಬೆಳಗ್ಗೆ ಪ್ರತಿಮೆಯ ಮೂಗು ಮುರಿದಿರುವುದು ಕಂಡು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ಪ್ರತಿಮೆಯು ಚೆನ್ನೈ ನಗರದ ಅತ್ಯಂತ ಜನಪ್ರಿಯ ಪ್ರದೇಶದಲ್ಲಿದೆ.
ಘಟನೆಯ ಬಗ್ಗೆ ಪೊಲೀಸರು ತಕ್ಷಣ ಎಚ್ಚೆತ್ತು. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿ ತನಿಖೆ ಆರಂಭಿಸಿದ್ದಾರೆ. ತನಿಖಾಧಿಕಾರಿಗಳು ದುಷ್ಕರ್ಮಿಗಳನ್ನು ಗುರುತಿಸಲು ಮತ್ತು ಬಂಧಿಸಲು ಪ್ರದೇಶದಿಂದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದಾರೆ.
ಈ ಮಧ್ಯೆ ಸ್ಥಳಕ್ಕಾಗಮಿಸಿದ ಓ ಪನೀರ್‌ಸೆಲ್ವಂ ಅವರು ಸಾಮಾಜಿಕ ಜಾಲತಾಣದಲ್ಲಿ ಹರಿಹಾಯ್ದು, ಈ ಕೃತ್ಯಕ್ಕೆ ಕಾರಣರಾದವರನ್ನು ಗುರುತಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಹಾನಿಗೊಳಗಾದ ಪ್ರತಿಮೆಯನ್ನು ಸರಿಪಡಿಸಬೇಕು ಮತ್ತು ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾನು ತಮಿಳುನಾಡು ಸರ್ಕಾರವನ್ನು ಕೋರುತ್ತೇನೆ ಎಂದಿದ್ದಾರೆ.
ಅಧಿಕಾರಿಗಳು ಪ್ರತಿಮೆಯನ್ನು ಬಿಳಿ ಬಟ್ಟೆಯಿಂದ ಮುಚ್ಚಿದ್ದಾರೆ ಮತ್ತು ಅದನ್ನು ಸರಿಪಡಿಸಲು ಕ್ರಮಗಳನ್ನು ಪ್ರಾರಂಭಿಸಿದ್ದಾರೆ. ಸೋಮವಾರ, ದುಷ್ಕರ್ಮಿಗಳು ಡಿಎಂಕೆ ಸಂಸ್ಥಾಪಕ ಅಣ್ಣಾದೊರೈ ಅವರ ಪ್ರತಿಮೆಯ ಕುತ್ತಿಗೆಗೆ ಚಪ್ಪಲಿ ಹಾರವನ್ನು ಎಸೆದು ಅದರ ಮೇಲೆ ಕಪ್ಪು ಮತ್ತು ಕೆಂಪು ಚುಕ್ಕೆಗಳಿರುವ ರಾಜಾ ಅವರ ಚಿತ್ರವನ್ನು ಎಸೆದು ಅವಮಾನ ಮಾಡಿದ್ದಾರೆ.
Published On - 5:40 pm, Tue, 27 September 22